ತುಮಕೂರು: ಕೋವಿಡ್ ಹೆಚ್ಛಳವಾಗಿರುವ ಹಿನ್ನೆಲೆ ಜನರು ಮುಂಜಾಗ್ರತಾ ಕ್ರಮವಾಗಿ ಕೋವಿಡ್ ಲಸಿಕೆ ಪಡೆದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಜಾಸ್ತಿಯಾಗಿ ಸೋಂಕಿನಿಂದ ಪಾರಾಗಬಹ ುದು. ಧೈರ್ಯವಾಗಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬಹುದು. ಯಾವುದೇ ರೀತಿಯಅಡ್ಡ ಪರಿಣಾಮಗಳಿಲ್ಲ ಎಂದು ಎಸ್‌ಎಸ್‌ಐಟಿಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್. ರವಿಪ್ರಕಾಶ್ ಅಭಿಪ್ರಾಯ ಪಟ್ಟರು.
ನಗರದ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಸಮೂಹ ಕಾಲೇಜುಗಳಲ್ಲಿನ ಪ್ರಾಧ್ಯಾಪಕರು ಮತ್ತು ಸಿಬ್ಬಂದಿಗೆಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಡೆದ ಲಸಿಕೆಅಭಿಯಾನದಲ್ಲಿ ಲಸಿಕೆ ಪಡೆದು ಮಾತನಾಡಿದ ಅವರು, ಕೋವಿಡ್ 2ನೇ ಅಲೆ ತೀವ್ರವಾಗಿ ಹರಡುತ್ತಿರುವುದರಿಂದ ನಾವೆಲ್ಲ ಬಹಳ ಎಚ್ಚರಿಕೆ ಇಂದ ಇರಬೇಕು. ಇದು ನಮ್ಮೆಲ್ಲರ ಕನಸನ್ನು ಹಾಳು ಮಾಡಿದೆ. ನೆಮ್ಮದಿ ಇಲ್ಲದಂತಾಗಿದೆ. ಆದ್ದರಿಂದಎಲ್ಲರೂ ತಪ್ಪದೆ ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ,ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡಾಗ ಮಾತ್ರ ಕೋವಿಡ್ ಮಹಾಮಾರಿಯನ್ನು ಓಡಿಸಲು ಸಾಧ್ಯ ಎಂದರು.
ದೇಶದಲ್ಲಿ ಇತ್ತೀಚೆಗೆ ಕೋವಿಡ್ 2ನೇ ಆರ್ಭಟ ಜಾಸ್ತಿ ಯಾಗುತ್ತಿದೆ. ಹೀಗಾಗಿ ಸೋಂಕಿತರ ಸಂಖ್ಯೆಯೂ ಗಣನೀಯವಾಗಿ ಏರಿಕೆ ಆಗುತ್ತಿದೆ. ಇದರಿಂದ ಪಾರಾಗಲು 45 ವರ್ಷ ಮೇಲ್ಪಟ್ಟ ಪ್ರತಿ ಯೊಬ್ಬರೂಕೊರೊನಾ ಲಸಿಕೆ ಪಡೆದುಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ಮಾಹಿತಿ ನೀಡಿ ಮನವರಿಕೆ ಮಾಡಿಕೊಟ್ಟರು.
ಕುಲಸಚಿವ ಡಾ. ಕರುಣಾಕರ್, ಕಾಲೇಜಿನ ಎನ್‌ಸಿಸಿ ಅಧಿಕಾರಿ ಡಾ.ಜಯಪ್ರಕಾಶ್, ಎನ್‌ಎಸ್ ಎಸ್ ಅಧಿಕಾರಿ ರವಿಕಿರಣ್, ಎನ್‌ಸಿಸಿ 4ನೇ ಬೆಟಾಲಿಯನ್ ಲೆ. ರಾಮಲಿಂಗಾರೆಡ್ಡಿ,ಲೆ.ಪ್ರದೀಪ್, ಜಿಲ್ಲಾ ಆರೋಗ್ಯ ಇಲಾಖೆ ಡಿಎಚ್‌ಒ ಡಾ.ನಾಗೇಶಪ್ಪ, ಟಿಎಚ್‌ಒ ಡಾ.ಮೋಹನ್, ಆರ್ ಪಿಎಚ್‌ಒ ಡಾ. ಕೇಶವರಾಜ್ ಇದ್ದರು.