Advertisement
ರಾಜ್ಯದ್ಯಾಂತ ಜಿಲ್ಲಾ, ತಾಲೂಕು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ, ವೈದ್ಯಕೀಯ ಕಾಲೇಜು, ಖಾಸಗಿ ಆಸ್ಪತ್ರೆ ಸೇರಿ 5,500 ಕ್ಕೂ ಹೆಚ್ಚು ಕಡೆಗಳಲ್ಲಿ ಕೊರೊನಾ ಲಸಿಕೆ ನೀಡಲಾಗುತ್ತದೆ. ಈ ಹಿಂದೆ 60 ವರ್ಷ ಮೇಲ್ಪಟ್ಟವರು ಮತ್ತು 45 – 59 ವರ್ಷ ಆರೋಗ್ಯ ಸಮಸ್ಯೆಯೊಂದಿರುವರಿಗೆ ಮಾತ್ರ ಕೊರೊನಾ ಲಸಿಕೆ ನೀಡಲಾಗುತ್ತಿತ್ತು. ಮುಂದುವರೆದ ಭಾಗವಾಗಿ ಕೇಂದ್ರ ಸರ್ಕಾರವು 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲು ಸೂಚನೆ ನೀಡಿದೆ.
Related Articles
Advertisement
ಕೋವಿನ್ ಆ್ಯಪ್ ಮೂಲಕ ಆನ್ ಲೈನ್ ನೋಂದಣಿ ಆಥವಾ ಸಮೀಪದ ಆಸ್ಪತ್ರೆಗೆ ತೆರಳಿ ಸ್ಥಳದಲ್ಲಿ ನೇರವಾಗಿ ನೋಂದಣಿ ಮಾಡಿಕೊಂಡು ಲಸಿಕೆ ಪಡೆಯ ಬಹುದಾಗಿದೆ. ನೋಂದಣಿ ಮತ್ತು ಲಸಿಕೆ ಸಮಯದಲ್ಲಿ ಕಡ್ಡಾಯವಾಗಿ ಗುರುತಿನ ಚೀಟಿ ಅವಶ್ಯಕವಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ, ಖಾಸಗಿಯಲ್ಲಿ 250 ರೂ. ದರವಿದೆ.
ಇದನ್ನೂ ಓದಿ:45+ ಇಂದಿನಿಂದ ಲಸಿಕೆ
ಲಸಿಕೆ ಲಭ್ಯವಿದೆಯೇ?
ಈವರೆಗೂ ರಾಜ್ಯದಲ್ಲಿ 52 ಲಕ್ಷಕ್ಕೂ ಅಧಿಕ ಡೋಸ್ ಕೊರೊನಾ ಲಸಿಕೆ ಕೇಂದ್ರ ಸರ್ಕಾರದಿಂದ ಬಂದಿದೆ. ಸದ್ಯ 37.5 ಲಕ್ಷ ಲಸಿಕೆ ವಿತರಿಸಲಾಗಿದೆ. ಬಾಕಿ 15 ಲಕ್ಷ ಡೋಸ್ ಲಸಿಕೆ ಲಭ್ಯವಿದೆ. ಈ ಪೈಕಿ 13.5 ಲಕ್ಷ ಡೋಸ್ ಕೋವಿಶೀಲ್ಡ್, 1.5 ಲಕ್ಷ ಡೋಸ್ ಕೋವ್ಯಾಕ್ಸಿನ್ ಇದೆ. ಜಿಲ್ಲಾ ಉಗ್ರಾಣಗಳಲ್ಲಿ ಶೇಖರಿಸಿಡಲಾಗಿದೆ. ಶೀಘ್ರದಲ್ಲೇ ಇನ್ನಷ್ಟು ಲಸಿಕೆ ರಾಜ್ಯಕ್ಕೆ ಬರಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಈವರೆಗೂ ರಾಜ್ಯದಲ್ಲಿ ಲಸಿಕೆ ಪಡೆದವರು
ಆರೋಗ್ಯ ಕಾರ್ಯಕರ್ತರು – 5.6 ಲಕ್ಷ
ಮುಂಚೂಣಿ ಕಾರ್ಯಕರ್ತರು – 2.3 ಲಕ್ಷ
45 ವರ್ಷ ಮೇಲ್ಪಟ್ಟವರು – 6 ಲಕ್ಷ
60 ವರ್ಷ ಮೇಲ್ಪಟ್ಟವರು – 19 ಲಕ್ಷ
ಒಟ್ಟು – 33 ಲಕ್ಷ