ಬೆಂಗಳೂರು: ಅದು ಮೊದಲನೇಅಲೆಯ ಸಮಯ.ನಾವು ಮನೆಯಲ್ಲೇ ಇದ್ದೆವು. ಬಿಬಿಎಂಪಿ ಆರೋಗ್ಯಇಲಾಖೆ ಸಿಬ್ಬಂದಿ ಒಂದು ದಿನ ಮನೆಯವರನ್ನೆಲ್ಲಾ ಪರೀಕ್ಷೆ ಮಾಡಿದರು. ಎಲ್ಲರಿಗೂ ಸೋಂಕಿನ ಲಕ್ಷಣ ಇದೆ ಎಂದು ಹೇಳಿದರು.
ಈ ಮಾತಿನಿಂದಮನೆಮಂದಿಗೆಲ್ಲಾ ಆತಂಕ ಸೃಷ್ಟಿಯಾಯಿತು.ನನ್ನ ಮಗ, ಸೊಸೆ, ನಾದಿನಿ ಎಲ್ಲರೂ ಕೆಲವು ದಿನಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ನಿರ್ಧರಿಸಿದೆವು.ಹತ್ತು ದಿನ ಆರೈಕೆ ಬಳಿಕ ಸೋಂಕಿನಿಂದ ಮುಕ್ತವಾದೆವು ಎನ್ನುತ್ತಾರೆ ಗೃಹಿಣಿ ಶಬಿತಾ.ನಮ್ಮ ಮನೆ ಮಲ್ಲೇಶ್ವರ ರೈಲ್ವೆ ನಿಲ್ದಾಣದ ಬಳಿಯಿದೆ.
ನಾನು ಶಬಿತಾ(82), ನಾದಿನಿ ಕನ್ಯಾಕುಮಾರಿ (75), ಮಗ ಸತೀಶ್(58) ಮತ್ತು ಸೊಸೆ ನಂದಿನಿ(43) ಸೇರಿದಂತೆ ಮಕ್ಕಳು-ಮೊಮ್ಮಕ್ಕಳೂ ಇದ್ದಾರೆ. ಕೊರೊನಾ ಕಾಣಿಸಿಕೊಂಡಾಗ ನಾವು ಜಾಗರೂಕತೆಯಿಂದಲೇ ಇದ್ದೆವು.ಆದರೂ ಸೋಂಕು ದೃಢವಾಗಿದೆ ಎಂದು ಆರೋಗ್ಯ ಸಿಬ್ಬಂದಿ ಹೇಳಿದಾಗ ಮನೆಯಲ್ಲಿರುವ ಎಲರಲ್ಲೂ ಆತಂಕ ಎದುರಾಯಿತು. ನಾವುನಾಲ್ಕು ಮಂದಿ ಹೊರತು ಪಡಿಸಿ ಮಿಕ್ಕವರನ್ನು ಬೇರೆ ಕಡೆಗೆ ಕಳುಹಿಸಿ, ಈಗಿರುವ ಮನೆಯನ್ನು ಸ್ಯಾನಿಟೈಸ್ ಮಾಡಿಸಿದೆವು. ಎಲ್ಲರೂ ಹತ್ತು ದಿನಗಳಕಾಲ ಮನೆಯನ್ನು ಬಿಟ್ಟುದೇವನಹಳ್ಳಿ ಬಳಿಯಿರುವ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದೆವು. ಅಲ್ಲಿ ವೈದ್ಯರುಪಿಪಿಇ ಕಿಟ್ ಧರಿಸಿ ನಮಗೆ ಉಚಿತವಾಗಿ ಔಷಧ ನೀಡುತ್ತಿದ್ದರು.
ಐದು ದಿನಗಳಕಾಲಆ್ಯಂಟಿಬಯೋಟಿಕ್ ಮಾತ್ರೆಗಳು ಇನ್ನುಳಿದ ಐದುದಿನ ರೋಗನಿರೋಧಕ ಶಕ್ತಿ ವೃದ್ಧಿಸುವ ಮಾತ್ರೆಗಳನ್ನುನೀಡಿದರು. ಸಮಯಕ್ಕೆ ಸರಿಯಾಗಿ ಊಟ-ತಿಂಡಿ,ಹಣ್ಣು ನೀಡುತ್ತಿದ್ದರು. ವಸತಿ ವ್ಯವಸ್ಥೆಯೂಉತ್ತಮವಾಗಿತ್ತು. ಸುಸ್ತು ಆಯಾಸವೆಲ್ಲಾಪರಿಹಾರವಾಗಿ ಸೋಂಕು ಮುಕ್ತರಾದೆವು.
ವೈದ್ಯರಿಗೆ ಅಭಿನಂದನೆ: ಆಸ್ಪತ್ರೆಯಲ್ಲಿ ಪ್ರತಿದಿನವೂಬೇರೆ ಬೇರೆ ವೈದ್ಯರು ಹಾಜರಾಗಿ ಕೋವಿಡ್-19ಕುರಿತು ಮಾಹಿತಿ ನೀಡುತ್ತಿದ್ದರು. ಜತೆಗೆ ಸೋಂಕಿನ ಲಕ್ಷಣವಿರುವವರು ಮಾಡಿಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳಿಸಿದರು. ನಮ್ಮಲ್ಲಿದ್ದ ಆತಂಕ ದೂರ ಮಾಡಿದರು. ಆ ಹತ್ತುದಿನದಲ್ಲಿ ಕೊರೊನಾ ದಿಂದ ಅನೇಕ ಮಂದಿ ಆಸ್ಪತ್ರೆ,ಕೇರ್ ಸೆಂಟರ್‌ಗಳಿಗೆ ಸೇರುತ್ತಿದ್ದರು. ನಾವೇ ಶೀಘ್ರ ಗುಣಮುಖರಾಗಿ ಹೊರ ಬಂದೆವು. ಈಗ 2ನೇ ಅಲೆ ವೇಳೆಗೆ ಲಸಿಕೆ ಪಡೆದು ಆರೋಗ್ಯದಿಂದಿದ್ದೇವೆ. ಜಾಗೃತಿ ಮೂಡಿಸಿದ ಆರೈಕೆ ಮಾಡಿದ ವೈದ್ಯರುಹಾಗೂ ನರ್ಸ್‌ಗಳಿಗೆಲ್ಲರಿಗೂ ನನ್ನ ಸಲಾಮ್.
ಶಬಿತಾ, ಗೃಹಿಣಿ