Advertisement

ಕೋವಿಡ್ ಪರೀಕ್ಷೆ ಕಡಿಮೆಯಿಂದ ಹೆಚ್ಚುತ್ತಿದೆ ಸಾವಿನ ಸಂಖ್ಯೆ : ಉಡುಪಿ ಜಿಲ್ಲಾಧಿಕಾರಿ

02:50 PM Sep 07, 2020 | sudhir |

ಉಡುಪಿ : ಗಂಟಲ ದ್ರವ ಪರೀಕ್ಷೆ ಹೆಚ್ಚೆಚ್ಚು ನಡೆಯುತ್ತಿದ್ದಾಗ ಸಾವಿನ ಸಂಖ್ಯೆ ಕಡಿಮೆ ಇತ್ತು. ಕೋವಿಡ್ ದಂಧೆ ಎಂದು
ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸಲು ಆರಂಭಿಸಿದಾಗ ಇದನ್ನು ನಂಬಿದ ಜನರು ಪರೀಕ್ಷೆಗೆ ಒಳಪಡಲು ಹಿಂದೇಟು ಹಾಕಿದರು. ಇದರಿಂದಾಗಿ ರೋಗ ಲಕ್ಷಣವಿಲ್ಲದ ಸೋಂಕಿತರು ಮನೆ ಮಂದಿಗೆಲ್ಲ ರೋಗ ಹಬ್ಬಿಸಿ ಅವರ ಸಾವಿಗೆ ಕಾರಣರಾಗುತ್ತಿದ್ದಾರೆ. ಆಗಸ್ಟ್‌ನಲ್ಲಿ ಉಡುಪಿ ಜಿಲ್ಲೆಯಲ್ಲಿ ಸಾವಿನ ಪ್ರಮಾಣ ಹೆಚ್ಚಿಗೆಯಾಗಲು ಇದುವೇ ಕಾರಣವಾಗಿದೆ.
ಜಿಲ್ಲೆಯಲ್ಲಿ ಇದುವರೆಗೆ 12,727 ಮಂದಿ ಕೋವಿಡ್‌ ಸೋಂಕಿತರಾಗಿ 112 ಮಂದಿ ಮೃತಪಟ್ಟಿದ್ದಾರೆ. 55ರಿಂದ 64ರ ವಯೋ ಮಿತಿಯ 1,315 ಸೋಂಕಿತರಲ್ಲಿ 25 ಮಂದಿ ಮತ್ತು 65 ವರ್ಷ ಮೇಲ್ಪಟ್ಟ 1,161 ಕೋವಿಡ್‌ ಸೋಂಕಿತರಲ್ಲಿ 51 ಮಂದಿ ಮೃತಪಟ್ಟಿದ್ದಾರೆ.

Advertisement

ಕೋವಿಡ್‌ ಪರೀಕ್ಷೆ ಹೆಚ್ಚಿನ ಸಂಖ್ಯೆಯಲ್ಲಿ ಮಾಡುತ್ತಿದ್ದ ಸಮಯ ಶೀಘ್ರ ರೋಗವನ್ನು ಗುರುತಿಸಿ ಚಿಕಿತ್ಸೆ ನೀಡುತ್ತಿದ್ದುದರಿಂದ ಸಾವಿನ ಪ್ರಮಾಣ ಕಡಿಮೆ ಇತ್ತು. ಆದರೆ ಅಪಪ್ರಚಾರದಿಂದ ಪರೀಕ್ಷೆ ಮಾಡಿಸಿಕೊಳ್ಳುವವರ ಸಂಖ್ಯೆ ಕಡಿಮೆಯಾಯಿತು. ಇದರಿಂದಾಗಿ ಕೋವಿಡ್‌ ಸೋಂಕಿತರು ಆರೋಗ್ಯವಾಗಿದ್ದರೂ ರೋಗವನ್ನು ಸಮಾಜದಲ್ಲಿನ ಹಿರಿಯ ಜೀವಗಳಿಗೆ ಹರಡಿಸುತ್ತಿರುವುದರಿಂದ ಹಾಗೂ ರೋಗ ಲಕ್ಷಣವಿದ್ದವರು ರೋಗ ಉಲ್ಬಣಗೊಂಡ ಅನಂತರ ಚಿಕಿತ್ಸೆಗಾಗಿ ನೇರ ಐಸಿಯು ಬೆಡ್‌ಗೆ ದಾಖಲಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್‌ಗೆ ಈಗಾಗಲೇ ಮೀಸಲಿಟ್ಟಿದ್ದ ಎಲ್ಲ 82 ಐಸಿಯು ಬೆಡ್‌ಗಳು ಭರ್ತಿಯಾಗಿವೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಪಪ್ರಚಾರಕ್ಕೆ ಬಲಿಯಾಗಬೇಡಿ
ಸಾರ್ವಜನಿಕರು ರೋಗ ಲಕ್ಷಣಗಳಿದ್ದರೂ ಕೋವಿಡ್‌ ಪರೀಕ್ಷೆಗೆ ಒಳಪಡುತ್ತಿಲ್ಲ. ಮನೆಯಲ್ಲಿಯೇ ಮನೆ ಮದ್ದು ಮತ್ತು ಇತರ ಮಾತ್ರೆಗಳನ್ನು ಪಡೆಯುತ್ತಿದ್ದು, ಇದರಿಂದ ಯಾವುದೇ ರೋಗ ಲಕ್ಷಣಗಳಿಲ್ಲದವರನ್ನು ಮತ್ತು ರೋಗ ಲಕ್ಷಣಗಳಿರುವವರನ್ನು ಪತ್ತೆ ಹಚ್ಚಲು ಕಷ್ಟಕರವಾಗಿದೆ. ಇವರಿಂದ ಇತರರಿಗೆ ಹೆಚ್ಚಿನ ಸಂಖ್ಯೆಯಲ್ಲಿ ರೋಗ ಹರಡುತ್ತಿದ್ದು, ಇದರಿಂದ ಜಿಲ್ಲೆಯ ಹಿರಿಯ ವ್ಯಕ್ತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾವಿಗೀಡಾಗುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ವಿಷಾದ ವ್ಯಕ್ತಪಡಿಸಿದರು.

ಕೋವಿಡ್‌ -19 ರೋಗಿಗಳಿಗೆ ಎಪಿಲ್‌/ ಬಿಪಿಎಲ್‌ ಭೇದವಿಲ್ಲದೆ ಆಯುಷ್ಮಾನ್‌ ಭಾರತ್‌ ಯೋಜನೆಯಡಿ ಸಂಪೂರ್ಣ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾಡಳಿ ತದ ರೆಫ‌ರಲ್‌ ಪಡೆಯದೆ ನೇರವಾಗಿ ಖಾಸಗಿ ಆಸ್ಪತೆಗಳಿಗೆ ದಾಖಲಾಗಿ, ವಿಶೇಷ ವಾರ್ಡ್‌ ಸೌಲಭ್ಯ ಪಡೆಯು ವವರು ಮಾತ್ರ ಬಿಲ್‌ ಭರಿಸಬೇಕಿದೆ. ಜಿಲ್ಲೆಯ ಆಸ್ಪತ್ರೆಗಳಲ್ಲಿ ಕೋವಿಡ್‌ ಚಿಕಿತ್ಸೆಗಾಗಿ ಸಾಕಷ್ಟು ಸಂಖ್ಯೆಯ ಬೆಡ್‌ಗಳು ಲಭ್ಯವಿವೆ ಎಂದು ಡಿಸಿ ಸ್ಪಷ್ಟಪಡಿಸಿದರು.

ಖಾಸಗಿ ಅಸ್ಪತ್ರೆಗಳಲ್ಲಿ ನಿಗದಿತ ಸಂಖ್ಯೆಯ ಐಸಿಯು ಬೆಡ್‌ಗಳನ್ನು ಒದಗಿಸುವಂತೆ ಕೋರ ಲಾಗಿದೆ, ಸಾರ್ವಜನಿಕರು ಅಪ ಪ್ರಚಾರಕ್ಕೆ ಕಿವಿಗೊಡದೆ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳುವಂತೆ ಶಾಸಕ ರಘುಪತಿ ಭಟ್‌ ವಿನಂತಿಸಿದರು.
ಶಾಸಕ ಲಾಲಾಜಿ ಆರ್‌. ಮೆಂಡನ್‌, ಎಸ್ಪಿ ವಿಷ್ಣುವರ್ಧನ್‌, ಎಡಿಸಿ ಸದಾಶಿವ ಪ್ರಭು, ಡಿಎಚ್‌ಒ ಡಾ| ಸುಧೀರ್‌ ಚಂದ್ರ ಸೂಡ, ಜಿ.ಪಂ. ಉಪ ಕಾರ್ಯದರ್ಶಿ ಕಿರಣ್‌ ಫೆಡೆ°àಕರ್‌, ಕೋವಿಡ್‌ ಜಿಲ್ಲಾ ನೋಡೆಲ್‌ ಅಧಿಕಾರಿ ಡಾ| ಪ್ರಶಾಂತ್‌ ಭಟ್‌, ಡಾ| ಟಿಎಂಎ ಪೈ ಕೋವಿಡ್‌ ಆಸ್ಪತ್ರೆಯ ನೋಡಲ್‌ ಅಧಿಕಾರಿ ಡಾ| ಶಶಿಕಿರಣ್‌ ಉಮಾಕಾಂತ್‌ ಉಪಸ್ಥಿತರಿದ್ದರು.

Advertisement

ಉಡುಪಿ ಜಿಲ್ಲೆಯಲ್ಲಿ ಸಾವಿಗೀಡಾದವರ ಸಂಖ್ಯೆ ಕಡಿಮೆ ಇರುವುದು ಆಕಸ್ಮಿಕವಲ್ಲ; ಜಿಲ್ಲಾಡಳಿತ ಕಳೆದ ಕೆಲವು ತಿಂಗಳುಗಳಿಂದ ಮಾಡುತ್ತಿರುವ ಶ್ರಮದಿಂದ.
– ಡಾ| ಪ್ರಶಾಂತ ಭಟ್‌, ಜಿಲ್ಲಾ ನೋಡಲ್‌ ಅಧಿಕಾರಿ.

ಅಪಪ್ರಚಾರ: 3 ಎಫ್ಐಆರ್‌ ದಾಖಲು
ಕೋವಿಡ್‌ ಸೋಂಕಿತರ ಪ್ರಾಥಮಿಕ ಸಂಪರ್ಕಿತರು ಪರೀಕ್ಷೆಗೆ ನಿರಾಕರಿಸಿದರೆ ಅವರ ವಿರುದ್ಧ ಎಪಿಡಮಿಕ್‌ ಕಾಯ್ದೆಯನ್ವಯ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿದ ಜಿಲ್ಲಾಧಿಕಾರಿ, ಸಾಮಾಜಿಕ ಜಾಲ ತಾಣದಲ್ಲಿ ಅಪಪ್ರಚಾರ ಮಾಡುವವರ ಕುರಿತು ಸಹ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ 3 ಮಂದಿಯ ವಿರುದ್ಧ ಎಫ್ಐಆರ್‌ ದಾಖಲಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next