ಮೊಳಕಾಲ್ಮೂರು: ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆ ವತಿಯಿಂದ ಅನಗತ್ಯವಾಗಿ ಸಂಚರಿಸುವ ಜನರನ್ನು ಪೊಲೀಸರು ತಡೆದು ಕೋವಿಡ್ ಟೆಸ್ಟ್‌ಗೆ ಒಳಪಡಿಸಿದರು.
ತಾಲೂಕಿನಲ್ಲಿ ಬಹು ದಿನಗಳಿಂದಲೂ ಕೋವಿಡ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಅನಗತ್ಯವಾಗಿ ಸಂಚರಿಸುವವರನ್ನು ನಿಯಂತ್ರಿಸಲು ಬೈಕ್‌ಗಳು ಸೇರಿದಂತೆ ಇನ್ನಿತರ ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡುಕಟ್ಟುನಿಟ್ಟಿನ ಕ್ರಮ ಕೈಗೊಂಡರೂಜನಸಾಮಾನ್ಯರು ಅನಾವಶ್ಯಕವಾಗಿ ಸಂಚರಿಸುವುದು ಮುಂದುವರೆದಿದೆ.
ಲಾಕ್‌ಡೌನ್ ಸಮಯದಲ್ಲಿ ಯಾರು ಹೊರಬಾರದೆ ಮನೆಗಳಲ್ಲಿಯೇ ಇದ್ದು ಕೋವಿಡ್ ಹರಡದಂತೆ ತಡೆಯಬೇಕೆಂದು ಜಾಗೃತಿ ಮೂಡಿಸಿದರೂ ಕೆಲವರು ಅನಾವಶ್ಯಕವಾಗಿ ಸಂಚರಿಸುತ್ತಿದ್ದರು. ಇದನ್ನು ಮನಗಂಡ ಪೊಲೀಸ್ ಅಧಿಕಾರಿಗಳು ಅನಗತ್ಯ ಸಂಚರಿಸುವವರನ್ನು ತಡೆದು ಪಟ್ಟಣದ ಗಾಯಿತ್ರಿ ಪ್ರಾಥಮಿಕ ಶಾಲಾ ಮುಂಭಾಗದಲ್ಲಿ ಕೊರೊನಾ ಟೆಸ್ಟ್ ಮಾಡಿಸಲು ಮುಂದಾದರು.
ಪಟ್ಟಣದಲ್ಲಿ ಬೈಕ್‌ಗಳಲ್ಲಿ ಮತ್ತು ದಾರಿಹೋಕರನ್ನು ತಡೆದು ಕೋವಿಡ್ ಟೆಸ್ಟ್‌ಗೆ ಒಳಪಡಿಸಲಾಯಿತು. ಪೊಲೀಸ್ ಠಾಣೆಯಿಂದ ಕೈಗೊಂಡ ಕೋವಿಡ್ ಪತ್ತೆಯ ಟೆಸ್ಟ್ ಗೆ 10 ಜನರನ್ನು ಒಳಪಡಿಸಿದ್ದು, ಜನರಿಗೆ ನೆಗೆಟಿವ್ ಬಂದಿದೆ. ಸೋಂಕಿತರನ್ನು ಪಟ್ಟಣದ ಹೊರವಲಯದಲ್ಲಿರುವ ಕೋವಿಡ್ ಕೇರ್ ಸೆಂಟರ್‌ಗೆ ಕಳುಹಿಸಿಕೊಡಲಾಯಿತು.
ಈ ಸಂದರ್ಭದಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಎಂ.ಕೆ. ಬಸವರಾಜ್,ಸಿಬ್ಬಂದಿ ರಮೇಶ್, ಭೀಮಣ್ಣ, ಆಶಾ ಕಾರ್ಯಕರ್ತೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಹಾಜರಿದ್ದರು.