Advertisement

ಕೋವಿಡ್ 19 ಮಹಾಮಾರಿ ಗೆದ್ದ ಜೋರ್ಡಾನ್: ಲಾಕ್ ಡೌನ್ ನಿರ್ಬಂಧ ತೆರವು, ಸಾಮಾಜಿಕ ಅಂತರ ಕಡ್ಡಾಯ

08:25 AM May 05, 2020 | Nagendra Trasi |

ಅಮ್ಮಾನ್(ಜೋರ್ಡಾನ್):ಕೋವಿಡ್ 19 ವೈರಸ್ ತಡೆಗಟ್ಟಲು ಲಾಕ್ ಡೌನ್ ಜಾರಿಗೊಳಿಸಲಾಗಿತ್ತು. ಮತ್ತೊಂದೆಡೆ ಜಗತ್ತಿನಾದ್ಯಂತ ಒಂದೊಂದೇ ದೇಶಗಳು ಲಾಕ್ ಡೌನ್ ನಿರ್ಬಂಧಗಳನ್ನು ಸಡಿಲಿಸುತ್ತಿದೆ. ಭಾರತದಲ್ಲಿಯೂ ಸೋಮವಾರದಿಂದ ಮತ್ತಷ್ಟು ನಿರ್ಬಂಧ ಸಡಿಲಿಕೆ ಮಾಡಲಾಗಿದೆ. ಏತನ್ಮಧ್ಯೆ ಜೋರ್ಡಾನ್ ನಲ್ಲಿ ಎಲ್ಲಾ ನಿರ್ಬಂಧ ತೆರವುಗೊಳಿಸಿ ಆರ್ಥಿಕ ಚಟುವಟಿಕೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದೆ.

Advertisement

ಲಾಕ್ ಡೌನ್ ನಿರ್ಬಂಧ ತೆರವುಗೊಳಿಸಿದ್ದು ಇದರಿಂದಾಗಿ ಆರ್ಥಿಕವಾಗಿ ಎಲ್ಲಾ ಚಟುವಟಿಕೆ ನಡೆಯುವ ಮೂಲಕ ಆರ್ಥಿಕ ಚೇತರಿಕೆಗೆ ನೆರವು ನೀಡಲಿದೆ ಎಂದು ಹೇಳಿದೆ. ಆದರೆ ನಿರ್ಬಂಧ ತೆರವುಗೊಳಿಸಿದರೂ ಕೂಡಾ ಕಡಿಮೆ ಪ್ರಮಾಣದ ಸಿಬ್ಬಂದಿಗಳು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸರ್ಕಾರ ಸೂಚನೆ ನೀಡಿದೆ.

ದೇಶದಲ್ಲಿ ವ್ಯಾಪಾರ ಮತ್ತು ಕೈಗಾರಿಕೆಗಳು ಪುನರಾರಂಭಗೊಂಡಿದೆ ಎಂದು ಜೋರ್ಡಾನ್ ಕೈಗಾರಿಕಾ ಮತ್ತು ವಾಣಿಜ್ಯ ಸಚಿವ ತಾರಿಖ್ ಹಾಮೌರಿ ತಿಳಿಸಿದ್ದಾರೆ. ಸುರಕ್ಷತಾ ಕ್ರಮಗಳೊಂದಿಗೆ ಎಲ್ಲಾ ಸಾರ್ವಜನಿಕ ಸಾರಿಗೆ ಸಂಚಾರಕ್ಕೆ ಅವಕಾಶ ಕೊಡಲಾಗಿದೆ. ಆದರೆ ಯೂನಿರ್ವಸಿಟಿ ಮತ್ತು ಶಾಲಾ, ಕಾಲೇಜುಗಳು ಬಂದ್ ಮುಂದುವರಿಯಲಿದ್ದು, ರಾತ್ರಿ ಕರ್ಫ್ಯೂ ಕೂಡಾ ಮುಂದುವರಿಯಲಿದೆ ಎಂದು ತಿಳಿಸಿದೆ.

ಜೋರ್ಡಾನ್ ನಲ್ಲಿ 460 ಕೋವಿಡ್ 19 ವೈರಸ್ ಪ್ರಕರಣ ಪತ್ತೆಯಾಗಿದ್ದು, 9 ಮಂದಿ ಸಾವನ್ನಪ್ಪಿದ್ದರು. ಆದರೆ ಇದೀಗ ದೇಶದಲ್ಲಿ ಯಾವುದೇ ಸೋಂಕು ವರದಿಯಾಗಿಲ್ಲ ಎಂದು ಹೇಳಿದೆ. ಮಾರಣಾಂತಿಕ ಕೋವಿಡ್ ವೈರಸ್ ಹರಡುವುದನ್ನು ತಡೆಗಟ್ಟುವಲ್ಲಿ ಪ್ರಧಾನಿ ಓಮರ್ ಅಲ್ ರಾಝಾಝ್ ನೇತೃತ್ವದ ಸರ್ಕಾರ ಗೆಲುವು ಸಾಧಿಸಿದೆ. ಆದರೆ ಆರ್ಥಿಕವಾಗಿ ತುಂಬಾ ನಷ್ಟ ಅನುಭವಿಸಿದೆ. ಇದರಿಂದಾಗಿ ಸಮಾಜದಲ್ಲಿ ಅಶಾಂತಿ ತಲೆದೋರಬಹುದು ಎಂದು ವಾಣಿಜ್ಯ ಸಂಘಟನೆಗಳು ಕಟುವಾಗಿ ಟೀಕಿಸಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next