Advertisement

“ಮೇಯಲ್ಲಿ ಸತ್ತವರು ಲಸಿಕೆ ಪಡೆದಿಲ್ಲ’

11:59 PM Sep 09, 2021 | Team Udayavani |

ಹೊಸದಿಲ್ಲಿ: ಸೋಂಕಿನಿಂದಾಗಿ ಉಂಟಾಗುವ ಸಾವಿನ ಪ್ರಮಾಣ ತಡೆಯಲು ಲಸಿಕೆ ಸಮರ್ಥವಾಗಿದೆ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ.  ಮೊದಲ ಡೋಸ್‌ ಶೇ. 96.6ರಷ್ಟು ಸಾವಿನ ಪ್ರಮಾಣ ತಡೆಯುತ್ತದೆ. 2ನೇ ಡೋಸ್‌ ಶೇ. 97.5ರಷ್ಟು ಸಾವಿನ ಪ್ರಮಾಣ ತಡೆಯುತ್ತದೆ ಎಂದು ನೀತಿ ಆಯೋಗದ ಸದಸ್ಯ ಡಾ| ವಿ.ಕೆ. ಪೌಲ್‌ ಹೇಳಿದ್ದಾರೆ.

Advertisement

ಹೊಸದಿಲ್ಲಿಯಲ್ಲಿ ಗುರುವಾರ ಮಾತನಾಡಿದ ಅವರು, ಎಪ್ರಿಲ್‌-ಮೇಯಲ್ಲಿ ಸೋಂಕು ಪರಿಸ್ಥಿತಿ ಕೈಮೀರಿದ ಸಂದರ್ಭದಲ್ಲಿ ಅಸು ನೀಗಿದವರು ಲಸಿಕೆ ಪಡೆದುಕೊಂಡಿರಲಿಲ್ಲ ಎಂದರು.

ದೇಶದಲ್ಲಿ 18 ವರ್ಷ ಮೇಲ್ಪಟ್ಟವರ ಪೈಕಿ ಶೇ. 58 ಮಂದಿಗೆ ಲಸಿಕೆಯ ಮೊದಲ ಡೋಸ್‌ ನೀಡಲಾಗಿದೆ. ಶೇ. 18ರಷ್ಟು ಮಂದಿಗೆ 2 ಡೋಸ್‌ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕೊರತೆ ಇಲ್ಲ:

ದೇಶದಲ್ಲಿ ಲಸಿಕೆ ಕೊರತೆ ಉಂಟಾಗಿಲ್ಲ. 35 ಜಿಲ್ಲೆಗಳಲ್ಲಿ ಪಾಸಿಟಿವಿಟಿ ಪ್ರಮಾಣ ಶೇ. 10ಕ್ಕಿಂತ ಹೆಚ್ಚಿದೆ. ವಿವಿಧ ಲಸಿಕೆಗಳ 2 ಮತ್ತು 3ನೇ ಹಂತದ ಪ್ರಯೋಗ ಮುಂದುವರಿದಿದ್ದು, ಫ‌ಲಿತಾಂಶಕ್ಕಾಗಿ ಕಾಯಲಾಗುತ್ತಿದೆ ಎಂದರು.

Advertisement

ಹಬ್ಬಕ್ಕೆ ಹೆಚ್ಚು ಜನರು ಬೇಡ:

ಗಣೇಶ ಚತುರ್ಥಿ ಸಹಿತ ಹಬ್ಬಗಳನ್ನು ಮನೆಯಲ್ಲೇ ಆಚರಿಸಬೇಕು ಎಂದು ಐಸಿಎಂಆರ್‌ ನಿರ್ದೇಶಕ ಡಾ| ಬಲರಾಂ ಭಾರ್ಗವ ತಿಳಿಸಿದ್ದಾರೆ. ಅಗತ್ಯ ಬಿದ್ದರೆ ಮಾತ್ರ ಪ್ರಯಾಣ ಮಾಡಿ ಎಂದೂ ಅವರು ಜನರಿಗೆ ಮನವಿ ಮಾಡಿದ್ದಾರೆ.

ಮಕ್ಕಳಿಗೆ ಲಸಿಕೆ: ಶಿಫಾರಸು ಮಾಡಿಲ್ಲ :

ಸೋಂಕಿನ ಹಿನ್ನೆಲೆಯಲ್ಲಿ ಮಕ್ಕಳಿಗೆ ಲಸಿಕೆ ಹಾಕಿಸಿಯೇ ಶಾಲೆಗೆ ತೆರಳುವಂತೆ ಮಾಡಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ. ಇದಕ್ಕೆ ಪ್ರತಿಕ್ರಿಯಿಸಿದ ಡಾ| ಪೌಲ್‌, ಜಗತ್ತಿನ ಯಾವುದೇ ವೈಜ್ಞಾನಿಕ ಸಮಿತಿ, ವೈರಾಣು ತಜ್ಞರು ಶಾಲೆ ತೆರೆ ಯುವುದಕ್ಕೆ ಮುನ್ನ ಮಕ್ಕಳಿಗೆ ಕಡ್ಡಾಯ ವಾಗಿ ಲಸಿಕೆ ನೀಡಬೇಕು ಎಂದು ಹೇಳಿಲ್ಲ. ಜಗತ್ತಿನಲ್ಲಿ ಕೇವಲ ಬೆರಳೆಣಿಕೆಯ ರಾಷ್ಟ್ರಗಳು ಮಾತ್ರ ಮಕ್ಕಳಿಗಾಗಿ ಲಸಿಕೆ ನೀಡುತ್ತಿವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next