Advertisement
ಜಿಲ್ಲೆಯಾದ್ಯಂತ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕಾ ಅಭಿಯಾನಕ್ಕೆ ಚಾಲನೆ. ಚಾಮರಾಜನಗರದ ಸರ್ಕಾರಿ ವೈದ್ಯಕೀಯ ಕಾಲೇಜ್ ನಲ್ಲಿ ಡಿ ಗ್ರೂಪ್ ನೌಕರ ಮಂಜುನಾಥ್ ಎಂಬುವರಿಗೆ ಕೋವ್ಯಾಕ್ಸಿನ್ ಲಸಿಕೆ ಹಾಕುವ ಮೂಲಕ ಚಾಲನೆ ನೀಡಲಾಯಿತು.
ಜಿಲ್ಲೆಯ ಕೊಳ್ಳೇಗಾಲದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡಿ ಗ್ರೂಪ್ ನೌಕರ ಪ್ರಕಾಶ್ ಎಂಬಾತ ಕೊಳ್ಳೇಗಾಲ ತಾಲೂಕಿನಲ್ಲಿ ಮೊದಲಿಗನಾಗಿ ಲಸಿಕೆ ಪಡೆದು ಕೊಂಡಿದ್ದಾರೆ. ಲಸಿಕೆ ಕುರಿತು ಮಾತನಾಡಿದ ಮಂಜುನಾಥ್ ಅವರು ಮೊದಲು ಹೇಗಿದ್ದೆನೋ ಈಗಲು ಹಾಗೆಯೆ ಇದ್ದೇನೆ ಜನ ಭಯಪಡುವ ಅವಶ್ಯಕತೆ ಇಲ್ಲ, ಜ್ವರ ಬಂದರೆ ಇಂಜೆಕ್ಷನ್ ತೆಗೆದುಕೊಳ್ಳುವುದಿಲ್ಲವೇ, ಹಾಗೆಯೇ ಕೋವ್ಯಾಕ್ಸಿನ್ ಲಸಿಕೆ ಪಡೆದಿದ್ದೇನೆ ಯಾವುದೇ ತೊಂದರೆ ಇಲ್ಲದೆ ಆರಾಮವಾಗಿದ್ದೇನೆ ಎಂದಿದ್ದಾರೆ.
Related Articles
Advertisement
ಮೊದಲನೆ ಹಂತದಲ್ಲಿ 814 ಮಂದಿಗೆ ಲಸಿಕೆ ನೀಡಲು ತೀರ್ಮಾನ ಮಾಡಲಾಗಿದೆ. ಮೊದಲ ದಿನ 600 ಜನರಿಗೆ ಅಂತೆಯೇ ಸೋಮವಾರ ಉಳಿದ 214 ಮಂದಿಗೆ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಮದ್ಯಾಹ್ನದ ವರೆಗೆ ಸುಮಾರು 320 ಮಂದಿಗೆ ಲಸಿಕೆ ನೀಡಲಾಗಿದೆ.