Advertisement
ಜಿಲ್ಲೆಯಲ್ಲಿ 370 ಬೆಡ್‌ಗಳ ವ್ಯವಸ್ಥೆ ಹಾಗೂ ಅಗತ್ಯ ಪ್ರಮಾಣದಲ್ಲಿ ಔಷಧದಾಸ್ತಾನು ಮಾಡಿಕೊಳ್ಳುವ ಮೂಲಕ ಸೋಂಕಿನ ವಿರುದ್ಧ ಮತ್ತೂಮ್ಮೆ ಸಮರಕ್ಕೆ ಸಿದ್ಧವಾಗಿದೆ.
Related Articles
Advertisement
ತಾಲೂಕು ಆಸ್ಪತ್ರೆಗಳು ಅಪ್‌ಗ್ರೆಡ್: ಕೋವಿಡ್ ಮೊದಲ ಹಂತದಲ್ಲಿ ಚಿಕಿತ್ಸೆ ನೀಡುವಲ್ಲಿ ಉಂಟಾದ ತೊಡಕುಗಳನ್ನು ಅವಲೋಕಿಸಿದ ಜಿಲ್ಲಾಡಳಿತ ಜಿಲ್ಲೆಯ ತಾಲೂಕು ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸಿದೆ. ಜಿಮ್ಸ್ ಆವರಣದಲ್ಲಿರುವ 100 ಹಾಸಿಗೆಗಳ ಆಯುಷ್‌ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೋವಿಡ್ ಚಿಕಿತ್ಸೆಗೆ ಮೀಸಲಿಡಲಾಗಿದೆ. ಸೋಂಕಿತರ ಚಿಕಿತ್ಸೆಗಾಗಿ ಸದ್ಯಕ್ಕೆ ಒಟ್ಟು 370 ಬೆಡ್‌ಗಳನ್ನು ಮೀಸಲಿಟ್ಟಿದೆ. ಈ ಪೈಕಿ 117 ಸಾಮಾನ್ಯ ಬೆಡ್, 200 ಆಕ್ಸಿಜನ್ ಬೆಡ್, ಐಸಿಯು ವೆಂಟಿಲೇಟರ್ ಸಹಿತ 53 ಬೆಡ್‌ಗಳನ್ನು ವ್ಯವಸ್ಥೆ ಮಾಡಿದೆ.
ಅದರಲ್ಲಿ ಮುಂಡರಗಿ, ರೋಣ, ನರಗುಂದ ತಾಲೂಕು ಆಸ್ಪತ್ರೆಗಳಿಗೆ ತಲಾ 50 ಆಕ್ಸಿಜನ್ ಬೆಡ್‌ಗಳನ್ನು ಒದಗಿಸಿದೆ. ಶಿರಹಟ್ಟಿ 30, ಲಕ್ಷ್ಮೇಶ್ವರ ಮತ್ತು ಗಜೇಂದ್ರಗಡದಲ್ಲಿ ತಲಾ 10 ಆಕ್ಸಿಜನ್‌ಬೆಡ್ ಸೇರಿದಂತೆ ತಕ್ಷಣಕ್ಕೆ 370 ಬೆಡ್ ಗಳನ್ನು ವ್ಯವಸ್ಥೆ ಮಾಡಲಾಗಿದೆ. ಮೊದಲಗಿಂತ ಈಗಆಸ್ಪತ್ರೆಗಳಲ್ಲಿ ವೈದ್ಯಕೀಯ ಉಪಕರಣ ಮತ್ತಿತರೆ ಸೌಲಭ್ಯಗಳನ್ನು ದ್ವಿಗುಣಗೊಳಿಸಲಾಗಿದೆ ಎನ್ನುತ್ತಾರೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ|ಸತೀಶ ಬಸರೀಗಿಡದ.
ಖಾಸಗಿ ಆಸ್ಪತ್ರೆಗಳ ಸಾಥ್: ಆರೋಗ್ಯ ಸುರಕ್ಷಾ ಯೋಜನೆಯಡಿ ನೋಂದಾಯಿಸಿಕೊಂಡಿರುವಆಸ್ಪತ್ರೆಗಳೂ ಕೋವಿಡ್ ಚಿಕಿತ್ಸೆಗೆ ಮುಂದಾಗಿದೆ.ಆ ಪೈಕಿ ನಗರದ ಎನ್.ಬಿ.ಪಾಟೀಲ, ಬೆಟಗೇರಿಯ ಸಿಎಸ್‌ಐ, ಚಿರಾಯು, ಮಹಾತ್ಮಗಾಂಧಿ ಆಸ್ಪತ್ರೆ,ಸ್ಪರ್ಶ ಆಸ್ಪತ್ರೆ ಹಾಗೂ ಕೆ.ಎಚ್.ಪಾಟೀಲ ಆಸ್ಪತ್ರೆಗಳೂ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಮುಂದೆಬಂದಿದ್ದು, ಯಾವುದೇ ಪರಿಸ್ಥಿತಿ ಎದುರಾದರೂಕೈಜೋಡಿಸುವುದಾಗಿ ಜಿಲ್ಲಾಡಳಿತಕ್ಕೆ ಅಭಯ ನೀಡಿವೆ.
ಜಿಲ್ಲೆಯಲ್ಲಿ 93 ಕೋವಿಡ್ ಪ್ರಕರಣಗಳು ಸಕ್ರಿಯವಾಗಿವೆ.ಸೋಂಕು ಅಸಿಮrಮಿಟಿಕ್ ಇದ್ದು, ಬಹುತೇಕರುಹೋಂ ಐಸೋಲೇಷನ್‌ನಲ್ಲಿದ್ದಾರೆ. ಆದರೂ, ಮುಂಜಾಗ್ರತಾ ಕ್ರಮವಾಗಿ ಅಗತ್ಯ ಸಿದ್ಧತೆಗಳನ್ನುಮಾಡಿಕೊಳ್ಳಲಾಗಿದ್ದು, ತಕ್ಷಣಕ್ಕೆ 370 ಬೆಡ್‌ಗಳು ಲಭ್ಯವಿದೆ. ಔಷಧ, ಸಿಬ್ಬಂದಿಗೆ ಯಾವುದೇಕೊರತೆಯಿಲ್ಲ. ಆದರೂ, ಸಾರ್ವಜನಿಕರು ಕೋವಿಡ್-19ರ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ, ಕೋವಿಡ್ ನಿರ್ಮೂಲನೆಗೆ ಕೈಜೋಡಿಸಬೇಕು ಎಂದು ಮನವಿ ಮಾಡುತ್ತೇನೆ. – ಎಂ.ಸುಂದರೇಶ ಬಾಬು, ಜಿಲ್ಲಾಧಿಕಾರಿ
–ವೀರೇಂದ್ರ ನಾಗಲದಿನ್ನಿ