Advertisement

ಕೋವಿಡ್-19 ಮರಣಮೃದಂಗ: ವಿಶ್ವದಾದ್ಯಂತ 64,720 ಬಲಿ, 12ಲಕ್ಷ ದಾಟಿದ ಸೋಂಕಿತರ ಸಂಖ್ಯೆ

09:04 AM Apr 06, 2020 | Mithun PG |

ನ್ಯೂಯಾರ್ಕ್ : ವಿಶ್ವದೆಲ್ಲೆಡೆ ಕೋವಿಡ್ 19 ಆರ್ಭಟ ಮುಂದುವರೆದಿದ್ದು, ಮರಣ ಮೃದಂಗಕ್ಕೆ ಇಲ್ಲಿವರೆಗೂ 64, 720 ಜನರು ಬಲಿಯಾಗಿದ್ದಾರೆ.  ಸೋಂಕಿತರ ಪ್ರ,ಮಾಣ ಕೂಡ ಏರಿಕೆ ಕಂಡಿದ್ದು ಒಟ್ಟಾರೆಯಾಗಿ 12,01,933 ಜನರು ಈ ವೈರಾಣು ದಾಳಿಯಿಂದ ಅಕ್ಷರಶಃ ನಲುಗಿದ್ದಾರೆ ಎಂದು ವರದಿ ತಿಳಿಸಿದೆ.

Advertisement

ಅಮೆರಿಕಾ ಈ ವೈರಸ್ ಆರ್ಭಟಕ್ಕೆ  ಬೆಚ್ಚಿಬಿದ್ದಿದ್ದು, ಇತರ ದೇಶಗಳಿಗಿಂತ ಇಲ್ಲಿ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದೆ.  ವಿಶ್ವದ ಹಲವು ರಾಷ್ಟ್ರಗಳಲ್ಲಿ ಸಂಪೂರ್ಣ ಲಾಕ್ ಡೌನ್ ಮಾಡಲಾಗಿದ್ದು, 260 ಕೋಟಿ ಗಿಂತ ಹೆಚ್ಚು ಜನರು ಗೃಹ ಬಂಧನಕ್ಕೆ ಒಳಗಾಗಿದ್ದಾರೆ. ಬ್ರಿಟನ್, ಇಟಲಿ, ಫ್ರಾನ್ಸ್, ಸ್ಪೇನ್, ನ್ಯೂಜಿಲ್ಯಾಂಡ್, ಭಾರತ  ಮುಂತಾದ ದೇಶಗಳಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದವುಗಳೆಲ್ಲವನ್ನೂ ಸ್ಥಗಿತಗೊಳಿಸಲಾಗಿದೆ.

ಏತನ್ಮಧ್ಯೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ಮಾರಕ ವೈರಸ್ ಗೆ ಮೃತರಾಗುವವರ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ ಎಂದಿರುವುದು ಆತಂಕ ಮೂಡಿಸಿದೆ.ಗಮನಾರ್ಹ ಸಂಗತಿಯೆಂದರೇ ಸೋಂಕಿತರಲ್ಲಿ 2,46,634 ಜನರು ಗುಣಮುಖರಾಗಿದ್ದಾರೆ.

ದುರದೃಷ್ಟವೆಂದರೇ ಭಾರತದಲ್ಲಿ ಸೋಂಕಿತರ ಪ್ರಮಾಣ 5 ದಿನಗಳಲ್ಲಿ 120% ರಷ್ಟು ದ್ವಿಗುಣಗೊಂಡಿದೆ. ದೇಶದಲ್ಲಿ ಒಟ್ಟಾರೆ ಸೋಂಕಿತರ ಪ್ರಮಾಣ 3000 ಗಡಿ ದಾಟಿದ್ದು, ಸಾವಿನ ಸಂಖ್ಯೆ 75ಕ್ಕೆ ಏರಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next