ನವದೆಹಲಿ : ಇಡೀ ಜಗತ್ತನ್ನು ತನ್ನ ಭೀತಿಯಿಂದ ಬೆಕ್ಕಸಬೆರಗಾಗಿ ಮಾಡಿರುವ ಕೋವಿಡ್ – 19 ಮಹಾಮಾರಿ ಮರಣ ಮೃದಂಗವನ್ನು ಮುಂದುವರೆಸಿದೆ. ಕೋವಿಡ್ ನಿಂದ ರಕ್ಷಣೆ ಪಡೆಯಲು ಜನ ಸಾಮಾಜಿಕ ಅಂತರ, ಸ್ಯಾನಿಟೈಸರ್ ಹಾಗೂ ಮಾಸ್ಕ್ ಬಳಕೆಯಿಂದ ಒಂದಿಷ್ಟು ನಿಟ್ಟುಸಿರು ಬಿಟ್ಟಿದ್ದಾರೆ. ಕೋವಿಡ್ ಸೋಂಕಿನ ನೆರಳಿನಿಂದ ದೂರ ಉಳಿಯಲು ಇದೀಗ ಹೊಸ ತಂತ್ರವೊಂದು ಬಂದಿದೆ ಅದುವೇ ಕೋವಿಡ್ ಕೊಡೆ.!
ಉದ್ಯಮಿ ಹರ್ಷ್ ಗೋಯೆಂಕಾ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಕೋವಿಡ್ ಕೊಡೆಯ ವೀಡಿಯೋ ನೋಡುಗರನ್ನು ಆಶ್ಚರ್ಯ ಹಾಗೂ ಅದ್ಭುತವಾಗಿ ಕಾಣುವಂತೆ ಮಾಡಿದೆ. 15 ಸೆಕೆಂಡ್ ಗಳ ಸಣ್ಣ ವೀಡಿಯೋ ತುಣುಕು ಈಗ ವೈರಲ್ ಆಗಿದ್ದು ಕೋವಿಡ್ ಕೊಡೆಯ ಐಡಿಯಾ ಸೃಷ್ಟಿ ನೆಟ್ಟಗರಲ್ಲಿ ಕುತೂಹಲದೊಟ್ಟಿಗೆ ಶಹಬ್ಬಾಸ್ ಗಿರಿಯನ್ನು ಪಡೆದುಕೊಂಡಿದೆ.
ಕೋವಿಡ್ ಕೊಡೆಯ ವೀಡಿಯೋದಲ್ಲಿ ಒಬ್ಬ ವ್ಯಕ್ತಿ ಕೊಡೆ ಹಿಡಿದುಕೊಂಡು ನಡೆದುಕೊಂಡು ಬರುವಾಗ ಆತನ ಮುಂದೆ ಬರುವ ವ್ಯಕ್ತಯೊಬ್ಬರು ಜೋರಾಗಿ ಸೀನುತ್ತಾರೆ. ಆ ಕೊಡಲೇ ಕೊಡೆ ಹಿಡಿದ ವ್ಯಕ್ತಿಯ ಕೊಡೆಯಿಂದ ಪೂರ್ತಿಯಾಗಿ ರಕ್ಷಣೆ ಪಡೆದುಕೊಳ್ಳಲು ಪ್ಲಾಸ್ಟಿಕ್ ಪರದೆ ಹೊರ ಬರುತ್ತದೆ. ಇದು ಕೋವಿಡ್ ಕೊಡೆಯ ವಿಶೇಷತೆ.
ಕೋವಿಡ್ ವೈರಸ್ ನಿಂದ ರಕ್ಷಣೆ ಪಡೆಯಲು ಕೋವಿಡ್ ಕೊಡೆಯ ಹಾಗೆಯೇ ಕೆಲ ದಿನಗಳ ಹಿಂದೆ ಆನಂದ್ ಮಹೇಂದ್ರ ಹಂಚಿಕೊಂಡಿದ್ದ ಸಾಮಾಜಿಕ ಅಂತರವನ್ನು ಪಾಲಿಸುವ ಟುಕ್ ಟುಕ್ ಆಟೋ ಗಾಡಿಯ ವೀಡಿಯೋ ಕೂಡ ವೈರಲ್ ಆಗಿತ್ತು. ಕೋವಿಡ್ ಕೊಡೆಯ ವೀಡಿಯೋ ವೈರಲ್ ಆಗಿದ್ದು ಇದುವರೆಗೆ 30 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.