ಹೊಸದಿಲ್ಲಿ: ಕೋವಿಡ್ ಎರಡನೇ ಅಲೆ ಜುಲೈ ವೇಳೆಗೆ ನಿಯಂತ್ರಣಕ್ಕೆ ಬರಲಿದೆ ಎಂದು ಕೇಂದ್ರ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ನೇಮಿಸಿರುವ ಸಮಿತಿ ತಿಳಿಸಿದೆ.
ಇದರ ಜತೆಗೆ ಇನ್ನು 6-8 ತಿಂಗಳ ಅವಧಿಯಲ್ಲಿ 3ನೇ ಅಲೆ ಅಪ್ಪಳಿಸಲಿದೆ. ಇದೇ ಅವಧಿಯಲ್ಲಿ ದೇಶವಾಸಿಗಳಿಗೆ 2 ಬಾರಿ ಲಸಿಕೆ ಹಾಕಿಸಿಕೊಂಡಲ್ಲಿ ಶೇ.99ರಷ್ಟು ಆತಂಕಪಡುವ ಅಗತ್ಯವಿಲ್ಲ.
ಇದನ್ನೂ ಓದಿ:ಗುಜರಾತ್‌ಗೆ 1 ಸಾವಿರ ಕೋಟಿ ಪರಿಹಾರ : ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ಮೋದಿ
ಸಮಿತಿಯ ಪ್ರಕಾರ ಮಾಸಾಂತ್ಯಕ್ಕೆ ದಿನವಹಿ ಹೊಸ ಪ್ರಕರಣಗಳ ಸಂಖ್ಯೆ 1.5 ಲಕ್ಷಕ್ಕೆ ಕುಸಿಯಲಿದೆ. ಜೂನ್ ಅಂತ್ಯದೊಳಗೆ ದಿನವಹಿ 20,000 ಪ್ರಕರಣಗಳಿಗೆ ಕುಸಿತವಾಗಲಿದೆ. ಇದನ್ನು “ಸೂತ್ರ’ (ಸಸ್‌ಸೆಪ್ಟಿಬಲ್, ಅನ್ ಡಿಟೆಕ್ಟೆಡ್, ಟೆಸ್ಟೆಡ್ ಪಾಸಿಟಿವ್, ರಿಮೂವ್x ಅಪ್ರೋಚ್)ಮಾದರಿಯನ್ನು ಅನುಸರಿಸಿ ಲೆಕ್ಕಾಚಾರ ಮಾಡಲಾಗಿದೆ. ಆದರೆ ಎರಡನೇ ಅಲೆಯ ಗುಣಲಕ್ಷಣಗಳನ್ನು ವಿಜ್ಞಾನಿಗಳಿಗೆ ಪಕ್ಕಾ ಅಂದಾಜಿಸಲು ಆಗಿಲ್ಲ
ಯಾವ ರಾಜ್ಯಗಳು ಎಚ್ಚರವಾಗಿರಬೇಕು?: ಈಗಾಗಲೇ ಕರ್ನಾಟಕ, ಉತ್ತರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ಝಾರ್ಖಂಡ್, ರಾಜಸ್ಥಾನ, ಕೇರಳ, ಸಿಕ್ಕಿಂ, ಉತ್ತರಾಖಂಡ, ಗುಜರಾತ್, ಹರಿಯಾಣ, ದಿಲ್ಲಿ, ಗೋವಾದಲ್ಲಿ ಕೊರೊನಾ ತೀವ್ರ ಪ್ರಮಾಣಕ್ಕೇರಿದೆ. ಮುಂದಿನ ದಿನಗಳಲ್ಲಿ ತಮಿಳುನಾಡು, ಪುದುಚೆರಿ, ಅಸ್ಸಾಂ, ಮೇಘಾಲಯ, ತ್ರಿಪುರದಲ್ಲಿ ಕೊರೊನಾ ತೀವ್ರಗೊಳ್ಳುವ ನಿರೀಕ್ಷೆಯಿದೆ