Advertisement

ಚಿಕ್ಕಬಳ್ಳಾಪುರ ಜಿಲ್ಲೆಗೆ ಕಂಟಕವಾದ ಆಂಧ್ರ ಗಡಿ: ಕೋವಿಡ್ ಸೋಂಕಿತರ ಸಂಖ್ಯೆ 18ಕ್ಕೆ ಏರಿಕೆ

12:49 PM Apr 25, 2020 | keerthan |

ಚಿಕ್ಕಬಳ್ಳಾಪುರ: ಆಂಧ್ರಪ್ರದೇಶದ ಗಡಿಗೆ ಹೊಂದಿರುವ ಚಿಕ್ಕಬಳ್ಳಾಪುರ ‌ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಏರುತ್ತಲೇ‌ ಇದ್ದು ಆಂಧ್ರ ಪ್ರದೇಶಕ್ಕೆ ಹೋಗಿ ಬಂದಿದ್ದ ವ್ಯಕ್ತಿಯಲ್ಲಿ‌ ಕೋವಿಡ್-19 ‌ಸೋಂಕು ಇರುವುದು ದೃಢವಾಗಿದೆ.

Advertisement

ಜಿಲ್ಲೆಯಲ್ಲಿ ಎರಡು ದಿನಗಳಿಂದ ಸೋಂಕು ಕಾಣಸಿಕೊಳ್ಳುತ್ತಲೇ ಇದೆ. ಶನಿವಾರ ಸಹ ವ್ಯಕ್ತಿಯೊಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಸದ್ಯ ಜಿಲ್ಲೆಯ ಸೋಂಕಿತರ ಸಂಖ್ಯೆ 18 ಕ್ಕೆ ಏರಿಕೆ ಕಂಡಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇದುವರೆಗೂ ಕೋವಿಡ್-19 ಸೋಂಕಿತರ ಪೈಕಿ‌ ಇಬ್ಬರು ಮೃತಪಟ್ಟಿದ್ದು ಒಟ್ಟು 11 ಮಂದಿ ಚೇರಿಸಿಕೊಂಡಿದ್ದಾರೆ. ಉಳಿದ ಐದು ಮಂದಿ‌ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜ್ಯದಲ್ಲಿ ಇಂದು 15 ಪ್ರಕರಣಗಳು ದೃಢವಾಗಿದೆ., ರಾಜ್ಯದಲ್ಲಿ ಒಟ್ಟು 489 ಸೋಂಕಿತ ಪ್ರಕರಣಗಳಿದ್ದು, ಅದರಲ್ಲಿ 153 ಜನರು ಗುಣಮುಖರಾಗಿ ಮನೆಗೆ ಮರಳಿದ್ದಾರೆ. 18 ಜನರು ಸೋಂಕು ಕಾರಣದಿಂದ ಸಾವನ್ನಪ್ಪಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next