ಕಾರ್ಕಳ: ಕಾರ್ಕಳ ತಾಲೂಕಿನ ದುರ್ಗ ಗ್ರಾಮ ಪಂಚಾಯತ್ ವ್ಯಾಪ್ತಿಯ ತೆಳ್ಳಾರ್ ಜಾಮೀಯ ಮಸೀದಿಯಲ್ಲಿ ಸರಕಾರದ ಕೋವಿಡ್ ನಿಯಮ ಉಲ್ಲಂಘಿಸಿ ಕೆಲವು ಮುಸ್ಲಿಂ ಸಮುದಾಯದವರು ಬೆಳಗ್ಗೆ ನಮಾಜ್ ಪ್ರಾರ್ಥನೆ ಸಲ್ಲಿಸಿರುವ ಘಟನೆ ರಂಜಾನ್ ದಿನ ಶುಕ್ರವಾರ(ಮೇ. 14)ದಂದು ನಡೆದಿದೆ ಎನ್ನಲಾಗಿದೆ.
ಇದನ್ನೂ ಓದಿ : ಬಿಜೆಪಿಗೆ ನ್ಯಾಯಾಂಗದ ಗೌರವದ ಬಗ್ಗೆ ಯಾರೂ ಪಾಠ ಹೇಳಿಕೊಡಬೇಕಾಗಿಲ್ಲ : ಸಿ ಟಿ ರವಿ
ಈ ಕುರಿತು ಗ್ರಾಮಾಂತರ ಠಾಣೆ ಪೊಲೀಸರಿಗೆ ಮಾಹಿತಿ ದೊರಕಿದ್ದು ಮಾಹಿತಿ ಆಧಾರದ ಮೇಲೆ ಮಸೀದಿ ಬಳಿ ಪೊಲೀಸ್ ಬಿಗು ಬಂದೊಬಸ್ತ್ ಒದಗಿಸಲಾಗಿದೆ. ಸುಮಾರು 25 ರಷ್ಟು ಮಂದಿ ಮಸೀದಿಯಲ್ಲಿ ನಮಾಜ್ ನೆರವೇರಿಸಿದ್ದರೆಂದು ಹೇಳಲಾಗುತ್ತಿದ್ದು, ಪೊಲೀಸರು ಆಗಮಿಸುತಿದ್ದಂತೆ ಮಸೀದಿ ಬಳಿಯಿಂದ ಕೆಲವರು ಪರಾರಿಯಾಗಿದ್ದಾರೆ ಎಂದು ಸ್ಥಳಿಯ ಮೂಲಗಳು ಮಾಹಿತಿ ನೀಡಿವೆ.
ಈ ಹಿನ್ನೆಲೆಯಲ್ಲಿ ಅಹಿತಕರ ಘಟನೆ ನಡೆಯದಂತೆ ಸ್ಥಳದಲ್ಲಿ ಪೊಲೀಸರ ನಿಯೋಜನೆಯಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಉಡುಪಿ: ವಿಪರೀತ ಕಡಲ್ಕೊರೆತ; ಅಪಾಯದ ಅಂಚಿನಲ್ಲಿ ಮೀನುಗಾರರ ಕುಟುಂಬ