Advertisement

ಪ್ರತಿ ದಿನ 7 ಸಾವಿರ ಕೋವಿಡ್‌ ಪರೀಕ್ಷೆ ಮಾಡಿ

10:48 PM May 25, 2021 | Team Udayavani |

ತುಮಕೂರು:ಕೋವಿಡ್‌ ಟೆಸ್ಟ್‌ ಹೆಚ್ಚಿಸಿ ಅಗತ್ಯ ನಿಯಂತ್ರಣಕ್ರಮಗಳನ್ನುಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಪಾಸಿಟಿವಿಟಿಪ್ರಮಾಣ ಇಳಿಕೆಗೆಕ್ರಮವಹಿಸುವಂತೆ ಜಿಲ್ಲಾ ಉಸ್ತುವಾರಿಸಚಿವ ಜೆ.ಸಿ.ಮಾಧುಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರಕೋವಿಡ್‌ ನಿಯಂತ್ರಣ ಸಂಬಂಧ ನಡೆದ ಪ್ರಗತಿಪರಿಶೀಲನಾ ಸಭೆಯಲ್ಲಿ ಮಾತನಾಡಿ, ಸರ್ಕಾರ ಜಿಲ್ಲೆಯಲ್ಲಿನಿತ್ಯ5,400ಕೋವಿಡ್‌ ಪರೀಕ್ಷೆ ನಡೆಸುವ ಗುರಿನಿಗದಿಪಡಿಸಿದೆ. ಆದರೆ, ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ7000ಕೋವಿಡ್‌ ಟೆಸ್ಟ್‌ಗಳನ್ನುಕಡ್ಡಾಯವಾಗಿ ಮಾಡಬೇಕುಎಂದರು.ಕೋವಿಡ್‌ ಪರೀಕ್ಷಾ ವರದಿ 24 ಗಂಟೆಯೊಳಗೆ ಬರುವಂತೆಕ್ರಮ ವಹಿಸಬೇಕು.

ಆಯಾ ತಾಲೂಕುಗಳಗೆ ಗುರಿನಿಗದಿಪಡಿಸಿರುವಂತೆಕೋವಿಡ್‌ ಪರೀಕ್ಷೆ ಮಾಡಬೇಕು,ಆಕ್ಸಿಜನ್‌ ಘಟಕಗಳಿಂದ ಆಮ್ಲಜನಕ ಲಭ್ಯವಾಗುವಷ್ಟರಲ್ಲಿಆಕ್ಸಿಜನ್‌ ಬೆಡ್‌ ಹೆಚ್ಚಿಸಲುಕ್ರಮವಹಿಸಬೇಕು ಎಂದರು.

ಸರ್ಕಾರದಿಂದ ಪೂರೈಕೆಯಾದ ಲಸಿಕೆ ಅಂದೇವಿತರಿಸಬೇಕು ಎಂದು ಆರ್‌ಸಿಎಚ್‌ ಅಧಿಕಾರಿ ಡಾ.ಕೇಶವರಾಜ್‌ರಿಗೆ ನಿರ್ದೇಶಿಸಿದರು.ಪಿಎಚ್‌ಸಿಗಳಲ್ಲಿರುವ ವೈದ್ಯರು ಪ್ರತಿದಿನ ರೆಡ್‌ ಝೊàನ್‌,ಹಾಟ್‌ ಸ್ಪಾಟ್‌ ಪ್ರದೇಶಗಳಿಗೆ ಭೇಟಿ ನೀಡಬೇಕು.ಕೋವಿಡ್‌ಮತ್ತು ಬ್ಲಾ Âಕ್‌ ಫ‌ಂಗಸ್‌ಗೆ ಚಿಕಿತ್ಸೆ ನೀಡುವಲ್ಲಿ ಜಿಲ್ಲೆ ಮೊದಲಸ್ಥಾನದಲ್ಲಿರಬೇಕು ಎಂದರು. ಸಂಸದ ಜಿ.ಎಸ್‌.ಬಸವರಾಜು,ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಉಪವಿಭಾಗಾಧಿಕಾರಿಅಜಯ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next