Advertisement

ತುಮಕೂರು ಜಿಲ್ಲೆಯಲ್ಲಿ ಕೋವಿಡ್ ಹೆಚ್ಚಳ : ಸಿಎಂ ಭೇಟಿ-ಪರಿಶೀಲನೆ

01:47 PM May 28, 2021 | Team Udayavani |

ತುಮಕೂರು : ಜಿಲ್ಲೆಯಲ್ಲಿ ಕೋವಿಡ್ ಹೆಚ್ಚಳದ ಬಗ್ಗೆ ಮಾಧುಸ್ವಾಮಿ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಇಂದು (ಶುಕ್ರವಾರ) ತುಮಕೂರಿಗೆ ಭೇಟಿ ನೀಡಿ ಪರಿಶೀಲನಾ ಸಭೆ ನಡೆಸಿದ್ದಾರೆ.

Advertisement

ಜಿಲ್ಲೆಯಲ್ಲಿ ಸಾವಿನ ಪ್ರಮಾಣದ ಬಗ್ಗೆ ಸಿಎಂಗೆ ಮಾಧುಸ್ವಾಮಿ ಮಾಹಿತಿ ನೀಡಿದ್ದಾರೆ. ಏಪ್ರಿಲ್-ಮೇ ತಿಂಗಳಲ್ಲಿ ಒಟ್ಟು 445 ಸಾವು ಆಗಿದೆ. ಸಾವಿನ‌ ಪ್ರಮಾಣ 0.66% ಇದೆ. ಏಪ್ರಿಲ್ ನಲ್ಲಿ 131 ಸಾವಾಗಿದೆ. ಮೇ ನಲ್ಲಿ 314 ಸಾವಾಗಿದೆ. ಆಕ್ಸಿಜನ್ ಸಮಸ್ಯೆ, ರೋಗಿಗಳು ತಡವಾಗಿ ಬಂದು ಆಸ್ಪತ್ರೆಗೆ ದಾಖಲಾಗಿದ್ದು ಸಾವಿನ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು, ಸಿಬ್ಬಂದಿಗಳ ಕೊರತೆ ಇದೆ. ಕೇವಲ ಒಬ್ಬೇ ಒಬ್ಬ ವೈದ್ಯ ಚಿಕ್ಕನಾಯಕನಹಳ್ಳಿ, ಹುಳಿಯಾರು ಆಸ್ಪತ್ರೆಯಲ್ಲಿ ಕೆಲಸ ಮಾಡ್ತಿದ್ದಾರೆ . 300-400 ಜನ ರೋಗಿಗಳನ್ನು ವೈದ್ಯರು ನೋಡ್ತಿದ್ದಾರೆ. ಇದು ನಮಗೆ ಸಮಸ್ಯೆ ಆಗಿದೆ. ಇದನ್ನ ಸರಿ ಪಡಿಸಬೇಕು ಎಂದು ಮಾಧುಸ್ವಾಮಿ ಸಿಎಂಗೆ ಮನವಿ ಮಾಡಿದ್ದರು.

ಇದೇ ವಿಚಾರವಾಗಿ ಬಿಎಸ್.ಯಡಿಯೂರಪ್ಪ ಸುದ್ದಿಗೋಷ್ಠಿ ನಡೆಸಿದ್ದು, ಇಡೀ ರಾಜ್ಯದಲ್ಲಿ ಹೆಚ್ಚು ಕೋವಿಡ್ ಕೇಸ್ ಇದ್ದ ತುಮಕೂರಿಗೆ ಬಂದು ಸಮಾಲೋಚನೆ ಮಾಡಿದ್ದೇನೆ. ಕೋವಿಡ್ ತಡೆಯೋದ್ರಲ್ಲಿ ಇಲ್ಲಿ ವಿಶೇಷ ಪ್ರಯತ್ನ ಮಾಡಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಎರಡನೇ ಅಲೆಯಲ್ಲಿ 0.66% ಮರಣ ಪ್ರಮಾಣ ಇದೆ. ಪಾಸಿಟೀವ್ ರೇಟನ್ನ ಏನಾದ್ರೂ ಮಾಡಿ 10% ಒಳಗೆ ಇಳಿಸಬೇಕಿದೆ. ಜಿಲ್ಲೆಗೆ 23 kl ಆಕ್ಸಿಜನ್ ಪೂರೈಸಲಾಗಿದೆ. ವಾರ್ ರೂಂ, ನೋಡಲ್ ಅಧಿಕಾರಿಗಳನ್ನ ನೇಮಿಸಲಾಗಿದೆ. ಯಾವುದೇ ಕಾರಣಕ್ಕೂ ಅಕ್ಸಿಜನ್ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗಿದೆ ಎಂದರು.

ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಸೋಂಕು ನಿಯಂತ್ರಣವಾಗುತ್ತಿದೆ. ಸಭೆಯಲ್ಲಿ ಅನೇಕ ಪ್ರಸ್ತಾಪಗಳನ್ನ ಮಾಧುಸ್ವಾಮಿ ಅವರು ಮಾಡಿದ್ದಾರೆ. ಏನೇನು ಸಾಧ್ಯವೋ ಅದನೆಲ್ಲಾ ಪುರೈಸಲಾಗುವುದು ಎಂದು ತಿಳಿಸಿದರು.

Advertisement

ಸಿದ್ದಗಂಗಾ ಮಠದ‌ ಕೋವಿಡ್ ಕೇರ್ ಗೆ ಸಿಎಂ ಭೇಟಿ

ಕೋವಿಡ್ ಪರಿಶೀಲನಾ ಸಭೆ ಬಳಿಕ ಕೋವಿಡ್ ಸೆಂಟರ್ ಗೆ ಸಿಎಂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿದ್ದಗಂಗಾ ಮಠದ ಯಾತ್ರಿ ನಿವಾಸ್ ನಲ್ಲಿ ಮಾಡಿರೋ ಕೋವಿಡ್ ಕೇರ್ ಸೆಂಟರ್‌ ಅನ್ನು ಸಿಎಂ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next