Advertisement
ಜಿಲ್ಲೆಯ ಮೂರು ತಾಲೂಕುಗಳ ಆರೋಗ್ಯಾಧಿಕಾರಿಗಳು ಹಾಗೂ ಅರಣ್ಯಇಲಾಖೆ ಸಿಬ್ಬಂದಿಗಳಿಗೆ ಲಸಿಕೆ ನೀಡಿರುವುದಕ್ಕೆ ರಾಜ್ಯ ಮಟ್ಟದ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಎಚ್.ಡಿ.ಕೋಟೆ ಮತ್ತು ನಂಜನಗೂಡುತಾಲೂಕುಆರೋಗ್ಯಾಧಿಕಾರಿಗಳಿಗೆ ತಕ್ಷಣವೇ ಸಮಜಾಯಿಷಿ ನೀಡುವಂತೆ ಸೂಚಿಸಿ ಮೇ 28ರಂದು ನೋಟಿಸ್ ನೀಡಿದ್ದಾರೆ.
Related Articles
Advertisement
ನಾಗರಹೊಳೆ ಹುಲಿಯೋಜನೆಯ ಹುಣಸೂರು ನಿರ್ದೇಶಕರ ಕಚೇರಿ ವ್ಯಾಪ್ತಿಯಲ್ಲಿ ಅಧಿಕಾರಿಗಳು ಹಾಗೂಸಿಬ್ಬಂದಿಗಳು ಸೇರಿ 605 ಮಂದಿಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಪೈಕಿ 310 ಮಂದಿ ಮಾತ್ರ ಮೊದಲ ಹಂತದ ಲಸಿಕೆ ಪಡೆದಿದ್ದರೆ, 22 ಮಂದಿಗೆ 2ನೇ ಹಂತದ ಲಸಿಕೆ ಸಿಕ್ಕಿದೆ. ಇನ್ನೂ 292 ಮಂದಿ ಲಸಿಕೆ ಪಡೆಯಬೇಕಿದೆ. ಇವರಲ್ಲಿ ಕೊಡಗು ಜಿಲ್ಲೆ ಹಾಗೂ ಕೇರಳ ಸಂಪರ್ಕ ಕಲ್ಪಿಸುವ ಆನೆಚೌಕೂರು ವಲಯದಲ್ಲಿ 151 ಮಂದಿಯಲ್ಲಿ ಮೂವರು ಮಾತ್ರ ಲಸಿಕೆ ಪಡೆದಿದ್ದಾರೆ. ಅಂತರ ಸಂತೆ ವಲಯದಲ್ಲಿ ಲಸಿಕೆಯನ್ನೇ ಪಡೆದಿಲ್ಲ. ಹುಣಸೂರು ವಲಯದಲ್ಲಿ ಕೆಲವರು ಲಸಿಕೆ ಪಡೆದಿದ್ದರೆ, ಪ್ರಾದೇಶಿಕ ಅರಣ್ಯ ವಿಭಾಗದಲ್ಲಿ ಅರ್ಧದಷ್ಟು ಮಂದಿ ಮಾತ್ರ ಲಸಿಕೆ ಪಡೆದಿದ್ದು, ಜೀವಭಯದ ನಡುವೆಯೂ ಅರಣ್ಯ ರಕ್ಷಣೆಯಲ್ಲಿ ಮುಂಚೂಣಿಯ ಸಿಬ್ಬಂದಿಗಳಿಗೆ ಲಸಿಕೆ ನೀಡಿರುವಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿಯಿಂದ ಟಿಎಚ್‌ಒಒಗಳಿಗೆ ನೋಟಿಸ್‌ಜಾರಿಗಿಳಿಸಿರುವುದು ಆಕ್ರೋಶ ಮೂಡಿಸಿದೆ.
20 ಅರಣ್ಯ ಸಿಬ್ಬಂದಿಗೆ ಸೋಂಕು: ಕಳೆದ 10 ದಿನಗಳ ಹಿಂದೆ ಹುಲಿ ಪತ್ತೆ ಕಾರ್ಯಾಚರಣೆ ಮತ್ತಿತರ ಕಡೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ವೀರನಹೊಸಹಳ್ಳಿ-4, ಆನೆಚೌಕೂರು-7, ನಾಗರಹೊಳೆ-2, ಅಂತರಸಂತೆ, ಮೇಟಿಕುಪ್ಪೆ ತಲಾ ಒಂದು, ತಿತಿಮತಿ ಹಾಗೂ ಹ್ಯಾಂಡ್ ಪೋಸ್ಟ್‌ನ ಎಸ್‌ಟಿಪಿಎಫ್‌ನ 7 ಸೇರಿದಂತೆ 20 ಮಂದಿಗೆ ಸೋಂಕು ತಗುಲಿದೆ.
-ಸಂಪತ್ ಕುಮಾರ್