Advertisement

ಅಪ್ಪ-ಅಮ್ಮ ಆಸ್ಪತ್ರೆಯಲ್ಲಿ : ಮಕ್ಕಳಿಗೆ ಅಗತ್ಯ ಸಾಮಗ್ರಿ ಪೂರೈಸಿದ ಕೋವಿಡ್‌ ಕಾರ್ಯಪಡೆ

07:14 PM May 28, 2021 | Team Udayavani |

ಧಾರವಾಡ: ತಂದೆ ಕಿಮ್ಸನಲ್ಲಿ ಕೋವಿಡ್‌ ಚಿಕಿತ್ಸೆ ಪಡೆಯುತ್ತಿದ್ದು, ಅವರಿಗೆ ಆಸರೆಯಾಗಿ ತಾಯಿಯೂ ಅಲ್ಲೇ ಇದ್ದಾರೆ. ಹೀಗಾಗಿ ಈ ಸಂಕಷ್ಟ ಸಮಯದಲ್ಲಿ ದಿನಸಿ ಸಾಮಗ್ರಿ ಹಾಗೂ ತರಕಾರಿ ಇಲ್ಲದೇ ತೊಂದರೆ ಆಗಿದ್ದು, ದಯವಿಟ್ಟು ಸಹಾಯ ಮಾಡುವಂತೆ ಮಾಡಿದ ಮಗಳ ಕೋರಿಕೆಗೆ ಫಲ ಸಿಕ್ಕಿದ್ದು, ಮನೆಗೆ ಅಗತ್ಯ ಸಾಮಗ್ರಿ ದೊರೆತಿದೆ.

Advertisement

ಮುಮ್ಮಿಗಟ್ಟಿ ಗ್ರಾಮದ ಟೋಪೋಜಿ ದೇವರ್‌ ಅವರು ಕೊರೊನಾ ಸೋಂಕಿತರಾಗಿ ಹುಬ್ಬಳ್ಳಿಯ ಕಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹೆಂಡತಿಯೂ ಅವರಿಗೆ ಆಸರೆಯಾಗಿ ಹುಬ್ಬಳ್ಳಿ ಕಿಮ್ಸನಲ್ಲಿಯೇ ಇದ್ದಾರೆ. ಇವರಿಗೆ ಇಬ್ಬರು ಮಕ್ಕಳಿದ್ದು, ಮುಮ್ಮಿಗಟ್ಟಿ ಮನೆಯಲ್ಲಿ ಇದ್ದಾರೆ. ಗ್ರಾಮದಲ್ಲಿ ಇವರಿಗೆ ಯಾರೂ ಸಂಬಂಧಿಕರಿಲ್ಲ. ವಿಕಲಚೇತನರಾಗಿರುವ 14 ವರ್ಷದ ಮಗಳು ಕವಿತಾ, ಮನೆಯ ಮುಖ್ಯಸ್ಥರಿಬ್ಬರು ಆಸ್ಪತ್ರೆಯಲ್ಲಿರುವುದರಿಂದ ಮಕ್ಕಳಿಗೆ ಊಟ, ಉಪಹಾರಕ್ಕೆ ದಿನಸಿ, ತರಕಾರಿ ಮತ್ತು ಆಹಾರ ಸಾಮಗ್ರಿಗಳ ಕೊರತೆ ಉಂಟಾಗಿದೆ. ದಯವಿಟ್ಟು ಸಹಾಯ ಮಾಡುವಂತೆ ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಿ ಕೋರಿದ್ದಳು. ಇದಕ್ಕೆ ತಕ್ಷಣ ಸ್ಪಂದಿಸಿದ ಮುಮ್ಮಿಗಟ್ಟಿ ಗ್ರಾಪಂ ಕೋವಿಡ್‌ ಕಾರ್ಯಪಡೆ ಅಗತ್ಯವಿರುವ ದಿನಸಿ, ತರಕಾರಿ, ಆಹಾರ ಸಾಮಗ್ರಿಗಳನ್ನು ಪೂರೈಸಲು ಕ್ರಮ ಕೈಗೊಂಡಿದೆ.

ತಹಶೀಲ್ದಾರ್‌ ಸಂತೋಷ ಬಿರಾದಾರ ಹಾಗೂ ತಾಪಂ ಇಒ ಎಸ್‌.ಎಸ್‌. ಖಾದ್ರೋಳಿ ಅವರ ನಿರ್ದೇಶನದ ಮೇರೆಗೆ ಟೋಪೋಜಿ ದೇವರ್‌ ಅವರ ಮನೆಗೆ ಪಿಡಿಒ ಜಿ.ಎನ್‌.ಗಣಾಚಾರಿ, ಗ್ರಾಮ ಲೆಕ್ಕಾ ಧಿಕಾರಿ ಬಸವರಾಜ ಕುಲಾವಿ ಹಾಗೂ ಗ್ರಾಪಂ ಕಾರ್ಯಪಡೆಯ ಸದಸ್ಯರು ಭೇಟಿ ನೀಡಿ ಅವಶ್ಯಕ ದಿನಸಿ, ಆಹಾರ ಸಾಮಗ್ರಿ ಮತ್ತು ತರಕಾರಿ ಪೂರೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next