Advertisement

ಕೋವಿಡ್ ಲಸಿಕೆ ನೀಡಿದ್ದಕ್ಕೆ ಭಾರತಕ್ಕೆ ಬ್ರೆಜಿಲ್‌, ವಿಶ್ವಸಂಸ್ಥೆ ಅಭಿನಂದನೆ

09:17 PM Jan 23, 2021 | Team Udayavani |

ನವದೆಹಲಿ: ಕೊರೊನಾ ವಿರುದ್ಧ ಹೋರಾಟದಲ್ಲಿ ಭಾರತದ ಪಾತ್ರ ಮಹತ್ವದ್ದು. ಇತರೆ ರಾಷ್ಟ್ರಗಳಿಗೆ ಲಸಿಕೆ ಪೂರೈಸುವುದರಲ್ಲೂ ಭಾರತ ಪ್ರಮುಖ ಪಾತ್ರವಹಿಸಿದೆ. ಈ ಕಾರ್ಯಕ್ಕಾಗಿ ಬ್ರೆಜಿಲ್‌ ಅಧ್ಯಕ್ಷ ಜೇರ್‌ ಬೊಲ್ಸೊನಾರೊ, ವಿಶ್ವ ಆರೋಗ್ಯ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಟೆಡ್ರೊಸ್‌ ಅಧಾನಾಮ್‌ ಘೆಬ್ರೆಯೆಸಸ್‌ ಮುಕ್ತಕಂಠದಿಂದ ಅಭಿನಂದನೆ ಸಲ್ಲಿಸಿದ್ದಾರೆ.

Advertisement

ಕೊರೊನಾದಿಂದ ಗರಿಷ್ಠ ಪೀಡನೆಗೊಳಗಾಗಿರುವ ಬ್ರೆಜಿಲ್‌ಗೆ ಭಾರತ 20 ಲಕ್ಷ ಲಸಿಕೆಗಳನ್ನು ಕಳುಹಿಸಿಕೊಟ್ಟಿದೆ. ಇದಕ್ಕೆ ಬ್ರೆಜಿಲ್‌ ಅಧ್ಯಕ್ಷರು ಕೃತಜ್ಞತೆ ಸಲ್ಲಿಸಿರುವ ರೀತಿ ವಿಶೇಷವಾಗಿದೆ. ರಾಮಾಯಣದಲ್ಲಿ ಯುದ್ಧ ನಡೆಯುತ್ತಿದ್ದಾಗ, ಹನುಮಂತ ಓಷಧ ಪರ್ವತಕ್ಕೆ ತೆರಳಿ, ಅಲ್ಲಿಂದ ಸಂಜೀವಿನಿ ಪರ್ವತವನ್ನು ಹೊತ್ತು ಲಂಕೆಗೆ ತೆರಳಿ ಲಕ್ಷ್ಮಣನ ಜೀವ ಉಳಿಸುತ್ತಾನೆ. ಆ ಚಿತ್ರವನ್ನು ಟ್ವೀಟ್‌ ಮಾಡಿರುವ ಬೊಲ್ಸೊನಾರೊ, “ಧನ್ಯವಾದ ಭಾರತ’ ಎಂದಿದ್ದಾರೆ. ಭಾರತದಂತಹ ಸ್ನೇಹಿತ ನಮ್ಮ ಜೊತೆಗಿರುವುದು ಬಹಳ ಗೌರವದ ವಿಷಯ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಕೋವಿಡ್ ಹಿನ್ನೆಲೆ: ಬಜೆಟ್‌ ಗಾತ್ರ ತಗ್ಗಿಸುವುದು ಅನಿವಾರ್ಯ: ಸಿಎಂ

ಭಾರತ ತನ್ನ ನೆರೆಯ ರಾಷ್ಟ್ರಗಳಾದ ನೇಪಾಳ, ಭೂತಾನ್‌, ಬಾಂಗ್ಲಾ, ಮಾಲ್ಡೀವ್ಸ್‌ಗಳಿಗೆ ಉಚಿತವಾಗಿ 32 ಲಕ್ಷ ಲಸಿಕೆ ಕಳುಹಿಸಿಕೊಟ್ಟಿದೆ. ದ.ಆಫ್ರಿಕಾ, ಮೊರೊಕ್ಕೊಗಳಿಗೂ ಕೋವಿಶೀಲ್ಡ್‌ ಅನ್ನು ತಲುಪಿಸಿದೆ. ಇದನ್ನು ಪ್ರಶಂಸಿಸಿರುವ ವಿಶ್ವ ಆರೋಗ್ಯ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಟೆಡ್ರೊಸ್‌, ಭಾರತ ಮತ್ತು ಪ್ರಧಾನಿ ಮೋದಿಗೆ ಧನ್ಯವಾದಗಳು. ನಾವೆಲ್ಲ ಒಗ್ಗೂಡಿ ಹೋರಾಡಿದರೆ ಮಾತ್ರ ಕೊರೊನಾ ವಿರುದ್ಧ ಗೆಲ್ಲಲು ಸಾಧ್ಯ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next