ಬೆಂಗಳೂರು:ರಾಜ್ಯ ಸರ್ಕಾರವು ಕೊರೊನಾ ಬಗ್ಗೆ ಬೋಗಸ್ ಅಂಕಿ-ಅಂಶಗಳ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದೆ. ಇವರಿಗೆ ಬೇಕಾದಂತೆ ತೀರ್ಮಾನ ಕೈಗೊಳ್ಳಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಸರ್ಕಾರವು ನೀಡುತ್ತಿರುವ ಎಲ್ಲವೂ ಬೋಗಸ್ ಅಂಕಿ ಅಂಶಗಳು. ಸರ್ಕಾರ ನಿರ್ಬಂಧ ಹೇರಿದಾಗ ಕೋವಿಡ್ ಸೋಂಕಿನ ಪ್ರಮಾಣ ಎಷ್ಟಿತು. ಈಗ ಎಷ್ಟಿದೆ, ಇದೆಲ್ಲವೂ ಪಾದಯಾತ್ರೆ ನಿಲ್ಲಿಸಲು ಸೃಷ್ಟಿಸಿರುವ ಅಂಕಿ-ಅಂಶಗಳು ಎಂದು ದೂರಿದರು.
ಮೇಕೆದಾಟು ಪಾದಯಾತ್ರೆಗೆ ನಿಯೋಜಿತರಾಗಿದ್ದ ಪೊಲೀಸರ ಪೈಕಿ 85 ಮಂದಿಗೆ ಕೋವಿಡ್ ಸೋಂಕು ತಗುಲಿದೆ, ಇದಕ್ಕೆ ಕಾಂಗ್ರೆಸ್ ಹೊಣೆ ಎನ್ನುತ್ತಾರೆ. ಸಚಿವರು ಈಗೇಕೆ ಮಾತನಾಡುತ್ತಿದ್ದಾರೆ, ಪಾದಯಾತ್ರೆ ವಿಡಿಯೋಗಳನ್ನು ತೆಗೆದುಕೊಂಡು ನೋಡಿ ಯಾವುದೇ ಪೊಲೀಸ್ ಅಧಿಕಾರಿಗಳು ನಮ್ಮ ಪಾದಯಾತ್ರೆ ಸಮಯದಲ್ಲಿ ಕರ್ತವ್ಯದಲ್ಲಿರಲಿಲ್ಲ. ಯಾರೊಬ್ಬರೂ ನಮ್ಮ ಬೆಂಬಲಕ್ಕೆ, ಸಹಾಯಕ್ಕೆ ಬರಲಿಲ್ಲ ಎಂದು ಹೇಳಿದರು.
ಇದನ್ನೂ ಓದಿ:ಸುಲೇಮಾನ್ ಸ್ಟೋನ್ ಹೆಸರಿನಲ್ಲಿ ವಂಚನೆ :ಬಾಗಲಕೋಟೆಯಲ್ಲಿ 5 ಲಕ್ಷ ಜಪ್ತಿ