ಗುಬ್ಬಿ: ಕೋವಿಡ್ ಸೋಂಕು ಲಸಿಕಾವಿತರಣಾ ಅಭಿಯಾನ ಕಾರ್ಯಕ್ರಮವನ್ನುತಾಲೂಕಾದ್ಯಂತ ತೀವ್ರಗತಿಯಲ್ಲಿನಡೆಸಬೇಕು ಹಾಗೂ ಕುಟುಂಬದಪ್ರತಿಯೊಬ್ಬ ವ್ಯಕ್ತಿಯು ಕೊರೊನಾ ಲಸಿಕೆಹಾಕಿಸಿಕೊಳ್ಳಬೇಕು ಎಂದು ವಕೀಲರಸಂಘದ ಆಧ್ಯಕ್ಷ ಕೆ.ಜಿ ನಾರಾಯಣ್‌ಅಭಿಪ್ರಾಯಪಟ್ಟರು.
ಲಸಿಕೆ ಕಡ್ಡಾಯ : ಪಟ್ಟಣದ ನ್ಯಾಯಾಲಯಆವರಣದಲ್ಲಿ ವಕೀಲರ ಕುಟುಂಬಕ್ಕೆಹಮ್ಮಿಕೊಂಡಿದ್ದ ಲಸಿಕಾ ಅಭಿಯಾನದಲ್ಲಿಮಾತನಾಡಿದ ಅವರು, ವಕೀಲರಕುಟುಂಬಕ್ಕೆ ಇಂದು ನೂರು ಡೋಸ್ ಲಸಿಕೆಹಾಕುತ್ತಿದ್ದು, ಎಲ್ಲರೂ ಲಸಿಕೆಹಾಕಿಸಿಕೊಳ್ಳಬೇಕು.
ಜನರು ಕೊರೊನಾದಬಗ್ಗೆ ತಾತ್ಸಾರ ಮನೋಭಾವನೆ ಬಿಟ್ಟು,ಧೈರ್ಯದಿಂದಲಸಿಕೆಯನ್ನುಕಡ್ಡಾಯವಾಗಿಪಡೆಯಬೇಕು ಎಂದು ತಿಳಿಸಿದರು.
ನಾಗರಿಕರಿಗೆ ಎಚ್ಚರಿಕೆ ಇರಲಿ:ಕಾರ್ಯದರ್ಶಿಶಾಂತಗೌಡ ಮಾತನಾಡಿ, ಕೊರೊನಾಎರಡನೇ ಅಲೆಯ ಪರಿಣಾಮದಿಂದಸಾಕಷ್ಟುಕಷ್ಟ-ನಷ್ಟಗಳನ್ನುಅನುಭವಿಸಿರುವಜನರು ಮೂರನೇ ಅಲೆಯಿಂದ ಬರುವಸಂಕಷ್ಟವನ್ನು ಎದುರಿಸಬೇಕಾಗಿದೆ.
ಈಗಾಗಲೇ ಸಂಪೂರ್ಣವಾಗಿ ಅನ್‌ಲಾಕ್‌ಆಗಿರುವುದರಿಂದ ಸಾರ್ವಜನಿಕರುಕೊರೊನಾ ನಿಯಮ ಎಚ್ಚರಿಕೆಯಿಂದ ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ ಎಂದರು.ವಕೀಲರ ಸಂಘದ ಉಪಾಧ್ಯಕ್ಷ ಕೆ.ಎಸ್‌ಮಂಜುನಾಥ್, ಜಂಟಿ ಕಾರ್ಯದರ್ಶಿಸುರೇಶ್, ಖಜಾಂಚಿ ಪರಮೇಶ್, ವಕೀಲೆಟಿ.ಸಿ ಪ್ರಮೀಳಾ, ಸಂತೋಷ್,ಚಿದಾನಂದ್, ಕ್ಷೀರಕುಮಾರ್, ಪುಷ್ಪಾ,ಸುಶೀಲಾ, ಆರೋಗ್ಯಾಧಿಕಾರಿ ಡಾ.ಬಿಂಧುಮಾಧವ್, ಆಸ್ಪತ್ರೆ ಸಿಬ್ಬಂದಿಶಾಂತಮ್ಮ ಹಾಗೂ ಇನ್ನಿತರರು ಇದ್ದರು.