Advertisement

ರಕ್ಷಣೆಗಾಗಿ ಕೋವಿಡ್ ವಾರಿಯರ್ಸ್‌ ಪ್ರತಿಭಟನೆ

11:31 AM Sep 09, 2020 | Suhan S |

ಮಾಗಡಿ: ಸೋಂಕಿತರ ದ್ವಿತೀಯ ಸಂಪರ್ಕಿತರನೋಂದಣಿಗೆ ತೆರಳಿದ್ದ ಆರೋಗ್ಯ ಸಹಾಯಕರ ಮೇಲೆ ಹಲ್ಲೆ ಯತ್ನ ನಡೆದಿದ್ದು ರಕ್ಷಣೆ ನೀಡುವಂತೆ ಆಗ್ರಹಿಸಿರಾಜ್ಯ ಆರೋಗ್ಯ ಸಹಾಯಕರು, ಮೇಲ್ವಿಚಾರಕರ ಸಂಘದ ತಾಲೂಕು ಪದಾಧಿಕಾರಿಗಳ ನೇತೃತ್ವದಲ್ಲಿ ಕೋವಿಡ್ ವಾರಿಯರ್ಸ್‌ ಪ್ರತಿಭಟನೆ ನಡೆಸಿದರು.

Advertisement

ಸರ್ಕಾರಿ ಆಸ್ಪತ್ರೆ ಮುಂಭಾಗ ನಡೆದ ಪ್ರತಿಭಟನೆಯಲ್ಲಿಮಾತನಾಡಿದ ಆರೋಗ್ಯ ಸಹಾಯಕರು ಮತ್ತು ಮೇಲ್ವಿಚಾರಕರ ಸಂಘದ ಜಿಲ್ಲಾಧ್ಯಕ್ಷ ಬೈರವೇಗೌಡ, ಬಾಚೇನಹಟ್ಟಿ ಗ್ರಾಮದಲ್ಲಿ ಕೊರೊನಾ ದ್ವಿತೀಯ ಸಂಪರ್ಕಿತ ವ್ಯಕ್ತಿ ನೋಂದಾಯಿಸಲು ತೆರಳಿದ್ದ ಆರೋಗ್ಯ ಸಹಾಯಕರಾದ ರಾಜಣ್ಣ, ಶೋಭಾ ಅವರ ಮೇಲೆ ಹಲ್ಲೆ ಯತ್ನ ನಡೆಸಲಾಗಿದೆ. ಕೂಡಲೇ ಆರೋಪಿಗಳನ್ನು ಬಂಧಿಸಿ ರಕ್ಷಣೆ ನೀಡುವಂತೆ ಮನವಿ ಮಾಡಿದರು.

ತಾಲೂಕು ಆರೋಗ್ಯ ಸಹಾಯಕರು, ಮೇಲ್ವಿಚಾರಕರ ಸಂಘದ ಅಧ್ಯಕ್ಷ ಶಿವಸ್ವಾಮಿ ಮಾತನಾಡಿ, ಕೋವಿಡ್ ವಾರಿಯರ್ಸ್‌ಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಲಾಗುತ್ತಿದೆ ಎಂದು ದೂರಿದರು. ಆರೋಗ್ಯ ಸಹಾಯಕಿ ವಿಜಯಲಕ್ಷ್ಮೀ ಮಾತನಾಡಿ, ಸರ್ಕಾರ ವಾರಿಯರ್ಸ್‌ಗಳಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಂಘದ ಕಾರ್ಯದರ್ಶಿ ಬಸವರಾಜು, ತಾಲೂಕು ಪ್ರಧಾನ ಕಾರ್ಯದರ್ಶಿ ಆರ್‌. ರಂಗನಾಥ್‌, ಆರೋಗ್ಯ ಸಹಾಯಕ ರಾಜಣ್ಣ,ಲೋಕೇಶ್‌, ನಾಗರತ್ನ ಪವರ್‌, ಸುಜಾತಾ, ವತ್ಸಲಾ, ಅಣ್ಣೇಗೌಡ, ವೆಂಕಟೇಶ್‌, ರಾಜಣ್ಣ, ಶಿವಕುಮಾರ್‌, ಬೈಲಪ್ಪ, ಯೋಗನರಸಿಂಹ ಪ್ರಕಾಶ್‌, ಕೆ.ಜಿ.ಹರೀಶ್‌, ತಾರಾ, ಚಂದ್ರಿಕಾ, ತುಕಾರಾಂ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next