Advertisement

ಕೋವಿಡ್ 19 ಎಫೆಕ್ಟ್: ಮೂರು ತಿಂಗಳ ಬಳಿಕ ಶಾಂಘೈ ಡಿಸ್ನಿಲ್ಯಾಂಡ್ ಆರಂಭ, ಸಾವಿರಾರು ಮಂದಿ ಭೇಟಿ

08:31 AM May 12, 2020 | Nagendra Trasi |

ಶಾಂಘೈ: ಕೋವಿಡ್ 19 ವೈರಸ್ ಹಾವಳಿಯಿಂದಾಗಿ ಕಳೆದ ಮೂರು ತಿಂಗಳ ಕಾಲ ಬಂದ್ ಆಗಿದ್ದ ಚೀನಾದ ಶಾಂಘೈ ಡಿಸ್ನಿಲ್ಯಾಂಡ್ ಸೋಮವಾರ ಮರು ಆರಂಭಗೊಂಡಿದೆ. ಸಾವಿರಾರು ಮಂದಿ ಸೋಮವಾರ ಭೇಟಿ ನೀಡಿರುವುದಾಗಿ ವರದಿ ತಿಳಿಸಿದೆ.

Advertisement

ಕೋವಿಡ್ 19 ತಡೆಗಟ್ಟಲು ಲಾಕ್ ಡೌನ್ ಜಾರಿಯಲ್ಲಿದ್ದ ಹಿನ್ನೆಲೆಯಲ್ಲಿ ಶಾಂಘೈ ಡಿಸ್ನಿಲ್ಯಾಂಡ್ ಬಂದ್ ಆಗಿದ್ದು, ಇಂದು ಮರು ಆರಂಭಗೊಂಡಾಗ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಆಗಮಿಸಿದವರು ಡಿಸ್ನಿ ಮುಂಭಾಗದಲ್ಲಿ ಸೆಲ್ಫಿ ತೆಗೆದುಕೊಂಡಿರುವುದಾಗಿ ವರದಿ ವಿವರಿಸಿದೆ.

ಡಿಸ್ನಿಯ ಜನಪ್ರಿಯ ಮಿಕ್ಕಿ ಮೌಸ್ ಜನಸಮೂಹವನ್ನು ಸ್ವಾಗತಿಸಿದೆ. ಡಿಸ್ನಿಲ್ಯಾಂಡ್ ಗೆ ಆಗಮಿಸುವವರಿಗೆ ಮಾಸ್ಕ್ ಕಡ್ಡಾಯ ಹಾಗೂ ಟೆಂಪರೇಚರ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಭೇಟಿ ನೀಡುವವರಿಗೆ, ಸಿಬ್ಬಂದಿಗಳಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ ಎಂದು ಸೂಚಿಸಿದೆ.

ನನ್ನ ಲೆಕ್ಕಾಚಾರದಲ್ಲಿ ಇಂತಹ ಕ್ರಮಗಳು ಪ್ರವಾಸಿಗರು ತುಂಬಾ ಅನುಕೂಲಕರವಾಗಲಿದೆ ಎಂದು ಶಾಂಘೈ ಡಿಸ್ನಿಲ್ಯಾಂಡ್ ಭೇಟಿ ನೀಡಲು ಪಾಸ್ ಪಡೆದುಕೊಂಡಿದ್ದ 29 ವರ್ಷದ ಕಾಯ್ ಯೂ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಬೆಳಗ್ಗೆ 4ಗಂಟೆಗೆ ಎದ್ದು ಡಿಸ್ನಿಲ್ಯಾಂಡ್ ಪಾರ್ಕ್ ಗೆ ಬಂದಿರುವುದಾಗಿ ಈ ಸಂದರ್ಭದಲ್ಲಿ ಯೂ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next