Advertisement
ಜೊತೆಗೆ ಸ್ಥಳದಲ್ಲಿರುವ ಅರಣ್ಯ ಇಲಾಖೆ ಸಿಬ್ಬಂದಿಯನ್ನೂ ಸೇರಿ 19 ಮಂದಿಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ನೇತೃತ್ವದಲ್ಲಿ ಕೋವಿಡ್ ಟೆಸ್ಟ್ ಮಾಡಿಸಲಾಯಿತು. ಬಳಿಕ ಎಲ್ಲಾ ವರದಿಯೂ ನೆಗೆಟಿವ್ ಬಂದಿದ್ದು, ಆರ್‌ಟಿಪಿಸಿಆರ್ ಪರೀಕ್ಷೆಗೆ ಎಲ್ಲರ ಗಂಟಲು ದ್ರವವನ್ನು ಕ ಳುಹಿಸಲಾಯಿತು. ಇದಕ್ಕೂ ಮುಂಚೆ ಕೆಲವರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಹಿಂದೇಟು ಹಾಕಿದರು. ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಎಲ್ಲರ ಮನವೊಲಿಸಿ ಪರೀಕ್ಷೆಗೆ ಒಪ್ಪಿಸಿ, ಸ್ವ್ಯಾಬ್ ಪಡೆದರು. ಈ ಸಂದರ್ಭ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.
Related Articles
Advertisement
ಅರಮನೆಯಲ್ಲಿ ಸ್ವಚ್ಛತೆ: ಶುಕ್ರವಾರ ಗಜಪಡೆಯನ್ನು ಬರಮಾಡಿಕೊಂಡ ಕಾರ್ಯಕ್ರಮದ ಹಿನ್ನೆಲೆ ಆವರಣದಲ್ಲಿ ಹೂವು, ಮತ್ತಿತರ ಕಸದ ರಾಶಿ ಬಿದ್ದಿತ್ತು. ಶನಿವಾರ ಪೌರಕಾರ್ಮಿಕರು ಅರಮನೆ ಆವರಣವನ್ನು ಸ್ವಚ್ಛಗೊಳಿಸಿದರು. ಜೊತೆಗೆ ಇತರ ತಯಾರಿ ಚಟುವಟಿಕೆಗಳು ಎಂದಿನಂತೆ ನಡೆದಿದೆ.
ಆನೆಗಳಿಗೆ ಕೋವಿಡ್ ಟೆಸ್ಟ್? : ಆನೆಗಳಿಗೆ ಕೋವಿಡ್ ಪರೀಕ್ಷೆ ಮಾಡಲು ಸರಿಯಾದ ಸಾಧನ ಇಲ್ಲದ ಕಾರಣ ಸದ್ಯಕ್ಕೆ ಪರೀಕ್ಷೆ ಮಾಡಿಲ್ಲ. ಆನೆಗಳಿಗೆ ಈ ಸೋಂಕಿನಿಂದ ಹೆಚ್ಚು ಅಪಾಯವಿಲ್ಲ. ಆದ್ದರಿಂದ ಅವುಗಳಿಗೆ ಪರೀಕ್ಷೆಮಾಡುವ ಬಗ್ಗೆ ಇನ್ನೂ ಯೋಚಿಸಿಲ್ಲ. ಇಂದು ಅಥವಾ ನಾಳೆ ಆನೆಗಳಿಗೆ ಭಾರ ಹೊರುವ ತಾಲೀಮು ಆರಂಭಿಸಲಾಗುವುದು ಎಂದು ಪಶು ವೈದ್ಯಾಧಿಕಾರಿ ಡಾ.ನಾಗರಾಜ್ ತಿಳಿಸಿದ್ದಾರೆ.