Advertisement

ಉಜಿರೆ: ಪೆಟ್ರೋಲ್‌ ಬಂಕ್‌ ಸಿಬಂದಿಗೆ ಕೋವಿಡ್ ದೃಢ

11:56 AM Jun 28, 2020 | sudhir |

ಮುಂಡಾಜೆ: ಉಜಿರೆಯ ಪೆಟ್ರೋಲ್‌ ಬಂಕ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮುಂಡಾಜೆಯ ಅಗರಿ ನಿವಾಸಿ 38ರ ವಯಸ್ಸಿನ ಮಹಿಳೆಯಲ್ಲಿ ಕೋವಿಡ್ ಪಾಸಿಟಿವ್‌ ಕಂಡುಬಂದಿದೆ.

Advertisement

ಆರೋಗ್ಯ ಇಲಾಖೆಯು ಮುನ್ನೆಚ್ಚರಿಕೆ ಕ್ರಮವಾಗಿ ಸಾರ್ವಜನಿಕ ವಲಯದಲ್ಲಿ ಸಂಪರ್ಕದಲ್ಲಿರುವ ಉಜಿರೆ ಪೇಟೆ ಮತ್ತು ಸುತ್ತಮುತ್ತಲ 50ಕ್ಕೂ ಅಧಿಕ ಮಂದಿಯ ಗಂಟಲ ದ್ರವ ಮಾದರಿ ಸಂಗ್ರಹಿಸಿ ಕೋವಿಡ್‌-19 ಪರೀಕ್ಷೆಗೆ ಕಳುಹಿಸಿತ್ತು.

ಶನಿವಾರ ಕರ್ತವ್ಯ ನಿರ್ವಹಿಸುತ್ತಿರುವಾಗಲೇ ಮಹಿಳೆಗೆ ಕೋವಿಡ್ ಪಾಸಿಟಿವ್‌ ಎಂಬ ವರದಿ ಬಂದಿದ್ದು, ಪರಿಸರದಲ್ಲಿ ಮಧ್ಯಾಹ್ನವರೆಗೆ ಗೊಂದಲದ ವಾತಾವರಣ ನೆಲೆಸಿತ್ತು. ಮಹಿಳೆಯ ಪತಿ ಲಾಕ್‌ಡೌನ್‌ಗೆ ಮೊದಲು ಮಂಡ್ಯಕ್ಕೆ ತೆರಳಿದ್ದು, ಇತ್ತೀಚೆಗಷ್ಟೇ ಮುಂಡಾಜೆಗೆ ಮರಳಿದ್ದರು.

ಈ ಮಹಿಳೆ ಕೆಲಸ ನಿರ್ವಹಿಸುವ ಪಾಳಿಯಲ್ಲಿದ್ದ ಸಹೋದ್ಯೋಗಿ ಗಳನ್ನು, ಮಹಿಳೆಯ ಮನೆಮಂದಿಯನ್ನು ಹಾಗೂ ಸೋಮಂತಡ್ಕದಲ್ಲಿ ಮಹಿಳೆ ಭೇಟಿ ನೀಡಿದ ಅಂಗಡಿಯವರನ್ನು ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಪೆಟ್ರೋಲ್‌ ಬಂಕ್‌ ಮತ್ತು ಮಹಿಳೆಯ ಮನೆ ಯನ್ನು ಸೀಲ್‌ಡೌನ್‌ ಮಾಡಲಾಗಿದ್ದು, ಅವರನ್ನು ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next