Advertisement

ಹಿಂಜರಿಕೆಯಿಲ್ಲದೇ ಲಸಿಕೆ ಪಡೆಯಿರಿ : ಜಿಲ್ಲಾ ವೈದ್ಯಾಧಿಕಾರಿಯಿಂದ ಲಸಿಕೆ ಪಡೆಯದವರ ಮನವೊಲಿಕೆ

03:53 PM Dec 09, 2021 | Team Udayavani |

ನಾಗಮಂಗಲ: ಕೋವಿಡ್‌ ಲಸಿಕೆಯಿಂದ ಯಾವುದೇ ಸಮಸ್ಯೆ ಉಂಟಾಗದು, ಕೆಲವರು ಆತಂಕದಿಂದ ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯುತ್ತಿದ್ದು, ಅಂತಹವರು ಯಾವುದೇ
ಹಿಂಜರಿಕೆಯಿಲ್ಲದೇ ಲಸಿಕೆ ಪಡೆಯಬೇಕು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಧನಂಜಯ್‌ ತಿಳಿಸಿದರು.

Advertisement

ತಾಲೂಕಿನ ನಾಗಮಂಗಲ ಪಟ್ಟಣ, ದೊಡ್ಡಜಟಕ, ವಡೇರ್‌ಪುರ, ಬೆಳ್ಳೂರು ಪಟ್ಟಣ, ಬ್ರಹ್ಮದೇವರಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ನಂತರ ನಾಗಮಂಗಲದಲ್ಲಿ ಅವರು ಮಾತನಾಡಿದರು.

ಮನೆ ಮನೆ ಭೇಟಿ: ಜಿಲ್ಲೆಯಲ್ಲಿ ಸುಮಾರು 8 ರಿಂದ 9 ಸಾವಿರ ಜನ ಆತಂಕಗೊಂಡು ಲಸಿಕೆ ಪಡೆಯಲು ಮುಂದೆ ಬರುತ್ತಿಲ್ಲ. ನಾಗ ಮಂಗಲ ತಾಲೂಕಿನಲ್ಲಿ ಸುಮಾರು 900 ಮಂದಿ ಲಸಿಕೆ ಪಡೆದುಕೊಂಡಿಲ್ಲದ ಕಾರಣ, ಅಂತಹವರ ಮನೆ ಮನೆಗೆ ಭೇಟಿ ನೀಡಿ ಕೋವಿಡ್‌ನಿಂದಾಗುವ ಅನಾಹುತಗಳನ್ನು ಮನವರಿಕೆ ಮಾಡಿ ಲಸಿಕೆ ಪಡೆಯುವಂತೆ ಮನವೊಲಿಸುತ್ತಿದ್ದೇವೆ. ನಮ್ಮ ಮನವಿಗೆ ಸಾರ್ವಜನಿಕರು ಸ್ಪಂದನೆ ಮಾಡುತ್ತಿದ್ದಾರೆ ಎಂದರು.

ಎರಡನೇ ಡೋಸ್‌ ಶೇ.75ರಷ್ಟು: ಎರಡನೇ ಡೋಸ್‌ ಲಸಿಕೆ ಹಾಕಿಸಿಕೊಳ್ಳುವವರು ದಿನನಿತ್ಯ ಬಂದು ಲಸಿಕೆ ಪಡೆಯುತ್ತಿದ್ದಾರೆ. ಕೋವಿಶೀಲ್ಡ್‌ ಪಡೆದವರು 84 ದಿನಗಳ ನಂತರ ಮತ್ತು
ಕೋವ್ಯಾಕ್ಸಿನ್‌ ಲಸಿಕೆ ಪಡೆದವರಿಗೆ 28 ದಿನಗಳ  ನಂತರ ಲಸಿಕೆ ಹಾಕುತ್ತಿದ್ದು, ಜನತೆ ಸ್ಪಂದಿಸುತ್ತಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ 12.5 ಲಕ್ಷ ಮಂದಿಗೆ ಲಸಿಕೆ ಹಾಕಲಾಗಿದೆ. ಎರಡನೇ
ಡೋಸ್‌ ಶೇ.75ರಷ್ಟು ಲಸಿಕೆ ಹಾಕಲಾಗಿದೆ. ಶುಕ್ರವಾರ ಮತ್ತೆ ಲಸಿಕಾ ಮೇಳ ನಡೆಯಲಿದ್ದು, ಯಾರು ಲಸಿಕೆ ಹಾಕಿಸಿಕೊಂಡಿಲ್ಲವೋ ಅಂತಹವರು ಧೈರ್ಯವಾಗಿ ಲಸಿಕೆ ಪಡೆಯಬೇಕು ಎಂದು ಮನವಿ ಮಾಡಿದ ಅವರು, ಮಂಡ್ಯ ಜಿಲ್ಲೆಯಲ್ಲಿ ಲಸಿಕಾ ಮೇಳಗಳು ಯಶಸ್ವಿಯಾಗಿವೆ ಎಂದರು. ಲಸಿಕೆ ಪಡೆದ ನಂತರ ಕೆಲವರು ವ್ಯಾಕ್ಸಿನೇಷನ್‌ ಸರ್ಟಿಫಿಕೇಟ್‌ನ್ನು ಲ್ಯಾಮಿನೇಷನ್‌ ಮಾಡಿಸಿಕೊಂಡು ಜೋಪಾನವಾಗಿ ಇಟ್ಟುಕೊಂಡಿರುವುದು ಶ್ಲಾಘನೀಯ ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಸನ್ನ, ಮುಖ್ಯಾಧಿಕಾರಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರು, ಚುನಾಯಿತ ಪ್ರತಿನಿಧಿಗಳು ಲಸಿಕಾ ಕಾರ್ಯಕ್ರಮದಲ್ಲಿ
ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next