ಚಿತ್ರದುರ್ಗ: ಪದವಿ ಕಾಲೇಜು ಆರಂಭಕ್ಕೆ ಮುನ್ನಾ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಹಾಗೂ ಕೊರೊನಾ ವಿರುದ್ಧ ಲಸಿಕೆ ಹಾಕುವ ಅಭಿಯಾನಕ್ಕೆ ನಗರದ ಎಸ್‌ಜೆಎಂ ಚಂದ್ರವಳ್ಳಿ ಕಾಲೇಜಿನಲ್ಲಿ ಚಾಲನೆ ನೀಡಲಾಯಿತು.ಕಾಲೇಜಿನ ಜಯದೇವ ಸಭಾಂಗಣದಲ್ಲಿ ನಡೆದಕೋವಿಡ್ ಲಸಿಕೆ ಅಭಿಯಾನ ಕಾರ್ಯಕ್ರಮಉದ್ಘಾಟಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬಕಲ್ಯಾಣಾಧಿಕಾರಿ ಡಾ.ರಂಗನಾಥ್ ಮಾತನಾಡಿ,ವಿದ್ಯಾರ್ಥಿಗಳು ಹಾಗೂ ಯುವಜನರುಕೋವಿಡ್ ಬಗ್ಗೆ ನಿರ್ಲಕ್ಷ್ಯ ವಹಿಸಿ, ಜೀವಕ್ಕೆಅಪಾಯ ತಂದುಕೊಳ್ಳುತ್ತಿರುವುದು ದುರಂತದ ಸಂಗತಿ ಎಂದರು.
ಕೋವಿಡ್ ಮೂರನೇ ಅಲೆ ಬರುವ ಸಂಭವವಿದ್ದು, ಮುನ್ನೆಚ್ಚರಿಕೆ ಅಗತ್ಯ. ಆದರೆ,ಅನಗತ್ಯವಾಗಿ ಭಯಪಟ್ಟುಕೊಳ್ಳದೆ ಕೊರೊನಾಲಸಿಕೆ ಹಾಕಿಸಿಕೊಂಡು ಸುರಕ್ಷಿತವಾಗಿರಬಹುದು.ಮೂರನೇ ಅಲೆ ಬರೀ ಮಕ್ಕಳಿಗೆ ಮಾತ್ರಬರುವುದಿಲ್ಲ ದೊಡ್ಡವರಿಗೂ ಬರುತ್ತದೆ ಎಂದು ಎಚ್ಚರಿಸಿದರು.
ಕೋವಿಡ್ ಕಡಿಮೆಯಾಗಿದೆ ಎಂಬಮನೋಭಾವ ಬಿಡಿ ಮುಂದಿನಎರಡು ವರ್ಷಗಳವರೆಗೆ ಕೋವಿಡ್‌ನಿರಂತರವಾಗಿರುತ್ತದೆ. ಕೊರೊನಾದ ಜತೆಯಲ್ಲೇ ನಾವು ಜೀವಿಸಬೇಕು. ನಿರ್ಲಕ್ಷ್ಯವೇ ಸಾವಿಗೆ ಕಾರಣವಾಗುತ್ತದೆ. ಯಾವ ಕಾರಣಕ್ಕೂ ಕೋವಿಡ್ ಕಡಿಮೆಯಾಗಿದೆ ಎಂದು ನಿರ್ಲಕ್ಷಿಸಬೇಡಿ ಎಂದು ಸಲಹೆ ನೀಡಿದರು.
ಲಸಿಕಾ ಅಭಿಯಾನದ ಅಧ್ಯಕ್ಷತೆ ವಹಿಸಿದ್ದಎಸ್‌ಜೆಎಂ ಕಾಲೇಜು ಪ್ರಾಚಾರ್ಯ ಡಾ|ಕೆ.ಸಿ. ರಮೇಶ್ ಮಾತನಾಡಿ, ಕೋವಿಡ್‌ವಿದ್ಯಾರ್ಥಿಗಳು ಸೇರಿದಂತೆ ಎಲ್ಲರಿಗೂ ಪಾಠ ಕಲಿಸಿದೆ. ವಿದ್ಯಾರ್ಥಿಗಳು ಸ್ವಚ್ಛತೆ ಹಾಗೂ ಸುಂದರ ಪರಿಸರಕ್ಕೆ ಆದ್ಯತೆ ನೀಡಿ ಸದೃಢತೆ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್‌ಲಸಿಕೆಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಪ್ರತಿವಿದ್ಯಾರ್ಥಿಯೂ ಲಸಿಕೆ ಹಾಕಿಸಿಕೊಳ್ಳಬೇಕು. ಲಸಿಕೆಹಾಕಿಸಿಕೊಳ್ಳದಿದ್ದರೆ ಕಾಲೇಜಿಗೆ ಪ್ರವೇಶವಿಲ್ಲ.ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಸಾಮಾಜಿಕಅಂತರ ಕಡ್ಡಾಯವಾಗಿ ಪಾಲಿಸಬೇಕು ಎಂದುಹೇಳಿದರು. ಕಾಲೇಜಿನ ಉಪ ಪ್ರಾಚಾರ್ಯಎಚ್.ಕೆ.ಶಿವಪ್ಪ, ನ್ಯಾಕ್ ಸಂಯೋಜಕ ಡಾ|ಆರ್.ವಿ. ಹೆಗಡಾಳ್ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ| ರೇವಣ್ಣ ಕಾರ್ಯಕ್ರಮ ನಿರೂಪಿಸಿದರು.
ಆನಂತರ ನಡೆದಲಸಿಕಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳುಹಾಗೂ ಸಾರ್ವಜನಿಕರು ಸೇರಿದಂತೆ 358 ಮಂದಿ ಲಸಿಕೆ ಪಡೆದರು. ಕೆಲ ವಿದ್ಯಾರ್ಥಿಗಳು ಲಸಿಕೆ ಹಾಕಿಸಿಕೊಳ್ಳದೆ ತಿರಸ್ಕರಿಸಿದ ಪ್ರಸಂಗವೂ ನಡೆಯಿತು. ಈ ವೇಳೆ ಪ್ರಾಚಾರ್ಯ ಕೆ.ಸಿ. ರಮೇಶ್ ಅವರು ಲಸಿಕೆ ಕುರಿತು ಮಾಹಿತಿ ನೀಡಿ ಮನವೊಲಿಸಿದರು.