Advertisement
ಏನಿದು ಪ್ರಮಾಣ ಪತ್ರ?ಕೊರೊನಾಲಸಿಕೆ ಪಡೆದ ಬಳಿಕ ನಿಮ್ಮ ಮೊಬೈಲ್‌ಗೆ ಸಂದೇಶವೊಂದು ಬರುತ್ತದೆ. ಅದರಲ್ಲಿರುವ ಲಿಂಕ್ ಓಪನ್ ಮಾಡಿದರೆ, “ಲಸಿಕೆ ಪ್ರಮಾಣಪತ್ರ’ ಡೌನ್‌ಲೋಡ್ ಆಗುತ್ತದೆ. ಎರಡೂ ಡೋಸ್‌ನ ಬಳಿಕ ಬರುವ ಸಂದೇಶದಲ್ಲಿನ ಲಿಂಕ್ ಅನ್ನು ಅಂತಿಮ ಪ್ರಮಾಣ ಪತ್ರ ಎಂದು ಪರಿಗಣಿಸಲಾಗುತ್ತದೆ.
ಇದು ನೀವು ಯಶಸ್ವಿಯಾಗಿ ಲಸಿಕೆ ಸ್ವೀಕರಿಸಿದ್ದೀರಿ ಎಂಬುದನ್ನು ದೃಢಪಡಿಸುವ ಪ್ರಮಾಣ ಪತ್ರ. ಸದ್ಯಕ್ಕೆ ವಿದೇಶಗಳಿಗೆ ಪ್ರಯಾಣ ಬೆಳೆಸಬೇಕೆಂದರೆ ಈ ಪ್ರಮಾಣ ಪತ್ರ ತೋರಿಸುವುದು ಕಡ್ಡಾಯ. ನೀವು ವಿಮಾನ ಪ್ರಯಾಣ ಮಾಡದಿದ್ದರೂ ಪ್ರಮಾಣ ಪತ್ರ ಹೊಂದಿರಬೇಕು. ಏಕೆಂದರೆ ಮುಂದಿನ ದಿನಗಳಲ್ಲಿ ಸಾರ್ವಜನಿಕ ಸಾರಿಗೆ, ರೈಲ್ವೇ ಹಾಗೂ ಇತರ ಸೇವೆಗಳನ್ನು ಪಡೆಯಲು ಅದು “ದೃಢೀಕೃತ ಪುರಾವೆ’ ಎಂದು ಪರಿಗಣಿಸಲ್ಪಡಬಹುದು. ಆಧಾರ್ ನಂತೆ ಇದರ ಕಾಪಿ ಇಟ್ಟುಕೊಳ್ಳಬೇಕೇ?
ಬೇಕಾಗಿಲ್ಲ. ಏಕೆಂದರೆ, ನೀವು ಕೋವಿನ್ ಆ್ಯಪ್ ನಲ್ಲಿ ಯಾವಾಗ ಬೇಕಿದ್ದರೂ ಅದನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. ಸದಾಕಾಲ ನಿಮ್ಮ ಪ್ರಮಾಣ ಪತ್ರ ಲಭ್ಯವಿರುವಂತೆ ಕೋವಿನ್ ಪೋರ್ಟ ಲ್ ಅನ್ನು ಸಿದ್ಧಪಡಿಸಲಾಗಿದೆ. ಸೂಕ್ತ ಮಾಹಿತಿ ನೀಡಿ ಲಾಗ್ ಇನ್ ಆದರೆ ಸಾಕು. ಹಾರ್ಡ್ ಕಾಪಿ ಬೇಕೆಂದರೆ ಮುದ್ರಿಸಿ ಇಟ್ಟು ಕೊಳ್ಳಬಹುದು.
Related Articles
ಯುಎಇ, ಸೌದಿ ಅರೇಬಿಯಾ, ಒಮನ್, ದುಬಾೖ, ಕುವೈಟ್, ಮಾಲ್ಡೀವ್ಸ್, ನೇಪಾಲ ಬೆಲ್ಜಿಯಂ, ಇಟಲಿ ಹಾಗೂ ಇತರ ಕೆಲ ದೇಶಗಳಲ್ಲಿ ಭಾರತದ ಲಸಿಕೆ ಪ್ರಮಾಣಪತ್ರಕ್ಕೆ ಮಾನ್ಯತೆ ನೀಡಲಾಗಿದೆ. ಆದರೆ ಸದ್ಯಕ್ಕೆ ನಿರ್ದಿಷ್ಟ ಲಸಿಕೆಗಳಿಗೆ ಮಾತ್ರ ಎಂಬ ಷರತ್ತು ಹಾಕಲಾಗಿದೆ. ಭವಿಷ್ಯದಲ್ಲಿ ಇತರ ದೇಶಗಳೂ ಮಾನ್ಯತೆ ನೀಡಬಹುದು.
Advertisement
ಅದರಲ್ಲಿರುವ ಮಾಹಿತಿಯ ಮಹತ್ವಪ್ರಮಾಣಪತ್ರದಲ್ಲಿ ನಿಮ್ಮ ಹೆಸರು, ಜನ್ಮ ದಿನ, ಆಧಾರ್‌ನ ಕೊನೆಯ 4 ಅಂಕಿಗಳು, ಲಸಿಕೆ ಪಡೆದ ದಿನ, ಲಸಿಕೆಯ ಹೆಸರು ಮತ್ತು ಲಸಿಕೆಯ ಬ್ಯಾಚ್ ನಂಬರ್ ನಮೂದಿಸಿರಲಾಗುತ್ತದೆ. ಯಾವುದಾದರೂ ಬ್ಯಾಚ್‌ನ ಲಸಿಕೆಯಲ್ಲಿ ದೋಷ ಕಂಡುಬಂದರೆ, ಅಂಥ ಬ್ಯಾಚ್‌ನ ಲಸಿಕೆ ಪಡೆದವರ ಪತ್ತೆಗೆ ಇದು ನೆರವಾಗುತ್ತದೆ.