ನವ ದೆಹಲಿ : ದೇಶದಲ್ಲಿ ಕೋವಿಡ್ ಸೋಂಕಿನ ನಿಯಂತ್ರಣ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಲಸಿಕೆಯ ಲಸಿಕೆಯನ್ನು ದೇಶದ ಪ್ರತಿಯೊಬ್ಬ ನಾಯಕನಿಗೂ ಪೂರೈಸುವ ನಿಟ್ಟಿನಲ್ಲಿ ಸಮರೋಪಾದಿಯಲ್ಲಿ ಹೋರಾಡುತ್ತಿದೆ.
ಕೇಂದ್ರ ಆರೋಗ್ಯ ಸಚಿವಾಲು ಈ ಹಿನ್ನೆಲೆಯಲ್ಲಿ ಅವಿರತ ಶ್ರಮಿಸುತ್ತಿದ್ದು, ಲಸಿಕಾ ಸ್ಲಾಟ್ ಬುಕ್ ಮಾಡುವುದಕ್ಕೆ ಉಪಕ್ರಮವಾಗಿ ಕೆಲವು ಅಪ್ಲಿಕೇಶನ್ ಗಳ ಅನುಕೂಲತೆಗಳನ್ನು ದೇಶದ ನಾಗರಿಕರಿಗೆ ನೀಡುತ್ತಿದೆ.
ಇದನ್ನೂ ಓದಿ : ಖ್ಯಾತ ಸ್ಪಿನ್ನರ್ ಗೆ ಮುಳುವಾದ ICL ಸೇರ್ಪಡೆ; ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಚಾಲಕ ವೃತ್ತಿವರೆಗೆ
ಹೌದು, ಇನ್ಮುಂದೆ ಲಸಿಕೆ ಪಡೆಯಲು ಗೂಗಲ್ ನಲ್ಲಿಯೂ ಲಸಿಕಾ ಸ್ಲಾಟ್ ಬುಕ್ ಮಾಡಬಹುದು ಎಂದು ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ ತಮ್ಮ ಅಧಿಕೃತ ಟ್ವೀಟರ್ ಖಾತೆಯ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಲ್ಲದೇ, ಹೇಗೆ ಬಳಸಬಹುದು ಎಂದು ಕೂಡ ತಿಳಿಸಲಾಗಿದೆ. ಗೂಗಲ್‌ಗೆ ಹೋಗಿ ಮತ್ತು ಕೋವಿಡ್ ವ್ಯಾಕ್ಸಿನ್ ನಿಯರ್ ಮಿ’ / Covid Vaccine Near Me ಎಂದು ಸರ್ಚ್ ಮಾಡಿ. ಇದರ ನಂತರ ನಿಮ್ಮ ಹತ್ತಿರದ ಲಸಿಕೆ ಕೇಂದ್ರ ಮತ್ತು ಅಲ್ಲಿ ಲಸಿಕೆಯ ಲಭ್ಯತೆಗೆ ಸಂಬಂಧಿಸಿದ ಮಾಹಿತಿಯನ್ನು ನೀವು ಪಡೆಯುತ್ತೀರಿ. ಸ್ಲಾಟ್ ಬುಕ್ ಮಾಡಲು ‘ಬುಕ್ ಅಪಾಯಿಂಟ್ಮೆಂಟ್’ ಮೇಲೆ ಕ್ಲಿಕ್ ಮಾಡಬೇಕು ಎಂದು ತಿಳಿಸಿದ್ದಾರೆ.
ಇನ್ನು, ಈ ಬಗ್ಗೆ ಪ್ರತಿಕ್ರಿಯಿಸಿದ ಗೂಗಲ್ ಸಂಸ್ಥೆ, ಕೋವಿಡ್ ಲಸಿಕೆ ಲಭ್ಯತೆಯ ಮಾಹಿತಿಯೊಂದಿಗೆ ಇದುವರೆಗೆ ದೇಶದಾದ್ಯಂತ 13,000 ಕ್ಕೂ ಹೆಚ್ಚು ಸ್ಥಳಗಳಲ್ಲಿ ಬಳಕೆದಾರರಿಂದ ಸ್ಲಾಟ್ ಗಳನ್ನು ಬುಕ್ ಮಾಡಲಾಗಿದೆ ಎಂದಿದೆ.
ಇದನ್ನೂ ಓದಿ : ಭಾರತದಲ್ಲಿ ಬಿಡುಗಡೆಯಾಗಿದೆ ಸ್ಯಾಮ್ ಸಂಗ್ ನ ಎ52ಎಸ್ 5ಜಿ ಸ್ಮಾರ್ಟ್ ಫೋನ್.! ಇಲ್ಲಿದೆ ಮಾಹಿತಿ