Advertisement

3ನೇ ಅಲೆ ಮುನ್ನೆಚ್ಚರಿಕೆ : 2 ಲಕ್ಷ ಐಸಿಯು ಹಾಸಿಗೆ ತುರ್ತು

12:08 AM Aug 23, 2021 | Team Udayavani |

ಹೊಸದಿಲ್ಲಿ: ದೇಶ ದಲ್ಲಿ ಕೊರೊನಾ 2ನೇ ಅಲೆ ತೀವ್ರ ಸಂಕಷ್ಟ ಹುಟ್ಟುಹಾಕಿದ್ದ ಹಿನ್ನೆಲೆ ಯಲ್ಲಿ ಕೇಂದ್ರ ಸರಕಾರ ಈಗಾಗಲೇ 3ನೇ ಅಲೆಗೆ ಸಿದ್ಧತೆ ಆರಂಭಿಸಿದೆ.

Advertisement

3ನೇ ಅಲೆಯಲ್ಲಿ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಶೇ. 23ರಷ್ಟು ಇರುವ ಸಾಧ್ಯತೆಯಿದ್ದು, ಮುಂದಿನ ತಿಂಗಳ ಒಳಗೆ 2 ಲಕ್ಷ ವೆಂಟಿಲೇಟರ್‌ಯುಕ್ತ ಐಸಿಯು ಹಾಸಿಗೆ ಸಿದ್ಧಪಡಿಸಲು ಡಾ| ವಿ.ಕೆ. ಪೌಲ್‌ ನೇತೃತ್ವದ ಸಮಿತಿ ಶಿಫಾರಸು ಮಾಡಿತ್ತು. ಇದರ ಜಾರಿಗೆ ಸರಕಾರ ಕ್ರಮ ಕೈಗೊಂಡಿದೆ.

ದೇಶಾದ್ಯಂತ 2 ಲಕ್ಷ ವೆಂಟಿ ಲೇಟರ್‌ಯುಕ್ತ ಐಸಿಯು ಹಾಸಿಗೆ ಹಾಗೂ 5 ಲಕ್ಷ ಆಮ್ಲಜನಕ ವ್ಯವಸ್ಥೆಯುಕ್ತ ಹಾಸಿಗೆಗಳ ಸಹಿತ 7 ಲಕ್ಷ ಸಾಮಾನ್ಯ ಹಾಸಿಗೆಗಳು ಇರಬೇಕು. ಸೋಂಕಿ ನಿಂದಾಗಿ ಐಸೊಲೇಶನ್‌ಗೆ ಒಳಗಾಗುವವರಿಗೆ 10 ಲಕ್ಷ ಹಾಸಿಗೆಗಳು ಸಿದ್ಧವಾಗಬೇಕು ಎಂದು ಪೌಲ್‌ ನೇತೃತ್ವದ ಸಮಿತಿ ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ ಸರಕಾರವು ಎಲ್ಲ ರಾಜ್ಯ ಸರಕಾರಗಳಿಗೆ ಸೂಚನೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next