Advertisement

ಕೋವಿಡ್ ವೈರಸ್‌ಗೆ 122 ಮಂದಿ ಬಲಿ

08:17 AM Jun 05, 2020 | Suhan S |

ಮುಂಬಯಿ, ಜೂ. 4: ರಾಜ್ಯದಲ್ಲಿ ಬುಧವಾರ ನಿಸರ್ಗ ಚಂಡಮಾರುತ ಮಧ್ಯೆ ಕೋವಿಡ್ ವೈರಸ್‌ ಗೆ 122 ಮಂದಿ ಬಲಿಯಾಗಿದ್ದಾರೆ. 2,560 ಹೊಸ ಪ್ರಕರಣಗಳೊಂದಿಗೆ, ರಾಜ್ಯದಲ್ಲಿ ಒಟ್ಟು ಸೋಂಕುಗಳ ಸಂಖ್ಯೆ 74,860 ಕ್ಕೆ ಏರಿಕೆಯಾಗಿದೆ. ಹೊಸದಾಗಿ ದಾಖಲಾದ ಸಾವಿನ ಪ್ರಕರಣಗಳಲ್ಲಿ 52 ಮಂದಿ ಮುಂಬಯಿವರಾಗಿದ್ದು, ಪ್ರಸ್ತುತ ಚಂಡಮಾರುತ ಮತ್ತು ಮುಂಬರುವ ಮಾನ್ಸೂನ್‌ ಕಾರಣದಿಂದಾಗಿ ಬಿಎಂಸಿ ಇತರ ಸಾಂಕ್ರಾಮಿಕ ರೋಗಗಳನ್ನು ನಿಭಾಯಿಸಲು ಸಜ್ಜಾಗಿದೆ.

Advertisement

ಮುಂಗಾರು ಸಂಬಂಧಿತ ಕಾಯಿಲೆಗಳಾದ ಡೆಂಗ್ಯೂ, ಮಲೇರಿಯಾ ಮತ್ತು ಲೆಪ್ಟೊಸ್ಪಿರೋಸಿಸ್‌ ನಿರೀಕ್ಷೆಯಲ್ಲಿ ನಾಗರಿಕರು ಮುಂದಿನ ಏಳರಿಂದ 10 ದಿನಗಳಲ್ಲಿ ಯಾವುದೇ ರೀತಿಯ ಜ್ವರ, ಕೀಲು ನೋವು, ಶೀತ, ದದ್ದು, ಅತಿಸಾರ ಮತ್ತು ಗಂಟಲು ನೋವಿನ ಬಗ್ಗೆ ಗಮನ ಹರಿಸಬೇಕು ಎಂದು ಬಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.

ಲಾಕ್‌ಡೌನ್‌ ನಿರ್ಬಂಧಗಳನ್ನು ಹಂತಹಂತವಾಗಿ ಸರಾಗಗೊಳಿಸುವ ಸಮಯದಲ್ಲಿ ಜನರು ಹೊರಾಂಗಣದಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. 1,000 ರೋಗಿಗಳನ್ನು ಬಿಡುಗಡೆ 1,276 ಹೊಸ ಪ್ರಕರಣಗಳೊಂದಿಗೆ, ಮುಂಬಯಿಯ ಒಟ್ಟು ಸೋಂಕುಗಳ ಸಂಖ್ಯೆ 43,492 ಕ್ಕೆ ಏರಿದೆ. ಪ್ರಸ್ತುತ ಮಹಾರಾಷ್ಟ್ರದಾದ್ಯಂತ 39,935 ಕೋವಿಡ್‌ -19 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬುಧವಾರ ಸುಮಾರು 1,000 ರೋಗಿಗಳನ್ನು ಬಿಡುಗಡೆ ಮಾಡಲಾಗಿದೆ. ಮುಂಬಯಿಯಲ್ಲಿ ಮೃತಪಟ್ಟ 52 ಜನರಲ್ಲಿ ಮೂವರು ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳದವರಾಗಿದ್ದಾರೆ.. 122 ರೋಗಿಗಳಲ್ಲಿ 19 ಮಂದಿ ಪುಣೆಯಲ್ಲಿ, ಔರಂಗಾಬಾದ್‌ನಲ್ಲಿ 16, ಸೋಲಾಪುರದಲ್ಲಿ 10, ಧುಲೇಯಲ್ಲಿ ನಾಲ್ಕು, ಉಲ್ಹಾಸ್‌ನಗರ ಮತ್ತು ನವೀ ಮುಂಬಯಿಯಲ್ಲಿ ತಲಾ ಮೂರು, ಥಾಣೆ, ಜಲ್ಗಾಂವ್‌, ಕೊಲ್ಹಾಪುರ ಮತ್ತು ಅಕೋಲಾದಲ್ಲಿ ತಲಾ ಇಬ್ಬರು ಮೃತಪಟ್ಟಿದ್ದಾರೆ. ಮೀರಾ ಭಾಯಂದರ್‌, ವಸಾಯಿ-ವಿರಾರ್‌, ಭಿವಂಡಿ, ಅಹ್ಮದ್‌ನಗರ, ನಂದುಬಾರ್‌, ಉಸ್ಮಾನಾಬಾದ್‌ ಮತ್ತು ಜಲಾ°ದಲ್ಲಿ ತಲಾ ಒಬ್ಬೊಬ್ಬರು ಸಾವನ್ನಪ್ಪಿದ್ದಾರೆ. ಇವರಲ್ಲಿ 88 ಮಂದಿ ಇತರ ಕಾಯಿಲೆಗಳಿಂದ ಬಳಲುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಎಂಸಿ ಅಧಿಕಾರಿಗಳ ಪ್ರಕಾರ, ಏಳು ಆಡಳಿತಾತ್ಮಕ ವಾರ್ಡ್‌ಗಳು ಶೇ. 5 ಕ್ಕಿಂತ ಹೆಚ್ಚಿನ ಬೆಳವಣಿಗೆಯ ದರವನ್ನು ಮುಂದುವರಿಸುತ್ತಿದ್ದರೆ, ಜೂನ್‌ 2 ರ ವೇಳೆಗೆ ನಗರದ ಸರಾಸರಿ ಬೆಳವಣಿಗೆಯ ದರವು ಶೇ. 3.64 ಕ್ಕೆ ಇಳಿದಿದೆ. ಅದೇ ರೀತಿ, ರಾಜ್ಯದಲ್ಲಿ ಪ್ರಕರಣಗಳ ಹೆಚ್ಚಳದ ಪ್ರಮಾಣವು ಹೆಚ್ಚಾಗಿದೆ. ಮೇ 1 ರಂದು ಶೇ. 7.76 ರಿಂದ ಜೂನ್‌ 1 ರಂದು ಶೇ 4.15 ಕ್ಕೆ ತಲುಪಿದೆ. ಈ ಮಧ್ಯೆ ಮರಣ ಪ್ರಮಾಣವು ಸ್ವಲ್ಪಮಟ್ಟಿಗೆ ಅಂದರೆ ಶೇ. 3.45 ಕ್ಕೆ ಏರಿದೆ.

Advertisement

Udayavani is now on Telegram. Click here to join our channel and stay updated with the latest news.

Next