Advertisement

3ನೇ ಅಲೆ ಕೋವಿಡ್‌ ಚಿಕಿತ್ಸಾ ವ್ಯವಸ್ಥೆಗೆ ಸಿದ್ಧತೆ

01:32 PM Jun 18, 2021 | Team Udayavani |

ರಾಮನಗರ: ಕೋವಿಡ್‌ ಮೂರನೇ ಅಲೆಯವೇಳೆ ಮಕ್ಕಳಿಗೆ ಸಮಸ್ಯೆಯಾಗಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಅಲ್ಲದೆ, ಸೋಂಕು ಬಂದು ಹೋದ ನಂತರ ಬ್ಲ್ಯಾಕ್‌ ಫ‌ಂಗಸ್‌ ಮುಂತಾದ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಇದಕ್ಕೆ ಪೂರಕವಾಗಿ ಆಸ್ಪತ್ರೆಯಲ್ಲಿನ ಚಿಕಿ ತ್ಸಾ ವ್ಯವಸ್ಥೆಯನ್ನು ಸಜ್ಜುಗೊಳಿಸಲಾಗಿದೆ ಎಂದು ಆದಿಚುಂಚನ ಗಿರಿ ಪೀಠಾಧ್ಯಕ್ಷ ಶ್ರೀನಿರ್ಮಲಾ ನಂದನಾಥ ಸ್ವಾಮೀಜಿ ಹೇಳಿದರು.

Advertisement

ಬಿಜಿಎಸ್‌ ಜಿಮ್ಸ್‌ ಮತ್ತು ಬಿಜಿಎಸ್‌ ಗ್ಲೆನ್‌ ಇಗಲ್ಸ್‌ ಗ್ಲೋಬಲ್‌ ಆಸ್ಪತ್ರೆಗಳ ಸಹಕಾರದಲ್ಲಿ ಇಲ್ಲಿನ ರೋಟರಿ ಬಿಜಿಎಸ್‌ ಗ್ಲೋಬಲ್‌ ಆಸ್ಪತ್ರೆಯ ನವೀಕರಣದ ನಂತರ ಪ್ರಾರಂಭೋತ್ಸವದ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತ ನಾಡಿ , ಕೋವಿಡ್‌ ಸೋಂಕು ಎರಡನೇ ಅಲೆಯ ಭೀಕರತೆ ನಮ್ಮ ದೇಶದ ವೈದ್ಯಕೀಯ ವ್ಯವಸ್ಥೆಯ ವಾಸ್ತವ ಸ್ಥಿತಿಯನ್ನು ತೆರೆ ದಿ ಟ್ಟಿದೆ. ನಮ್ಮ ನಮ್ಮ ಭಾಗದಲ್ಲಿ ವೈದ್ಯಕೀಯ ವ್ಯವಸ್ಥೆ ಬಲಗೊಂಡರೆ, ಚಿಕಿತ್ಸೆ ದೊರೆಯುವುದು ಸುಲಭವಾಗಲಿದೆ. ಕೋವಿಡ್‌ ಪರಿ ಸ್ಥಿತಿಗೆ ಅನುಗುಣವಾಗಿ ಆಸ್ಪತ್ರೆಯನ್ನು ನವೀಕರಿಸಿ, ಪ್ರಾಂಭಿಸಲಾಗಿದೆ.

ರಾಮನಗರದ ರೋಟರಿ -ಬಿಜಿ ಎಸ್‌ ಆಸ್ಪತ್ರೆಯಲ್ಲಿ ನ್ಯೂರಾಲಜಿ ವಿಭಾಗ  ಆರಂಭಿಸುವ ಚಿಂತನೆಗಳಿವೆ. ಸೂಪರ್‌ ಸ್ಪಷ್ಟಾಲಿಟಿ ಆಸ್ಪ ತ್ರೆಯನ್ನಾಗಿ ಪರಿವರ್ತಿಸುವ ಬಗ್ಗೆ ಡಿಸಿಎಂ ಡಾ.ಸಿ.ಎನ್‌. ಅಶ್ವಥ ನಾರಾಯಣ ಸಲಹೆ ನೀಡಿದ್ದಾರೆ ಎಂದರು.

ಜನತೆಗೆ ಸಲಹೆ: ಕೋವಿಡ್‌ ಸೋಂಕು ತಡೆ ಗಟ್ಟಲು ಲಸಿಕೆ, ವೈದ್ಯಕೀಯ ವ್ಯವಸ್ಥೆ ಮತ್ತು ಚಿಕಿತ್ಸೆಯಷ್ಟೇ ಪ್ರಮುಖವಾಗಿ ಕೋವಿಡ್‌ ನಿಯಮಗಳನ್ನು ಪಾಲಿಸಬೇಕು. ಮಾಸ್ಕ್ ಧರಿಸುವುದು, ವ್ಯಕ್ತಿಗತ ಅಂತರ ಕಾಪಾಡುವುದು, ಪದೇ ಪದೇ ಕೈಗಳನ್ನು ತೊಳೆದುಕೊಳ್ಳು ವುದು ಮುಂತಾದ ವೈದ್ಯಕೀಯ ಸಲಹೆಗಳನ್ನು ತಪ್ಪದೆ ಪಾಲಿಸಬೇಕು ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next