Advertisement

ಮತ್ತೆ 7 ಮಂದಿಗೆ ಕೋವಿಡ್

09:59 AM Jun 28, 2020 | Suhan S |

ಶಿವಮೊಗ್ಗ: ಶಿಕಾರಿಪೂರ ತಾಲೂಕಿನ ಖವಾಸಪೂರ ಗ್ರಾಮದ 80 ವರ್ಷದ ವೃದ್ಧೆಯ ಅಂತ್ಯ ಸಂಸ್ಕಾರದಲ್ಲಿ ಭಾಗವಹಿ ಸಿದ್ದ ಏಳು ಮಂದಿಗೆ ಕೋವಿಡ್  ದೃಢಪಟ್ಟಿದ್ದು, ಶಿಕಾರಿಪುರದಲ್ಲಿ ಆತಂಕ ಸೃಷ್ಟಿಯಾಗಿದೆ.

Advertisement

ಪಿ-9546 ಮಹಿಳೆ ಕೋವಿಡ್  ದಿಂದ ಮೃತಪಟ್ಟಿದ್ದು, ಈಕೆ ಜತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 9 ಜನರನ್ನು ಕ್ವಾರಂಟೈನ್‌ ಮಾಡಲಾಗಿತ್ತು. ಎಲ್ಲರೂ ಮಹಿಳೆಯ ಸಂಬಂಧಿಕರೇ ಆಗಿದ್ದಾರೆ. ಶುಕ್ರವಾರ ಮಗ ಮತ್ತು ಮೊಮ್ಮಗನಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಶನಿವಾರ ಏಳು ಜನರಿಗೆ ಪಾಸಿಟಿವ್‌ ಬಂದಿದೆ.

ಒಟ್ಟಾರೆ ಮಹಿಳೆಯೊಬ್ಬರಿಂದಲೇ ಇದುವರೆಗೆ 9 ಜನರಿಗೆ ಸೋಂಕು ಹರಡಿದೆ. ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ.ನಗರದ ಪ್ರತಿಷ್ಠಿತ ಆಸ್ಪತ್ರೆಯೊಂದರ ವೈದ್ಯರಿಗೂ ಪಾಸಿಟಿವ್‌ ಬಂದಿದೆ. ಇವರಿಗೆ ಯಾವುದೇ ಟ್ರಾವೆಲ್‌ ಹಿಸ್ಟರಿ ಇಲ್ಲ. ಆದರೆ, ಯಾರಿಂದ ಸೋಂಕು ತಗುಲಿದೆ ಎಂಬುದು ಇನ್ನೂ ಪತ್ತೆಯಾಗಿಲ್ಲ. ಇನ್ನುಳಿದಂತೆ ಹೊಸನಗರ ಮತ್ತು ಶಿರಾಳಕೊಪ್ಪದಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿವೆ. ಇವರಿಗೂ ಯಾವುದೇ ಟ್ರಾವೆಲ್‌ ಹಿಸ್ಟರಿ ಇಲ್ಲ. ಮೆಗ್ಗಾನ್‌ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next