Advertisement
ಭಾರತಕ್ಕೆ ಲಸಿಕೆ ಯಾವಾಗ?ಭಾರತ ಇದುವರೆಗೆ ಯಾವುದೇ ವಿದೇಶಿ ಲಸಿಕೆ ಉತ್ಪಾದನಾ ಸಂಸ್ಥೆಗಳ ಜತೆ ಖರೀದಿ ಒಪ್ಪಂದ ಮಾಡಿ ಕೊಂಡಿಲ್ಲ. ಆದರೆ, ಆಕ್ಸ್ ಫರ್ಡ್ – ಅಸ್ಟ್ರಾಜೆನಿಕಾ ಮತ್ತು ನೊವಾವ್ಯಾಕ್ಸ್ ಲಸಿಕೆ ಪೂರೈಸಲು ಭಾರತ ನಿರ್ಧರಿಸಿದೆ. ಇವೆರಡೂ ಲಸಿಕೆಗಳನ್ನು ಪುಣೆಯ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ದೇಶೀಯವಾಗಿ ಉತ್ಪಾದಿಸುತ್ತಿದೆ. ಒಂದು ವೇಳೆ ಇವು ಸಫಲತೆ ಕಂಡರೆ, ಉತ್ಪಾದನೆಯ ಅರ್ಧದಷ್ಟು ಲಸಿಕೆಗಳನ್ನು ಭಾರತವೇ ಬಳಸಿಕೊಳ್ಳಲಿದೆ. ಮಧ್ಯಂತರ ವಿಶ್ಲೇಷಣೆ ಪ್ರಕಾರ, ಇವೆರಡೂ ಲಸಿಕೆಗಳು ಮುಂದಿನ ವರ್ಷದ ಮೊದಲ ತ್ತೈಮಾಸಿಕದಲ್ಲಿ ಲಭ್ಯವಾಗುವ ಸಾಧ್ಯತೆ ಇದೆ.
ಕೊರೊನಾ ಸೋಂಕಿನ ಬಿಕ್ಕಟ್ಟು, ಲಸಿಕೆ ಉತ್ಪಾದನೆ ಮತ್ತು ಹಂಚಿಕೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಸಿಎಂಗಳ ಜತೆ ಮಂಗಳವಾರ ಚರ್ಚೆ ನಡೆಸಲಿದ್ದಾರೆ. ಬೆಳಗ್ಗೆ 10ರಿಂದ ವಿಡಿಯೊ ಕಾನ್ಫರೆನ್ಸ್ ಆರಂಭವಾಗಲಿದೆ. ಲಸಿಕೆ ಬರುವ ದಿನಾಂಕ ವ್ಯತ್ಯಾಸವಾಗುವುದೇಕೆ?
ಲಸಿಕೆ ಪ್ರಯೋಗಕ್ಕೆ ಒಳಪಟ್ಟ ಪ್ರದೇಶದ ಸೋಂಕುಗಳ ಏರಿಳಿತದ ಮೇಲೆ ಇದು ನಿರ್ಧರಿತವಾಗುತ್ತದೆ. ಉದಾ: ಆಕ್ಸ್‌ಫರ್ಡ್- ಅಸ್ಟ್ರಾಜೆನಿಕಾ (ಮೇ) ಪ್ರಯೋಗಗಳು, ಫೈಜರ್ ಮತ್ತು ಮಾಡೆರ್ನಾಗಿಂತ (ಎರಡೂ ಜುಲೈ) ಮೊದಲೇ ಆರಂಭಗೊಂಡಿತ್ತು. ಆದರೆ, ಈ ಲಸಿಕೆಯ 3ನೇ ಹಂತದ ಪ್ರಯೋಗ ನಡೆಯುತ್ತಿರುವ ಇಂಗ್ಲೆಂಡ್- ಬ್ರೆಜಿಲ್‌ನಲ್ಲಿ ಸೋಂಕಿನ ತೀವ್ರಗತಿ ಅಷ್ಟಾಗಿಲ್ಲ. ಅಮೆರಿಕ ಈಗಾಗಲೇ ಪ್ರಯೋಗಕ್ಕೆ ಅಗತ್ಯವಿರುವ ಸೋಂಕಿನ ಪ್ರಮಾಣವನ್ನು ತಲುಪಿದ್ದು, “ಫೈಜರ್’ ಈಗ ಮುಂಚೂಣಿಗೆ ಬಂದಿದೆ.
Related Articles
ಕೇಂದ್ರ ಸರಕಾರದ ಸದ್ಯದ ಅಂದಾಜಿನ ಪ್ರಕಾರ, ಪ್ರಾಥಮಿಕ ಆದ್ಯತೆಯಲ್ಲಿ 25-30 ಕೋಟಿ ಮಂದಿಗೆ ನೀಡಲು 50-60 ಕೋಟಿ ಡೋಸ್‌ಗಳು ಬೇಕು. ಒಟ್ಟು ಇಡೀ ದೇಶಕ್ಕೆ 200-250 ಕೋಟಿ ಡೋಸ್‌ಗಳು ಅವಶ್ಯ. 4 ಶ್ರೇಣಿಗಳಲ್ಲಿ ಲಸಿಕೆ ನೀಡಲು ಸರಕಾರ ತೀರ್ಮಾನಿಸಿದೆ.
Advertisement