Advertisement

ಶಿರಸಿ: ಲಸಿಕೆಯೇ ಆಗಿಲ್ಲ,ಕೊಟ್ಟಾಯ್ತು ಮೆಸೇಜ್ ಬಂತು!

01:25 PM Oct 14, 2021 | Team Udayavani |

ಶಿರಸಿ: ಕೋವಿಡ್ ಸೋಂಕು ನಿರೋಧಕ ಎರಡನೇ ಡೋಸ್‌ ಲಸಿಕೆಯೇ ಹಾಕಿಲ್ಲ, ಆದರೂ ಎರಡನೇ ಬಾರಿಯ‌ ಲಸಿಕೆ ಪಡೆದ ಕುರಿತು ದೃಢೀಕರಣ ಮೆಸೇಜ್ ಮೊಬೈಲ್ ಗೆ ಬಂದು‌ ಬೀಳುತ್ತಿದೆ.

Advertisement

ಇಂಥದೊಂದು ವಿಲಕ್ಷಣ‌ ಪ್ರಸಂಗ ಇಲ್ಲಿ ದಾಖಾಗುತ್ತಿದೆ. ಶಿರಸಿಯ ವಕೀಲ ರವೀಂದ್ರ ನಾಥ‌ ನಾಯ್ಕ ಅವರಿಗೂ ಬುಧವಾರ ಸಾಯಂಕಲ ಈ ಮಾದರಿಯ‌ ಮೆಸೇಜ್ ಬಂದಿದ್ದರೆ, ಇನ್ನೊಂದಡೆ ಹೋರಾಟಗಾರ ಪರಮಾನಂದ ಹೆಗಡೆ ಅವರ ಮಗಳಿಗೂ ಇದೇ ರೀತಿ‌ ಮೆಸೇಜ್ ಬಂದಿದೆ!

ಈಗಾಗಲೇ ಶಿರಸಿಯಲ್ಲಿ ‌ಪ್ರಥಮ ಬಾರಿಯ‌ ಲಸಿಕೆ ಪಡೆದು ಡೆಹರಾಡೂನಕ್ಕೆ ಹೋದ ನೌಕರಸ್ಥ ಯುವತಿಗೂ ಎರಡನೇ ಡೋಸ್ ಪಡೆದಿದ್ದಿದ್ದೀರಿ ಎಂಬ‌ ಮಾಹಿತಿ ಬಂದಿದೆ.

ಈ‌ ಮಧ್ಯೆ ಸೋಮನಳ್ಳಿಯ ರೈತರೋರ್ವರು‌ ಪ್ರಥಮ ಬಾರಿಗೆ ಲಸಿಕೆ ಹಾಕಿಸಿಕೊಂಡು ಎರಡನೇ ಡೋಸ್ ಗೆ ಹೋದರೆ ಪ್ರಥಮ‌ ಬಾರಿ ಪಡೆದ ಮಾಹಿತಿಯೇ ದಾಖಲು ಆಗಿಲ್ಲ!

ಲಸಿಕೆ ಹಂಚಿಕೆಯಲ್ಲಿ ಗೋಲ್‌ಮಾಲ್ ಆಗುತ್ತಿದೆಯಾ ಅಥವಾ ಕಂಪ್ಯೂಟರ್ ಸಂವಹನದ ಕೊರತೆಯಾ ಎಂಬುದು ತನಿಖೆ ಆಗಬೇಕಾಗಿದೆ ಎಂದು ಹೋರಾಟಗಾರ ಪರಮಾನಂದ ಹೆಗಡೆ ಉದಯವಾಣಿ‌ ಮೂಲಕ  ಆಗ್ರಹಿಸಿದ್ದಾರೆ.

Advertisement

ಒಮ್ಮೆ ಲಸಿಕೆ ಪಡೆದಿದ್ದೀರಿ ಎಂದು ದಾಖಲಾದರೆ ಜಿಲ್ಲಾ‌ ಕೇಂದ್ರದ ಆರೋಗ್ಯ ಕಚೇರಿ ಟೆಕ್ನಿಕಲ್ ಜನರೇ ಸರಿ‌ ಮಾಡಬೇಕು. ಬಹುತೇಕ ಜನರಿಗೂ ಈ ಬಗ್ಗೆ‌ ಮಾಹಿತಿ‌ ಇಲ್ಲ.

ಲಸಿಕೆ ಪಡೆಯದೇ ಇರುವಂತೆ ಇಲ್ಲ, ಆಧಾರ ನಂ‌ಬರ್ ಕೊಡದಿದ್ದರೆ ಲಸಿಕೆ ಇಲ್ಲ. ಕೊಟ್ಟರೆ ಪಡೆದಿದೆ‌ ಲಸಿಕೆ ಎಂದು ಆ್ಯಪ್ ಹೇಳುತ್ತಿದೆ. ಪೀಕಲಾಟಕ್ಕೆ ಕೋವಿಡ್ ಲಸಿಕೆ ಪಡೆಯುವವರು ಬಿದ್ದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next