Advertisement

ಕೋವಿಡ್‌ ಲಸಿಕೆಯನ್ನು ರಾಷ್ಟ್ರೀಯ ಆಂದೋಲನವನ್ನಾಗಿಸಿ: ಜಿಲ್ಲಾ ಕಾಂಗ್ರೆಸ್‌

07:37 PM May 27, 2021 | Team Udayavani |

ಉಡುಪಿ: ಕೋವಿಡ್‌ ಲಸಿಕೆ ತೆಗೆದುಕೊಳ್ಳುವುದನ್ನು ಕೇಂದ್ರ ಸರಕಾರ ಒಂದು ರಾಷ್ಟ್ರೀಯ ಆಂದೋಲನವನ್ನಾಗಿ ರೂಪಿಸಬೇಕು. ಲಸಿಕೆಯನ್ನು ದೇಶದ ಜನರಿಗೆ ಉಚಿತ ಮತ್ತು ಕಡ್ಡಾಯಗೊಳಿಸಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್‌ ಸರಕಾರವನ್ನು ಒತ್ತಾಯಿಸಿದೆ.

Advertisement

ಕೋವಿಡ್‌ ನಿರ್ವಹಣೆ ಮತ್ತು ಲಸಿಕೆ ಸರಬುರಾಜಿನಲ್ಲಿ ಸರಕಾರ ಎಡವಿದೆ. ರಾಜಕೀಯದ ಅಸ್ತಿತ್ವಕ್ಕಾಗಿ ಸುಳ್ಳು ಹೇಳಿಕೆಗಳ ಮೂಲಕ ಜನರನ್ನು ದಿಕ್ಕು ತಪ್ಪಿಸುತ್ತಿದೆ. 2ನೇ ಲಸಿಕೆಗಾಗಿಯೇ ಜನರು ಪರದಾಡುತ್ತಿದ್ದಾರೆ. 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವುದಾಗಿ ಹೇಳಿ, ಆನ್‌ಲೈನ್‌ ನೊಂದಣಿ ಹೆಸರಿನಲ್ಲಿ ಲಸಿಕಾ ಕೊರತೆ ಮರೆಮಾಚುವ ವ್ಯವಸ್ಥಿತ ನಾಟಕ ನಡೆಸುತ್ತಿದೆ. ಕೇಂದ್ರ ಸರಕಾರ ತನ್ನ ಆರ್ಥಿಕ ಲೆಕ್ಕಾಚಾರದಿಂದ ಹೊರ ಬಂದು ಸೂಕ್ತ ಕ್ರಮ ಕೈಗೊಳ್ಳ ಬೇಕು ಎಂದರು.

ಕೇಂದ್ರ ಸರಕಾರ ಕಳೆದ ಫೆ.ಯಲ್ಲಿ 50 ಕೋಟಿ ಜನರಿಗೆ ಉಚಿತ ಲಸಿಕೆಗಾಗಿ 35 ಸಾವಿರ ಕೋ.ರೂ. ಮೀಸಲಿಟ್ಟಿದೆ ಎಂದು ಹೇಳಿತ್ತಾದರೂ ವಾಸ್ತವದಲ್ಲಿ ಸಿರಮ್‌ ಇನ್ಸ್ಟಿಟ್ಯೂಟ್‌ ಆಫ್ ಇಂಡಿಯಾ ಲಸಿಕಾ ಸರಬರಾಜು ಸಮಸ್ಥೆಯಿಂದ ಮಾರ್ಚ್‌ ತಿಂಗಳಲ್ಲಿ ಪಡೆದದ್ದು ಕೇವಲ 2.10 ಕೋಟಿ ಡೋಸ್‌ ಮಾತ್ರ. ಈ ನಡುವೆ ಲಸಿಕೆಯನ್ನು ರಾಜ್ಯ ಸರಕಾರಗಳೇ ಪೂರೈಸಿಕೊಳ್ಳಬೇಕೆ ಅಥವಾ ಕೇಂದ್ರ ಸರಕಾರವೇ ಪೂರೈಸುತ್ತದೆಯೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲವೆಂದು ಹೇಳಿದರು.

ಆರೋಗ್ಯ ತುರ್ತು ಪರಿಸ್ಥಿತಿ ಸಂದರ್ಭ ಅದರ ಕೇಂದ್ರ ಸರಕಾರದ ಹೊಣೆಗಾರಿಕೆಯನ್ನು ತೆಗೆದುಕೊಳ್ಳಬೇಕು. ಆದರೆ ನಿಷ್ಕ್ರಿಯಗೊಂಡ ರಾಜ್ಯ ಸರಕಾರ ಇದನ್ನು ಪ್ರಶ್ನಿಸುವ ಧೈರ್ಯ ತೋರದೆ ಲಸಿಕೆಗಾಗಿ ಜನರನ್ನು ಬೀದಿಗೆ ಬೀಳಿಸಿದೆ ಎಂದು ಜಿಲ್ಲಾ ವಕ್ತಾರ ಬಿಪಿನಚಂದ್ರ ಪಾಲ್‌ ನಕ್ರೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next