ಬೆಂಗಳೂರು: ರಾಜಧಾನಿಯಲ್ಲಿ ಸೋಮವಾರ ಒಂದೇ ದಿನ 2.17 ಲಕ್ಷ ಜನರಿಗೆ ಕೊರೊನಾ ಲಸಿಕೆನೀಡಲಾಗಿದೆ. ಈ ಮೂಲಕ ಬೆಂಗಳೂರು ದೇಶಕ್ಕೆಮಾದರಿಯಾಗಿದೆ.ಬಿಬಿಎಂಪಿ ವ್ಯಾಪ್ತಿಯಲ್ಲಿ 1.75 ಲಕ್ಷ ಹಾಗೂಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ 42 ಸಾವಿರ ಮಂದಿಗೆ ಲಸಿಕೆ ನೀಡಲಾಗಿದೆ.
ಈ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತಗೌರವ್ ಗುಪ್ತ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ ವಿಶೇಷ ಲಸಿಕಾ ಅಭಿಯಾನದಲ್ಲಿ ನಿಗದಿಪಡಿಸಿಕೊಂಡಗುರಿಗಿಂತಲೂ ಹೆಚ್ಚು ಲಸಿಕಾ ಅಭಿಯಾನನಡೆದಿದ್ದು, ಸೋಮವಾರ 1.75 ಲಕ್ಷ ಮಂದಿಗೆಲಸಿಕೆ ನೀಡಲಾಗಿದೆ ಎಂದು ತಿಳಿಸಿದರು.
ಪಾಲಿಕೆ ವ್ಯಾಪ್ತಿಯ ಎಲ್ಲ ಎಂಟು ವಲಯಗಳಲ್ಲಿಉಚಿತ ಲಸಿಕೆ ಅಭಿಯಾನ ಕಾರ್ಯಕ್ರಮದಲ್ಲಿಪಾಲಿಕೆಯಿಂದ ಕೋವಿಡ್ ನಿಯಮಾವಳಿ ಅನುಸಾರ ವಿಶೇಷ ಲಸಿಕಾ ಅಭಿಯಾನ ಅಭಿಯಾನವನ್ನುಯಶಸ್ವಿಯಾಗಿ ನಡೆಸಲಾಗಿದೆ. ಈ ಅಭಿಯಾನದಲ್ಲಿ65 ಸಾವಿರ ಮಂದಿಗೆ ಲಸಿಕೆ ನೀಡುವ ಗುರಿಹೊಂದಲಾಗಿತ್ತು. ಆದರೆ, ನಿಗದಿತ ಗುರಿಗಿಂತ ಹೆಚ್ಚುಜನರಿಗೆ ಲಸಿಕೆ ನೀಡಲಾಗಿದೆ ಎಂದು ಹೇಳಿದ್ದಾರೆ.ಮೈಕ್ರೋ ಪ್ಲಾನ್ ಮೂಲಕ ಎಲ್ಲಾ ವಲಯಗಳಲ್ಲಿಅತ್ಯಂತ ಯಶಸ್ವಿಯಾಗಿ ಲಸಿಕಾ ಅಭಿಯಾನವನ್ನುನಡೆಸಲಾಗಿದೆ.
ಈ ಪೈಕಿ ಪಾಲಿಕೆಯ ಎಂಟೂವಲಯಗಳಲ್ಲಿ ಏರ್ಪಡಿಸಲಾಗಿತ್ತು. ಸಿಬ್ಬಂದಿಯಜತೆಗೆ ವೈದ್ಯರು, ಸ್ಟಾಫ್ ನರ್ಸ್, ಅಶಾಕಾರ್ಯಕರ್ತೆಯರು, ಹೋಂ ಗಾರ್ಡ್‌ಗಳು,ಮಾರ್ಷಲ್‌ಗಳನ್ನು ನಿಯೋಜಿಸಿ ಲಸಿಕೆಕಾರ್ಯಕ್ರಮ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.ನಗರದಲ್ಲಿನ ಸರ್ಕಾರಿ ಕಚೇರಿಗಳು, ಬೀದಿ ಬದಿವ್ಯಾಪಾರಿಗಳು, ಗಾರ್ಮೆಂಟ್ಸ್‌ಗಳಲ್ಲಿ ಕೆಲಸಮಾಡುತ್ತಿರುವ ಸಿಬ್ಬಂದಿ, ಕ್ಯಾಬ್, ಆಟೋಚಾಲಕರು, ಎಪಿಎಂಸಿ ಮಾರುಕಟ್ಟೆಯಲ್ಲಿನ ವರ್ತಕರು,ಬ್ಯಾಂಕ್ ಸಿಬ್ಬಂದಿ,ಹೋಟೆಲ್ ಸಿಬ್ಬಂದಿ,ಕಟ್ಟಡ ಕಾರ್ಮಿಕರು ಸೇರಿದಂತೆ ಮತ್ತಿತರ ಸ್ಥಳಗಳಲ್ಲಿಕ್ಯಾಂಪ್‌ಗ್ಳನ್ನು ಮಾಡಿ ಲಸಿಕೆ ನೀಡಲಾಗಿದೆಎಂದಿದ್ದಾರೆ.ನಗರದಲ್ಲಿ ಹೆಚ್ಚು ಲಸಿಕೆ ನೀಡುವ ಸಲುವಾಗಿಸೆಷನ್ ಸೈಟ್‌ಗಳನ್ನು 300 ರಿಂದ 528ಕ್ಕೆಹೆಚ್ಚಿಸಲಾಗಿತ್ತು.
ನಗರ ಪ್ರಾಥಮಿಕ ಆರೋಗ್ಯಕೇಂದ್ರಗಳು ಮತ್ತು ಸಾಮಾನ್ಯ ಆಸ್ಪತ್ರೆಗಳಲ್ಲಿ 160ಸೈಟ್‌ಗಳನ್ನು ಮತ್ತು ಕೆಲಸದ ಸ್ಥಳಗಳಲ್ಲಿ 368 ಸೈಟ್‌ಗಳನ್ನು ಒಳಗೊಂಡಿತ್ತು. ಪಾಲಿಕೆಯಿಂದ ಒಟ್ಟು528ವ್ಯಾಕ್ಸಿನೇಟರ್‌ಗಳನ್ನು, ವೆರಿಫೈಯರ್‌ಗಳನ್ನುನಿಯೋಜಿಸಲಾಗಿತ್ತು. ಅಲ್ಲದೆ, ವಿವಿಧ ಶುಶ್ರೂಷಾಕಾಲೇಜುಗಳಿಂದ ಸ್ವಯಂಸೇವಕ ವ್ಯಾಕ್ಸಿನೇಟರ್‌ಗಳನ್ನು ನೇಮಿಸಲಾಗಿತ್ತು ಎಂದು ತಿಳಿಸಿದ್ದಾರೆ.
978 ಆಶಾ, 429 ಎಎನ್‌ಎಂ ಕೆಲಸ: ಲಸಿಕಾಅಭಿಯಾನದ ಮೇಲ್ವಿಚಾರಣೆಗೆ 8 ವಲಯಆರೋಗ್ಯಾಧಿಕಾರಿಗಳು,28ಆರೋಗ್ಯವೈದ್ಯಕೀಯಅಧಿಕಾರಿಗಳ(ಎಂಒಎಚ್)ನ್ನು ನಿಯೋಜಿಸಲಾಗಿತ್ತು. ಇವರೇ ಖುದ್ದು ಲಸಿಕಾ ಅಭಿಯಾನ ಸ್ಥಳಕ್ಕೆಭೇಟಿ ನೀಡಿದ್ದರು. ಸುಮಾರು 978 ಅಶಾಕಾರ್ಯಕರ್ತೆಯರು, 429 ಎ.ಎನ್.ಎಂ ಗಳುಕೆಲಸ ಮಾಡಿದ್ದಾರೆ ಎಂದು ಗೌರವ್ ಗುಪ್ತತಿಳಿಸಿದ್ದಾರೆ.