Advertisement
ನಾಡಿನಲ್ಲಿ ಕ್ರಿಸ್ಮಸ್ ಆಚರಿಸುವವರ ಮೇಲೆ ಮಾತ್ರವಲ್ಲ ವಿದೇಶದಿಂದ ಕ್ರಿಸ್ಮಸ್, ಹೊಸ ವರ್ಷದ ರಜೆಯಲ್ಲಿ ಊರಿಗೆ ಬಂದು ಹಬ್ಬ ಆಚರಿಸುವವರ ಮೇಲೂ ಕೋವಿಡ್ ಪರಿಣಾಮ ಬೀರಿದೆ.
Related Articles
Advertisement
ಡಿ. 24ರಂದು ಸಂಜೆ ಮತ್ತು ಡಿ. 25ರಂದು ಬೆಳಗ್ಗೆ ಚರ್ಚ್‌ಗಳಲ್ಲಿ ಕ್ರಿಸ್ಮಸ್ ಹಬ್ಬದ ಬಲಿಪೂಜೆಗಳು ನೆರವೇರಲಿವೆ. ಕ್ರಿಸ್ಮಸ್ ಸಂಬಂಧಿತ ಗೋದಲಿ (ಕ್ರಿಬ್)ಗಳು ಕ್ರೈಸ್ತರ ಮನೆಗಳಲ್ಲಿ ಮತ್ತು ಚರ್ಚ್‌ಗಳಲ್ಲಿ ನಿರ್ಮಾಣವಾಗಿದ್ದು, ಅವುಗಳಿಗೆ ಫೈನಲ್ ಟಚ್ ನೀಡಲಾಗಿದೆ.
ಕ್ರಿಸ್ಮಸ್ ಗೀತೆಗಳ (ಕ್ಯಾರಲ್) ಗಾಯನ ಕುರಿತಂತೆ ಚರ್ಚ್‌ಗಳಲ್ಲಿ ತರಬೇತಿ ನಡೆದಿದ್ದು, ಡಿ. 24ರಂದು ಬಲಿಪೂಜೆಗೆ ಮುಂಚಿತವಾಗಿ ಈ ಗೀತೆಗಳನ್ನು ಹಾಡಲು ಸಿದ್ಧತೆಗಳಾಗಿವೆ. ಗೋದಲಿ, ಮನೆ, ಚರ್ಚ್, ಪ್ರಾರ್ಥನಾ ಮಂದಿರಗಳನ್ನು ಅಲಂಕರಿಸುವ ನಕ್ಷತ್ರಗಳು, ಘಂಟೆ (ಬೆಲ್)ಗಳ ಸಾಲು, ಕ್ರಿಸ್ಮಸ್ ಟ್ರೀ, ಸಾಂತಾಕ್ಲಾಸ್ ವೇಷ ಭೂಷಣ ಇತ್ಯಾದಿಗಳ ಖರೀದಿ ಭರ ದಿಂದ ನಡೆಯುತ್ತಿದೆ.
ಸಾಧಾರಣ ವ್ಯಾಪಾರ :
ಕ್ರಿಸ್ಮಸ್ ಆಚರಣೆಗೂ ಕೋವಿಡ್ ಪರಿಣಾಮ ತಟ್ಟಿದೆ. ವ್ಯಾಪಾರ ತಕ್ಕ ಮಟ್ಟಿಗೆ ಇದೆ. ಆದರೆ ಕಳೆದ ವರ್ಷಕ್ಕೆ ಹೋಲಿಸಲು ಸಾಧ್ಯವೇ ಇಲ್ಲ; ಈಗ ಜನರ ಕೈಯಲ್ಲೂ ಹಣ ಕಡಿಮೆಯಿದೆ ಎಂದು ಬೇಕರಿ ವ್ಯಾಪಾರಿ ವೈಶಾಖ್ ತಿಳಿಸಿದ್ದಾರೆ.
ಕ್ರಿಸ್ಮಸ್ ಕೇಕ್, ಕುಸ್ವಾರ್ ಬೇಡಿಕೆ:
ಕ್ರಿಸ್ಮಸ್ ಸ್ಪೆಷಲ್ ಕೇಕ್ ಜತೆಗೆ ರಿಚ್ ಪ್ಲಮ್ ಕೇಕ್, ಎಗ್‌ಲೆಸ್ ಪ್ಲಮ್ ಕೇಕ್, ಶುಗರ್ ಫ್ರೀ ಪ್ಲಮ್ ಕೇಕ್, ನಟ್ಟಿ ಬೊನಾನಾl, ಗೋಲ್ಡನ್ ಕೇಕ್, ರೋಯಲ್ ಡ್ರೈಫ್ರುಟ್ ಕೇಕ್, ಬ್ಲ್ಯಾಕ್ ಸ್ಟಾಲಿಯನ್ ಕೇಕ್, ಸ್ಕೋಚ್ ವಿಸ್ಕಿ ಕೇಕ್, ಮಿಲ್ಕಿ ಬಾದಾಮ್ ಕೇಕ್, ರೆಡ್ ವೆಲ್‌ವೆಟ್ ಕೇಕ್, ಪರ್ಪಲ್ ವೆಲ್‌ವೆಟ್ ಕೇಕ್, ಗುಲಾಬ್ ಜಾಮೂನ್ ಚೀಸ್ ಕೇಕ್, ಓರಿಯೋ ಚೀಸ್ ಕೇಕ್, ತಿರಮಿಸು ಚೀಸ್ ಕೇಕ್ ಇತ್ಯಾದಿ ವಿಧ ವಿಧದ ಸಿಗ್ನೇಚರ್ ಕೇಕ್‌ಗಳಿಗೆ ಬೇಕರಿಗಳಲ್ಲಿ ಬೇಡಿಕೆ ಹೆಚ್ಚಿದೆ.