ಹೊಸದಿಲ್ಲಿ: ಕೋವಿಡ್ ಸೋಂಕಿನ ಅತ್ಯಂತ ವೇಗವಾಗಿ ಹರಡಬಲ್ಲಂಥ ಉಪ ತಳಿ ಜೆಎನ್.1 ಈಗ ದೇಶಕ್ಕೂ ಲಗ್ಗೆಯಿಟ್ಟಿದೆ. ಕೇರಳದಲ್ಲಿ ಡಿ. 8ರಂದು ಈ ತಳಿ ಪತ್ತೆಯಾಗಿದ್ದು, 79 ವರ್ಷದ ವೃದ್ಧೆಗೆ ಸೋಂಕು ದೃಢಪಟ್ಟಿದೆ. ಇದು ದೇಶದಲ್ಲಿ ಪತ್ತೆಯಾದ ಮೊದಲ ಜೆಎನ್. 1 ಪ್ರಕರಣವಾಗಿದೆ.
ಈ ವೃದ್ಧೆಯಲ್ಲಿ ನೆಗಡಿ, ಜ್ವರದ ಲಕ್ಷಣಗಳು ಕಂಡುಬಂದಿದ್ದವು. ಸದ್ಯ ಅವರು ಕೊರೊನಾದಿಂದ ಗುಣಮುಖರಾಗಿದ್ದಾರೆ. ಈ ಹಿಂದೆ ಸಿಂಗಾಪುರದಲ್ಲಿ ಅ. 25ರಂದು ಭಾರತೀಯ ಪ್ರವಾಸಿಗನಲ್ಲಿ ಜೆಎನ್.1 ಪತ್ತೆಯಾಗಿತ್ತು.
ತಮಿಳುನಾಡಿನ ಈ ವ್ಯಕ್ತಿ ಸಿಂಗಾಪುರಕ್ಕೆ ಪ್ರವಾಸ ಹೋಗಿದ್ದರು. ಈ ತಳಿ ವೇಗವಾಗಿ ವ್ಯಾಪಿಸುತ್ತದೆಯಾದರೂ ಸೋಂಕಿನ ತೀವ್ರತೆಯ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ ಎಂದು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ (ಸಿಡಿಸಿ) ಹೇಳಿದೆ.
ಏನಿದು ಜೆಎನ್.1?
-ಇದು ಕೊರೊನಾದ ಪಿರೋಲಾ ರೂಪಾಂತರದ (ಒಮಿಕ್ರಾನ್‌ನ ಉಪ ತಳಿ ಬಿಎ.2.86) ಉಪ ತಳಿ.
-ಅತ್ಯಂತ ವೇಗವಾಗಿ ಹಬ್ಬುವ ಮತ್ತು ಪ್ರತಿರಕ್ಷಣೆಯಿಂದ ತಪ್ಪಿಸಿಕೊಳ್ಳುತ್ತದೆ.
-ಕೊರೊನಾದ ಸಾಮಾನ್ಯ ರೋಗಲಕ್ಷಣಗಳನ್ನೇ ಹೊಂದಿದೆ.