Advertisement

ಸಹಕಾರದಿಂದಲೇ ಕೋವಿಡ್ ಗೆ ತಡೆ

12:09 PM May 06, 2020 | mahesh |

ಪಿರಿಯಾಪಟ್ಟಣ: ತಾಲೂಕಿನ ಜಿಲ್ಲಾ ಗಡಿ ಭಾಗವಾದ ಹಲಗನಹಳ್ಳಿ ಹಾಗೂ ಕೊಪ್ಪ ಗ್ರಾಮಗಳಲ್ಲಿನ ಚೆಕ್‌ಪೋಸ್ಟ್‌ಗೆ ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿ, ಹೊರ ರಾಜ್ಯ, ಜಿಲ್ಲೆಗಳಿಂದ ಸಂಚಾರ ಮಾಡುವವರನ್ನು ತಪಾಸಣೆ ಮಾಡಬೇಕು. ಜಿಲ್ಲೆ ಕೆಂಪು ವಲಯದಲ್ಲಿದ್ದು, ಎಲ್ಲರ ಸಹಕಾರದಿಂದ ಕೋವಿಡ್ ತಡೆ ಸಾಧ್ಯ ಎಂದರು. ಜಿಲ್ಲಾ ಗಡಿಭಾಗ ಹೊರತುಪಡಿಸಿ, ಬೇರೆ ಕಡೆಯಿಂದ ಜಿಲ್ಲೆಗೆ ಸಂಚಾರ ಮಾಡುವವರ ಮೇಲೆ ನಿಗಾವಹಿಸಿಬೇಕು.

Advertisement

ಅಂತಹ ಸ್ಥಳಗಳಲ್ಲಿ ಪೊಲೀಸ್‌ ಹಾಗೂ ಆರೋಗ್ಯ ಅಧಿಕಾರಿಗಳು ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಎಂದ  ಅವರು, ತಾಲೂಕು ಆಡಳಿತ ಅಧಿಕಾರಿಗಳಿಂದ ಮಾಹಿತಿ ಪಡೆದರು. ಹಲನಗನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನರ್ಸ್‌ ಅವಶ್ಯವಿದೆ ಎಂದು ಅಲ್ಲಿನ ವೈದ್ಯಾಧಿಕಾರಿ ಡಾ.ಶೋಭ ಅವರು ಡೀಸಿ ಗಮನಕ್ಕೆ ತಂದಾಗ, ಶೀಘ್ರದಲ್ಲಿ ಸಮಸ್ಯೆ ಪರಿಹರಿಸುವುದಾಗಿ ತಿಳಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್‌, ಜಿಪಂ ಸಿಇಒ ಪ್ರಶಾಂತ್‌ ಕುಮಾರ್‌ ಮಿಶ್ರಾ, ಹುಣಸೂರು ಉಪವಿಭಾಗಧಿಕಾರಿ ಬಿ.ಎನ್‌.ವೀಣಾ, ಡಿವೈಎಸ್‌ಪಿ ಸುಂದರ್‌ ರಾಜ್‌, ತಹಶೀಲ್ದಾರ್‌ ಶ್ವೇತಾ ಎನ್‌ ರವೀಂದ್ರ, ವೃತ್ತ ನಿರೀಕ್ಷಕ ಪ್ರದೀಪ್‌, ತಾಪಂನ ರಘುನಾಥ್, ಬೆಟ್ಟದಪುರ ಪೊಲೀಸ್‌ ಠಾಣಾಧಿಕಾರಿ ಲೋಕೇಶ್‌, ಉಪ ತಹಶೀಲ್ದಾರ್‌ ಶಶಿಧರ್‌, ಪಿಡಿಒ ಅಬಿಅಹ್ಮದ್‌, ಕಂದಾಯ ನಿರೀಕ್ಷಕ ಪ್ರದೀಪ್‌, ತಾಲೂಕು ಭೋವಿ ಸಮಾಜದ ಅಧ್ಯಕ್ಷ ಎನ್‌.ಟಿ ರವಿಕುಮಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next