ರೋಣ: ಪ್ರಪಂಚದ ವಿವಿಧ ದೇಶಗಳು ಮಾನವ ಸಂಪನ್ಮೂಲ ಹಾಗೂ ವೈದ್ಯಕೀಯ ಸಿಬ್ಬಂದಿ ಕೊರತೆಯಿಂದ ಕೋವಿಡ್ ರೋಗವನ್ನು ತಡೆಗಟ್ಟಲು ವಿಫಲವಾಗಿದೆ.
ಭಾರತದಲ್ಲಿ ವೈದ್ಯಕೀಯ ಹಾಗೂ ಆಶಾ ಕಾರ್ಯಕರ್ತೆಯರಿಂದ ಕೊರೊನಾ ರೋಗ ತಡೆಗಟ್ಟುವಲ್ಲಿ ಜೀವ ಪಣಕಿಟ್ಟು ಹೋರಾಡಿದ್ದಾರೆ. ಈ ಕಾರ್ಯದಲ್ಲಿ ಅವರ ಶ್ರಮ ಶ್ಲಾಘನೀಯ ಎಂದು ಹಾವೇರಿ ಸಂಸದ ಶಿವಕುಮಾರ ಉದಾಸಿ ಹೇಳಿದರು.
ಪಟ್ಟಣದ ಅಂದಾನಪ್ಪ ದೊಡ್ಡಮೇಟಿ ಸಭಾ ಭವನದಲ್ಲಿ ತಾಲೂಕು ಆಸ್ಪತ್ರೆ ಹಾಗೂಆರೋಗ್ಯ ಇಲಾಖೆಯ ಆಶ್ರಯದಲ್ಲಿ ನಡೆದಲಸಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರುಮಾತನಾಡಿದರು. ಪ್ರಾರಂಭದಲ್ಲಿ ಆರೋಗ್ಯಇಲಾಖೆ ಸಿಬ್ಬಂದಿಗೆ ಹಾಗೂ ನಾಗರಿಕರಿಗೆ ಮಾಸ್ಕ್ ಕೊರತೆ ಇತ್ತು. ಈಗ ಮಾಸ್ಕ್ ಸೇರಿದಂತೆ ಲಸಿಕೆ ಸಹಿತವಾಗಿ ಬೇರೆ ಬೇರೆ ದೇಶಗಳಿಗೆ ಭಾರತವೇ ಕಳುಹಿಸಿ ಕೊಡುತ್ತದೆ ಎಂದರೆ ನಮ್ಮ ನಿಮ್ಮೆಲ್ಲರಿಗೂ ಹೆಮ್ಮೆಯ ವಿಷಯ ಎಂದರು.
ರೋಣ ಶಾಸಕ ಕಳಕಪ್ಪ ಬಂಡಿ, ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಜಿಪಂ ಉಪಾಧ್ಯಕ್ಷೆ ಮಂಜುಳಾಹುಲ್ಲಣ್ಣವರ, ತಾಪಂ ಅಧ್ಯಕ್ಷೆ ಪ್ರೇಮಾ ನಾಯಕ,ಉಪಾಧ್ಯಕ್ಷೆ ಇಂದಿರಾ ತೇಲಿ, ರಾಜ್ಯ ಬೀಜನಿಗಮದ ಸದಸ್ಯ ಬಸವರಾಜ ಬೆಲ್ಲದ, ಎಪಿಎಂಸಿ ಅಧ್ಯಕ್ಷ ರಾಜಣ್ಣ ಹೂಲಿ, ರೋಣ ಬಿಜೆಪಿಮಂಡಲ ಅಧ್ಯಕ್ಷ ಮುತ್ತಣ್ಣ ಕಡಗದ, ಮುತ್ತಣ್ಣಲಿಂಗನಗೌಡ್ರ, ಬಸವರಾಜ ರಂಗನಗೌಡ್ರ,ಅಶೋಕ್ ನವಲಗುಂದ, ವೆಂಕನಗೌಡ ಗೋವಿಂದಗೌಡ್ರ, ಹೂವಪ್ಪ ಮೂಲಿಮನಿ, ಡಾ|ಎಚ್.ಎಲ್. ಗಿರಡ್ಡಿ, ಡಾ| ಎ.ಎ. ಹಾದಿಮನಿ, ಡಾ| ಬಿ.ಎಸ್. ಭಜಂತ್ರಿ ಸೇರಿದಂತೆ ಮತ್ತಿತರರು ಇದ್ದರು.