Advertisement
ಕೊರೊನಾ ಲಸಿಕೆಯ ಮೊದಲ ಡೋಸ್ ಪಡೆದವರಿಗೆ 28 ದಿನಗಳ ಅನಂತರ ಎರಡನೇ ಡೋಸ್ ನೀಡಲಾಗುತ್ತದೆ. ಮೊದಲ ಡೋಸ್ ಜ. 16ಕ್ಕೆ ನೀಡಿದ್ದು, ಫೆ. 14ರಿಂದ ಎರಡನೇ ಡೋಸ್ ನೀಡಬೇಕಿತ್ತು. ಆದರೆ ಸೋಮವಾರದಿಂದ ರಾಜ್ಯದಲ್ಲಿ ಎರಡನೇ ಡೋಸ್ ನೀಡಲಾಗುತ್ತದೆ.
ಮೊದಲ ಡೋಸ್ ಪಡೆದ 29ನೇ ದಿನಕ್ಕೆ ಎರಡನೇ ಡೋಸ್ ಪಡೆಯಬೇಕೆಂದಿಲ್ಲ. ಒಂದೆರಡು ದಿನ ವ್ಯತ್ಯಾಸವಾದರೂ ತೊಂದರೆಯಾಗುವುದಿಲ್ಲ. ಆದರೆ ಮೊದಲ ಡೋಸ್ ಪಡೆದವರು ಎರಡನೇ ಡೋಸ್ ಪಡೆಯುವುದು ಕಡ್ಡಾಯ. ಇಲ್ಲದಿದ್ದರೆ ರೋಗ ಪ್ರತಿಕಾಯಗಳು ಉತ್ಪತ್ತಿಯಾಗುವುದಿಲ್ಲ ಎಂದು ಆರೋಗ್ಯ ಇಲಾಖೆಯ ಉಪ ನಿರ್ದೇಶಕಿ ಡಾ| ಬಿ.ಎನ್. ರಜನಿ ತಿಳಿಸಿದ್ದಾರೆ.