Advertisement

ಶೀಘ್ರ ಕೇರಳದಲ್ಲಿ ಲಸಿಕೆ ಪೂರ್ಣ?

11:39 PM Aug 08, 2021 | Team Udayavani |

ತಿರುವನಂತಪುರಂ/ಹೊಸದಿಲ್ಲಿ: ಪ್ರಸಕ್ತ ತಿಂಗಳ ಅಂತ್ಯದೊಳಗಾಗಿ ಕೇರಳದ ಎಲ್ಲ ಅರ್ಹ ಜನಸಂಖ್ಯೆಗೆ ಲಸಿಕೆ ವಿತರಣೆ ಪೂರ್ಣಗೊಳಿಸಲು ಯತ್ನಿಸಲಾಗುವುದು ಎಂದು ಸಿಎಂ ಪಿಣರಾಯಿ ವಿಜಯನ್‌ ರವಿವಾರ ಹೇಳಿದ್ದಾರೆ. ಈಗಾಗಲೇ ರಾಜ್ಯದ ಜನಸಂಖ್ಯೆಯ ಅರ್ಧಕ್ಕಿಂತಲೂ ಹೆಚ್ಚು ಮಂದಿ ಒಂದು ಡೋಸ್‌ ಲಸಿಕೆಯನ್ನು ಪಡೆದಿದ್ದಾರೆ.

Advertisement

ಆ.9ರಿಂದ 31ರವರೆಗೆ ರಾಜ್ಯವ್ಯಾಪಿ ಲಸಿಕೆ ವಿತರಣೆ ಅಭಿಯಾನವನ್ನು ಸರಕಾರ ಕೈಗೊಂಡಿದೆ. ಖಾಸಗಿ ಆಸ್ಪತ್ರೆಗಳಲ್ಲಿ 20 ಲಕ್ಷ ಡೋಸ್‌ ಲಸಿಕೆ ಇವೆ. ಅದರ ಜತೆಗೆ ಈ ತಿಂಗಳು ಕೇಂದ್ರ ಸರ್ಕಾರವು 24 ಲಕ್ಷ ಡೋಸ್‌ಗಳನ್ನು ರಾಜ್ಯಕ್ಕೆ ಒದಗಿಸಲಿದೆ ಎಂದೂ ಸಿಎಂ ಪಿಣರಾಯಿ ತಿಳಿಸಿದ್ದಾರೆ.

ನೂಳ್‌ಪುಳದಲ್ಲಿ ಶೇ.100 ಲಸಿಕೆ: ಕೇರಳದ ವಯನಾಡ್‌ ಜಿಲ್ಲೆಯ ನೂಳ್‌ಪುಳದಲ್ಲಿ ಶೇ.100ರಷ್ಟು ಲಸಿಕೆ ವಿತರಣೆ ಪೂರ್ಣಗೊಂಡಿದೆ. ಈ ಮೂಲಕ ಲಸಿಕೆ ನೀಡುವಿಕೆ ಪೂರ್ಣಗೊಳಿಸಿದ ಮೊದಲ ಬುಡಕಟ್ಟು ಪಂಚಾಯತ್‌ ಎಂಬ ಹೆಗ್ಗಳಿಕೆಗೆ ನೂಳ್‌ಪುಳ ಪಾತ್ರವಾಗಿದೆ ಎಂದು ಸಿಎಂ ಪಿಣರಾಯಿ ವಿಜಯನ್‌ ಹೇಳಿದ್ದಾರೆ.

ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 39,070 ಮಂದಿಗೆ ಸೋಂಕು ದೃಢಪಟ್ಟಿದ್ದು, 491 ಮಂದಿ ಮೃತಪಟ್ಟಿದ್ದಾರೆ. ಸಕ್ರಿಯ ಸೋಂಕಿತರ ಸಂಖ್ಯೆ 4,06,822ಕ್ಕಿಳಿದಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ಪ್ರಯಾಣ ನಿರ್ಬಂಧ ಸಡಿಲಿಕೆ: ಭಾರತಕ್ಕೆ ವಿಧಿಸಿದ್ದ ಪ್ರಯಾಣ ನಿರ್ಬಂಧವನ್ನು ಯುಕೆ ರವಿವಾರ ಸಡಿಲಿಕೆ ಮಾಡಿದೆ. ಅದರಂತೆ, ಇನ್ನು ಮುಂದೆ ಲಸಿಕೆಯ ಎರಡೂ ಡೋಸ್‌ ಪಡೆದುಕೊಂಡ ಭಾರತೀಯರು ಬ್ರಿಟನ್‌ ತಲುಪಿದಾಗ 10 ದಿನಗಳ ಕಡ್ಡಾಯ  ಹೊಟೇಲ್‌ ಕ್ವಾರಂಟೈನ್‌ನಿಂದ ವಿನಾಯಿತಿ ಪಡೆಯಲಿದ್ದಾರೆ.

Advertisement

ಜಾಗತಿಕ ಲಸಿಕೆ :

ಜಗತ್ತಿನಾದ್ಯಂತ 440 ಕೋಟಿ ಡೋಸ್‌ ಲಸಿಕೆ ವಿತರಣೆಯಾಗಿದೆ. ಇದು ಪ್ರತಿ 100 ಮಂದಿಗೆ 57 ಡೋಸ್‌ಗೆ ಸಮ. ಅಭಿವೃದ್ಧಿ ಹೊಂದಿರುವ ಅಥವಾ ಅಧಿಕ ಆದಾಯವುಳ್ಳ ಶ್ರೀಮಂತ ರಾಷ್ಟ್ರಗಳು ಪ್ರತಿ 100 ಮಂದಿಗೆ ಸುಮಾರು 100 ಡೋಸ್‌ವಿತರಣೆ ಪೂರ್ಣಗೊಳಿಸಿದೆ. ಕಡಿಮೆ ಆದಾಯವಿರುವ ಬಡ ದೇಶಗಳಲ್ಲಿ ಇನ್ನೂ ಪ್ರತಿ 100 ಮಂದಿಯಲ್ಲಿ ಕೇವಲ 1.5 ಡೋಸ್‌ಗಳಷ್ಟೇ ವಿತರಣೆಯಾಗಿವೆ ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆ.

ಯಾವ ದೇಶದಲ್ಲಿ ಎಷ್ಟು ವಿತರಣೆ? :

(ಸಿಂಗಲ್‌ ಡೋಸ್‌)

ಯುಎಇ              ಶೇ.81

ಮಾಲ್ಟಾ             ಶೇ.80

ಐಸ್‌ಲ್ಯಾಂಡ್‌   ಶೇ.76

ಸಿಂಗಾಪುರ         ಶೇ.76

ಉರುಗ್ವೆ               ಶೇ.75

ಕತಾರ್‌ ಶೇ.75

ಚಿಲಿ      ಶೇ.73

ಕೆನಡಾ ಶೇ.72

ಸ್ಪೇನ್‌   ಶೇ.70

ಪೋರ್ಚುಗಲ್‌   ಶೇ.70

ಯುಕೆ   ಶೇ.70

ಅಮೆರಿಕ             ಶೇ.58

ಭಾರತ ಶೇ. 44

Advertisement

Udayavani is now on Telegram. Click here to join our channel and stay updated with the latest news.

Next