Advertisement

ಉಡುಪಿ : ಎರಡನೇ ಲಸಿಕೆ ಪಡೆಯುವವರಿಗೆ ಜಿಲ್ಲಾಡಳಿತದಿಂದ ಎಸ್‌ಎಂಎಸ್‌

08:56 PM May 12, 2021 | Team Udayavani |

ಉಡುಪಿ: ನಗರದ ಲಸಿಕಾ ಕೇಂದ್ರಗಳಿಗೆ ಬಂದು ಸರದಿ ಸಾಲಿನಲ್ಲಿ ನಿಂತು ಟೋಕನ್‌ ಪಡೆಯುವ ಅನಾನುಕೂಲತೆಯನ್ನು ತಪ್ಪಿಸಲು ಮೊದಲ ಡೋಸ್‌ ಪಡೆದ ದಿನಾಂಕದ ಜೇಷ್ಠತೆ ಆಧಾರದಲ್ಲಿ ಅರ್ಹ ವ್ಯಕ್ತಿಗಳಿಗೆ ಜಿಲ್ಲಾಡಳಿತದಿಂದ ಮುಂಚಿನ ದಿನವೇ ಸಂದೇಶ ಕಳುಹಿಸಿ ಲಸಿಕೆ ಪಡೆಯಲು ತಿಳಿಸಲಾಗುತ್ತದೆ.

Advertisement

ನಗರದಲ್ಲಿರುವ ಸೈಂಟ್‌ ಸಿಸಿಲೀಸ್‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಲಸಿಕಾ ಕೇಂದ್ರದಲ್ಲಿ 100 ಡೋಸ್‌, ಮಣಿಪಾಲದ ವೇಣುಗೋಪಾಲದ ಸಮೀಪದ ನಗರ ಆರೋಗ್ಯ ಕೇಂದ್ರದಲ್ಲಿ 70 ಡೋಸ್‌ ಲಸಿಕೆಯನ್ನು ಮೇ 13ರ ಬೆಳಗ್ಗೆ 10ರಿಂದ ಸಂಜೆ 4ರೊಳಗೆ ನೀಡಲಾಗುವುದು.

ಎರಡನೇ ಡೋಸ್‌ ಲಸಿಕೆ ಪಡೆಯುವ ಬಗ್ಗೆ ಸಂದೇಶ ಸಿಕ್ಕವರು ದಾಖಲೆಯೊಂದಿಗೆ ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆಯನ್ನು ಪಡೆಯುವುದು. ಮುಂದೆ ಲಸಿಕೆಗಳು ಸರಬರಾಜಾದಂತೆ ಜೇಷ್ಠತೆಯ ಆಧಾರದಲ್ಲಿ ಸಂದೇಶ ಕಳುಹಿಸಲಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ :ಶಿವಮೊಗ್ಗ : ಕೋವಿಡ್ ಸೋಂಕಿಗೆ ಜಿಲ್ಲೆಯಲ್ಲಿ ಒಂದೇ ದಿನ 26 ಮಂದಿ ಸಾವು

Advertisement

Udayavani is now on Telegram. Click here to join our channel and stay updated with the latest news.

Next