ದಾವಣಗೆರೆ: ಕೋವಿಡ್-19 ಲಸಿಕೆ ಬಗ್ಗೆ ಅಂಜಿಕೆ ಮತ್ತು ತಪ್ಪು ಕಲ್ಪನೆ ದೂರವಾಗುವಂತೆ ವಿವಿಧ ಸಂಘ-ಸಂಸ್ಥೆಗಳು ಸಮುದಾಯ ದಲ್ಲಿ ಅರಿವು ಮೂಡಿಸುವ ಮೂಲಕ ಸಹಕರಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮನವಿ ಮಾಡಿದರು.
ಕೋವಿಡ್- 19 ಲಸಿಕೆ ಕಾರ್ಯಕ್ರಮದ ಪ್ರಗತಿ ಪರಿಶೀಲನಾ (ಜಿಲ್ಲಾ ಟಾಸ್ಕ್ ಪೋರ್ಸ್) ಸಭೆಯಲ್ಲಿಮಾತನಾಡಿದ ಅವರು, ಪೊಲೀಸ್ ಇಲಾಖೆ ಮತ್ತು ಗೃಹರಕ್ಷಕ ದಳ ಸೇರಿದಂತೆ ಸುಮಾರು 2220 ಸಿಬ್ಬಂದಿಗೆಮೊದಲನೇ ಹಂತದಲ್ಲಿ ಲಸಿಕೆ ನೀಡಲು ಪೋರ್ಟಲ್ ನಲ್ಲಿ ಮಾಹಿತಿ ಅಪ್‌ಲೋಡ್ ಮಾಡಲಾಗುತ್ತಿದೆ. ಎನ್‌ಸಿಸಿ ಮತ್ತು ಎನ್‌ಎಸ್‌ಎಸ್ ಅಧಿಕಾರಗಳ ಜೊತೆ ಸಭೆ ನಡೆಸಿ ಅವರ ಮಾಹಿತಿಯನ್ನು ಅಪ್‌ಲೋಡ್ ಮಾಡುವಂತೆ ಸೂಚಿಸಿದರು. ಆರ್‌ಸಿಎಚ್ ಅಧಿಕಾರಿ ಡಾ| ಮೀನಾಕ್ಷಿ ಮಾತನಾಡಿ,
ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುವುದು. ಸರ್ಕಾರಿ ಮತ್ತು ಖಾಸಗಿಆಸ್ಪತ್ರೆಗಳು ಸೇರಿದಂತೆ ಫಲಾನುಭವಿಗಳ ಪಟ್ಟಿಯನ್ನುಈಗಾಗಲೇ ತಯಾರಿಸಿ ಪೋರ್ಟಲ್‌ಗೆ ಅಪ್ ಲೋಡ್ ಮಾಡಲಾಗಿದೆ. 5771 ಸರ್ಕಾರಿ ಮತ್ತು 4921 ಖಾಸಗಿ ಸೇರಿದಂತೆ ಒಟ್ಟು 10,692 ಆರೋಗ್ಯಕಾರ್ಯಕರ್ತರ ಮಾಹಿತಿಯನ್ನು ಅಪ್‌ಲೋಡ್ ಮಾಡಲಾಗಿದೆ. ಮೊದಲ ಹಂತಕ್ಕೆ ಲಸಿಕೆ ನೀಡಲು ಅಗತ್ಯವಾದ ಎಲ್ಲಾ ಸಿದ್ಧತೆಗಳಾಗಿವೆ ಎಂದರು.
ಎರಡನೇ ಹಂತದಲ್ಲಿ ಫ್ರಂಟ್‌ಲೆçನ್ ವರ್ಕರ್‌ಗಳಾದ ನಗರ ಸ್ಥಳೀಯ ಸಂಸ್ಥೆಗಳು, ಪೊಲೀಸ್ ಇಲಾಖೆ, ಅಗ್ನಿಶಾಮಕ ಇಲಾಖೆ, ಹೋಂ ಗಾರ್ಡ್ಸ್, ಎನ್‌ಸಿಸಿ, ಎನ್‌ಎಸ್‌ಎಸ್, ವಿಪತ್ತು ನಿರ್ವಹಣೆ ಸ್ವಯಂಸೇವಕರುಗಳಪಟ್ಟಿ ತಯಾರಿಸಲಾಗುತ್ತಿದೆ. ಮೂರನೇ ಹಂತದಲ್ಲಿ 50 ವರ್ಷ ಮೇಲ್ಪಟ್ಟ ದುರ್ಬಲ ವರ್ಗದ ಮತ್ತು 50 ವರ್ಷದೊಳಗಿನ ಇತರೆಆರೋಗ್ಯ ಸಮಸ್ಯೆ ಇರುವ ಜನರನ್ನು ಗುರುತಿಸಿ ಪಟ್ಟಿ ತಯಾರಿಸಲಾಗುವುದು ಎಂದು ತಿಳಿಸಿದರು.
ರೋಟರಿ, ಲಯನ್ಸ್ ಸೇರಿದಂತೆ ವಿವಿಧ ಸಂಸ್ಥೆಗಳಪ್ರಮುಖರು ತಾವು ಜಾಥಾ ಮಾಡುವ ಮೂಲಕಜನರಲ್ಲಿ ಅರಿವು ಮೂಡಿಸುವುದಾಗಿ ತಿಳಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ,ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ| ನಾಗರಾಜ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ರಾಘವನ್, ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ| ಗಂಗಾಧರ ಕೆ.ಎಚ್., ಡಾ| ಮುರಳೀಧರ್, ಡಾ| ನಟರಾಜ್ ಭಾಗವಹಿಸಿದ್ದರು.
ಎರಡು ಡೋಸ್‌ಗಳಲ್ಲಿ ಲಸಿಕೆ : ಲಸಿಕೆಯನ್ನು ಎರಡು ಡೋಸ್‌ಗಳಲ್ಲಿ ನೀಡಬೇಕಾಗಿದ್ದು ಮೊದಲ ಡೋಸ್ ಆಗಿ ಮೂರು ವಾರಗಳ ನಂತರ ಎರಡನೇ ಡೋಸ್ ನೀಡಲಾಗುವುದು ಎಂದು ಆರ್‌ಸಿಎಚ್ ಅಧಿಕಾರಿ ಡಾ| ಮೀನಾಕ್ಷಿ ತಿಳಿಸಿದರು. ಮೊದಲ ಹಂತ ಮತ್ತು ಎರಡನೇ ಹಂತಗಳಿಗೆ ಲಸಿಕಾಕಾರರು ಮತ್ತು ಸಿಬ್ಬಂದಿ ಕೊರತೆಆಗುವುದಿಲ್ಲ. ಆದರೆ ಮೂರನೇ ಹಂತದಲ್ಲಿ ಲಸಿಕೆ ಹಾಕಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಬಹುದಾಗಿದ್ದು,ಸಿಬ್ಬಂದಿಗಳ ಕೊರತೆಯಾಗುವುದರಿಂದ ಇತರೆ ಇಲಾಖೆಗಳ ಸಿಬ್ಬಂದಿಗಳಿಗೆ ತರಬೇತಿ ನೀಡಿ ಅವರನ್ನು ನಿಗಾವಣೆ ಮತ್ತು ನಿರೀಕ್ಷಣಾ ಕೊಠಡಿಗಳಿಗೆ ನಿಯೋಜಿಸಬಹುದು. ಲಸಿಕಾ ಕಾರ್ಯಕ್ರಮಕ್ಕೆ ನಗರದ ಮೆಡಿಕಲ್ ಕಾಲೇಜುಗಳ ಸಹಕಾರ ಅಗತ್ಯವಿದ್ದು ಈಗಾಗಲೇ ಬಾಪೂಜಿ ಮೆಡಿಕಲ್ ಕಾಲೇಜಿನ ವೈದ್ಯರು, ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಎಸ್‌ಎಸ್‌ಐಎಂಎಸ್ ಕಾಲೇಜಿನವರಿಗೆ ಶೀಘ್ರದಲ್ಲೇ ತರಬೇತಿನೀಡಲಾಗುವುದು ಎಂದರು.