ಚಾಮರಾಜನಗರ: ಅಂತಾರಾಷ್ಟ್ರೀಯ ಯೋಗ ದಿನದಅಂಗವಾಗಿ ಸೋಮವಾರ ಜಿಲ್ಲಾದ್ಯಂತ ವಿಶೇಷಕೋವಿಡ್ ಲಸಿಕಾ ಮೇಳ ನಡೆಯಿತು. ಜಿಲ್ಲೆಯ ಎಲ್ಲಾಭಾಗದಲ್ಲಿ ವಿಶೇಷ ಲಸಿಕಾ ಮೇಳಕ್ಕೆ ಎಲ್ಲಾ ಅವಶ್ಯಕವ್ಯವಸ್ಥೆಗಳನ್ನುಕೈಗೊಳ್ಳಲಾಗಿತ್ತು.
ನಗರದ ಉಪ್ಪಾರ ಬಡಾವಣೆಯಲ್ಲಿರುವ ಸರ್ಕಾರಿಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ದೀಪಬೆಳಗಿಸುವಮೂಲಕಲಸಿಕಾಮೇಳಕ್ಕೆಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಶಾಸಕರು,ಜನರಲ್ಲಿ ಈ ಹಿಂದೆ ಲಸಿಕೆ ಬಗ್ಗೆ ಗೊಂದಲ, ತಪ್ಪುಕಲ್ಪನೆ ಮನೆಮಾಡಿತ್ತು. ಆದರೆ, ಇಂದು ಲಸಿಕೆ ಮಹತ್ವ ತಿಳಿದು ಜನರುಲಸಿಕಾಕೇಂದ್ರಕ್ಕೆ ತೆರಳಿ ಲಸಿಕೆ ಪಡೆಯುತ್ತಿದ್ದಾರೆ.ಕಾಡಂಚಿನಪ್ರದೇಶದಲ್ಲಿ ಜಾಗೃತಿ ಮೂಡಿಸಿ ಲಸಿಕೆ ನೀಡಲಾಗುತ್ತಿದೆ.
ಈಕೇಂದ್ರಗಳು ಒಂದೇ ದಿನಕ್ಕೆ ಸೀಮಿತವಾಗಿರದೆ ವಾರ್ಡ್‌ಗಳಲ್ಲಿಯೂ ಲಸಿಕೆ ಅಭಿಯಾನವು ಮುಂದುವರಿಯಲಿದೆಎಂದು ಆಶಿಸಿದರು.ಲಸಿಕಾ ಮೇಳ ಆರಂಭದಲ್ಲಿ ಕೋವಿಡ್ ತಡೆ ಕಾರ್ಯದಲ್ಲಿ ಮುಂಚೂಣಿಯಲ್ಲಿರುವ ಶಾಸಕರು, ಜನಪ್ರತಿನಿಧಿಗಳು,ಪೊಲೀಸರು, ಅಧಿಕಾರಿಗಳು, ಆರೋಗ್ಯಾಧಿಕಾರಿ, ವೈದ್ಯರು,ಆಶಾ ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯಸಿಬ್ಬಂದಿ ವರ್ಗದವರಿಗೆ ಸ್ಥಳೀಯ ಜನರು ಹೂವಿನ ಮಳೆಗೆರೆಯುವ ಮೂಲಕ ಬರಮಾಡಿಕೊಂಡು ಗೌರವಿಸಿದ್ದುವಿಶೇಷವಾಗಿತ್ತು.
ನಗರಸಭೆ ಅಧ್ಯಕ್ಷೆ ಆಶಾ ನಟರಾಜು,ಸದಸ್ಯರಾದ ಬಸವಣ್ಣ, ಚಂದ್ರಕಲಾ, ಹೆಚ್ಚುವರಿ ಡೀಸಿ ಎಸ್.ಕಾತ್ಯಾಯಿನಿದೇವಿ, ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ಜಿಲ್ಲಾ ಆರೋಗ್ಯ ಮತ್ತುಕುಟುಂಬ ಕಲ್ಯಾಣಾಧಿಕಾರಿಡಾ.ಎಂ.ಸಿ ರವಿ,ಆರ್‌ಸಿಎಚ್‌ಅಧಿಕಾರಿಡಾ.ವಿಶ್ವೇಶ್ವರಯ್ಯ,ಪೌರಾಯುಕ್ತಕರಿಬಸವಯ್ಯ ಇತರರಿದ್ದರು.