ಬಳ್ಳಾರಿ: ನಗರದ 34ನೇ ವಾರ್ಡ್‌ನ ವಿಮ್ಸ್ ಬಳಿಯ ಮದರ್ ಥೆರೆಸಾ ಆಶ್ರಮದ ಬುದ್ಧಿಮಾಂದ್ಯ ಮಕ್ಕಳಿಗೆ ಕೋವಿಡ್ ಲಸಿಕೆಯನ್ನು ಶನಿವಾರ ಹಾಕಿಸಲಾಯಿತು.
ವಾರ್ಡ್‌ನ ಪಾಲಿಕೆ ಸದಸ್ಯೆ ರಾಜೇಶ್ವರಿ ಸುಬ್ಬರಾಯುಡು ಅವರು ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಮಹಮ್ಮಾರಿ ಕೋವಿಡ್ ಸೋಂಕು ಕಳೆದ ಎರಡು ವರ್ಷಗಳಿಂದ ಭಾರತ ಸೇರಿ ವಿಶ್ವವನ್ನೇ ಕಾಡುತ್ತಿದೆ. ಈ ಸೋಂಕು ನಿರ್ಮೂಲನೆಗೆ ಸಾಮಾಜಿಕ ಅಂತರ,ಸ್ಯಾನಿಟೈಸ್, ಮಾಸ್ಕ್ ಬಳಕೆ ಜತೆಗೆ ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳುವುದೊಂದೇ ಮಾರ್ಗವಾಗಿದೆ.
ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಕೋವಿಡ್ ಸೋಂಕು ನಿರ್ಮೂಲನೆಗೆ ಸಹಕರಿಸಬೇಕು ಎಂದು ಅವರು ಕೋರಿದರು.
ಎಲ್ಲ ಅವಯವಗಳು ಚೆನ್ನಾಗಿ ಇರುವವರು ಸ್ವಯಂ ಪ್ರೇರಣೆಯಿಂದ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ.ಆದರೆ, ಬುದ್ಧಿಮಾಂದ್ಯ ಮಕ್ಕಳಿಗೆ ನಾವೇ ಮುಂದೆನಿಂತು ಲಸಿಕೆ ಹಾಕಿಸುವ ಕೆಲಸ ಮಾಡಬೇಕಾಗಿದೆ.ಈ ನಿಟ್ಟಿನಲ್ಲಿ ಮದರ್ ಥೆರೆಸಾ ಆಶ್ರಮದಲ್ಲಿನ 80ಬುದ್ದಿಮಾಂದ್ಯ ಮಕ್ಕಳಿಗೂ ಲಸಿಕೆ ಹಾಕಿಸಲು ಸಿದ್ಧತೆಕೈಗೊಳ್ಳಲಾಗಿದೆ. ಮೊದಲ ಹಂತದಲ್ಲಿ ಶನಿವಾರ 20 ಮಕ್ಕಳಿಗೆ ಲಸಿಕೆ ಹಾಕಲಾಗಿದ್ದು, ನಂತರ ಕೆಲವೇದಿನಗಳಲ್ಲಿ ಇನ್ನುಳಿದ ಮಕ್ಕಳಿಗೂ ಹಂತ ಹಂತವಾಗಿ ಲಸಿಕೆಯನ್ನು ಹಾಕಿಸಲಾಗುವುದು ಎಂದು ತಿಳಿಸಿದರು.
ಈ ವೇಳೆ ವಾರ್ಡ್‌ನ ಮುಖಂಡರಾದ ಸುಬ್ಬರಾಯುಡು, ಆಶ್ರಮದ ಸಿಬ್ಬಂದಿಗಳು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಇದ್ದರು.