ಯಳಂದೂರು: ಕೋವಿಡ್ ಸೋಂಕು ತಡಗೆ 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಮುಖ್ಯಾಧಿಕಾರಿ ಎಂ.ಸಿ. ನಾಗರತ್ನ ಮನವಿ ಮಾಡಿದರು.
ಪಟ್ಟಣ ಪಂಚಾಯಿತಿಯಿಂದ ಸೋಮವಾರ ಹಮ್ಮಿಕೊಂಡಿದ್ದಲಸಿಕಾ ಉತ್ಸವದ ಅರಿವು ಜಾಥಾಕ್ಕೆ ಚಾಲನೆ ನೀಡಿ ಮಾತ ನಾಡಿದ ಅವರು, ನಮ್ಮ ದೇಶದಲ್ಲಿ ಉಚಿತ ಲಸಿಕೆ ನೀಡಲಾಗುತ್ತಿದೆ. ಇದು ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ಕೋವಿಡ್ ವಿರುದ್ಧ ಹೋರಾಡಲು ನಮ್ಮ ದೇಹವನ್ನು ಸಜ್ಜುಗೊಳಿಸು ತ್ತದೆ. ಹೀಗಾಗಿ ತಪ್ಪದೆ ಲಸಿಕೆ ಹಾಕಿಸಿಕೊಳ್ಳಬೇಕು. ಜತೆಗೆ ಜನಬಿಡ ಪ್ರದೇಶಗಳಲ್ಲಿ ಕಡ್ಡಾಯ ವಾಗಿ ಮಾಸ್ಕ್ ಧರಿಸಬೇಕು. ಇಲ್ಲದಿದ್ದರೆ ದಂಡ ವಿಧಿಸ ಲಾಗುವುದು. ವರ್ತಕರು ತಮ್ಮ ಅಂಗಡಿಗೆ ಬರುವ ಗ್ರಾಹಕರಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಕೋರಿದರು.
ಪಟ್ಟಣದ ಬಸ್ ನಿಲ್ದಾಣ, ದೊಡ್ಡಅಂಗಡಿಬೀದಿ, ಬಳೇ ಪೇಟೆ, ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಜಾಥಾ ಮೂಲಕ ಅರಿವು ಮೂಡಿಸಲಾಯಿತು. ಈ ವೇಳೆ ಪಪಂ ಅಧ್ಯಕ್ಷೆ ಶಾಂತಮ್ಮ, ಸದಸ್ಯರಾದ ಮಹೇಶ್, ಪ್ರಭಾವತಿ, ಮಹದೇವ ನಾಯಕ, ಮಂಜು, ರವಿ, ರಾಜಸ್ವ ನಿರೀಕ್ಷಕ ನಂಜುಂಡಶೆಟ್ಟಿ, ಆಹಾರ ನಿರೀಕ್ಷಕ ಮಹೇಶ್ ಕುಮಾರ್, ಲಕ್ಷ್ಮೀ, ಜಯಲಕ್ಷ್ಮೀ, ಮಲ್ಲಿ ಕಾರ್ಜುನ, ರಘು, ರಾಜು, ಪರಶಿವ, ನಿಂಗರಾಜು ಇತರರಿದ್ದರು.
ತಾಲೂಕಿನಲ್ಲಿ 7,701 ಮಂದಿಗೆ ಲಸಿಕೆ :
ಯಳಂದೂರು ತಾಲೂಕಿನಲ್ಲಿ 45 ವರ್ಷ ಮೇಲ್ಪಟ್ಟವರು 23,086 ಮಂದಿ ಇದ್ದಾರೆ. ಈ ಪೈಕಿ ಇದುವರೆಗೆ 7701 ಮಂದಿಗೆ ಕೋವಿಡ್ ಲಸಿಕೆ ಹಾಕಲಾಗಿದೆ. ಶೇ.33ರಷ್ಟು ಗುರಿತಲುಪಲಾಗಿದೆ. ಇನ್ನೂ 15,385 ಮಂದಿ ಲಸಿಕೆ ಹಾಕಿಸಿಕೊಳ್ಳಬೇಕಿದೆ. ತಾಲೂಕಿನಲ್ಲಿತಾಲೂಕು ಸಾರ್ವಜನಿಕ ಆಸ್ಪತ್ರೆ ಸೇರಿದಂತೆ 4 ಪ್ರಾಥಮಿಕ ಆರೋಗ್ಯ ಕೇಂದ್ರ, 14 ಗ್ರಾಮಗಳಲ್ಲಿ ಲಸಿಕೆ ಕೇಂದ್ರ ಸೇರಿದಂತೆ ಒಟ್ಟು 19 ಕಡೆ ಲಸಿಕೆ ನೀಡಲಾಗುತ್ತಿದೆ.