ಬಂಗಾರಪೇಟೆ: ಕೋವಿಡ್ ನಿಂದದಿಂದ ಜೀವ ಕಾಪಾಡಿ ಕೊಂಡರೆ ಮಾತ್ರ ಮುಂದಿನ ಜೀವನ ಸುಗಮವಾಗಲಿದ್ದು, ಆರೋಗ್ಯವಂತ ರಾಗಲು ಪ್ರತಿಯೊಬ್ಬರೂ ಕಡ್ಡಾಯವಾಗಿ ಲಸಿಕೆಯನ್ನು ಪಡೆಯಬೇಕು ಎಂದು ಚಿಕ್ಕಅಂಕಂಡಹಳ್ಳಿ ಗ್ರಾಪಂ ಅಧ್ಯಕ್ಷ ಸಿ.ಎಂ. ಹರೀಶ್ ಕುಮಾರ್ ಸಲಹೆ ನೀಡಿದರು.
ತಾಲೂಕಿನ ಚಿಕ್ಕಅಂಕಂಡಹಳ್ಳಿ ಗ್ರಾಪಂನ ಬೀರಂಡಹಳ್ಳಿ ಗ್ರಾಪಂನಲ್ಲಿ ಲಸಿಕೆ ಹಾಕಿಸಲು ಚಾಲನೆ ನೀಡಿ ಮಾತನಾಡಿ, ಬೀರಂಡಹಳ್ಳಿ ಗ್ರಾಪಂ ದಲ್ಲಿ 200 ಜನರು ಲಸಿಕೆ ಹಾಕಿ ಕೊಂಡಿ ರುವುದು ನಿಜಕ್ಕೂ ಸಂತಸ ತಂದಿದ್ದು, ಸೋಂಕಿನ 2ನೇ ಅಲೆ ಜನರ ಪ್ರಾಣದಲ್ಲಿ ಚಲ್ಲಾಟವಾಡುತ್ತಿದ್ದು, ಈಗಾಗಲೇ ಸಾಕಷ್ಟು ಜನ ಜೀವವನ್ನು ಕಳೆದುಕೊಂಡಿದ್ದಾರೆ ಎಂದರು.
ಸೋಂಕಿನ ಲಕ್ಷಣಗಳು ಕಂಡುಬಂದ ಕೂಡಲೆ ಮನೆಯಲ್ಲಿ ಕ್ವಾರಂಟೈನ್ ಆಗದೆ ತುರ್ತಾಗಿ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕು. ಸೋಂಕಿತರು ಮನೆಯಲ್ಲಿ ಕ್ವಾರೈಂಟೈನ್ ಆದರೆ ಮನೆಯ ಇತರೆ ಸದಸ್ಯರಿಗೆ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಮನೆಯಲ್ಲಿ ಕ್ವಾರಂಟೈನ್ ಇರುವ ಸೋಂಕಿತರು ಸಾರ್ವಜನಿಕ ಸ್ಥಳಗಳಲ್ಲಿ ತಿರುಗಾಡಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಕೋವಿಡ್ 3ನೇ ಅಲೆ ತುಂಬಾ ಗಂಭೀರವಾಗಿದ್ದು, ಮಕ್ಕಳನ್ನು ಕಾಡಲಿದೆ ಎಂದು ತಜ್ಞರು ಮಾಹಿತಿಯನ್ನು ನೀಡಿದ್ದು, ಪೋಷಕರು ಮಕ್ಕಳ ಬಗ್ಗೆ ಹೆಚ್ಚಿನ ಗಮನ ಹರಿಸ ಬೇಕು. ಚಿಕ್ಕಅಂಕಂಡಹಳ್ಳಿ ಗ್ರಾಪಂನ ಎಲ್ಲಾ ಗ್ರಾಮಗಳಿಗೆ ಲಸಿಕೆ ಹಾಕಲು ಲಸಿಕೆ ಕೊರತೆ ಅಭಾವವಿಲ್ಲದೇ ಇದ್ದು, ಸಾರ್ವಜನಿಕರು ಇಲ್ಲಸಲ್ಲದ ಮಾತುಗಳಿಗೆ ಗಮನ ಕೊಡದೆ ಆರೋಗ್ಯದ ದೃಷ್ಟಿಯಿಂದ ಕಡ್ಡಾಯವಾಗಿಲಸಿಕೆ ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ಎಸ್.ಎನ್.ಯುವ ಸೇನೆ ಮುಖಂಡರಾದ ಅನಿಲ್ ಶಿವು, ರಾಜೇಶ್, ಚಂದ್ರ, ಶಶಿ ಇತರರಿದ್ದರು.