Advertisement

ಯುಕೆಯಲ್ಲಿ ರಾತ್ರಿ 10ಕ್ಕೆ ಬಾರ್‌ಗಳು ಬಂದ್‌; ಮತ್ತೆ ನಿರ್ಬಂಧ ಜಾರಿ!

03:56 PM Sep 23, 2020 | Nagendra Trasi |

ಲಂಡನ್‌: ಕೋವಿಡ್ ಮರು ಅಲೆಯ ಆತಂಕದಲ್ಲಿರುವ ಇಂಗ್ಲೆಂಡಿನಲ್ಲಿ ಪಬ್‌ ಮತ್ತು ರೆಸ್ಟಾರೆಂಟ್‌ಗಳನ್ನು ರಾತ್ರಿ 10ಕ್ಕೆ ಕಡ್ಡಾಯವಾಗಿ ಮುಚ್ಚಲು ಸರ್ಕಾರ ಮುಂದಾಗಿದೆ.

Advertisement

ಯುಕೆಯಲ್ಲಿ ಕಳೆದ ವಾರದಿಂದ ನಿತ್ಯ 4 ಸಾವಿರಕ್ಕೂ ಅಧಿಕ ಸೋಂಕು ಪ್ರಕರಣಗಳು ದಾಖಲಾಗುತ್ತಿರುವುದು ಪ್ರಧಾನಿ ಬೋರಿಸ್‌ ಜಾನ್ಸನ್‌ ನೇತೃತ್ವದ ಆಡಳಿತಕ್ಕೆ ತೀವ್ರ ಆತಂಕ ಮೂಡಿಸಿದೆ.

ವೈಜ್ಞಾನಿಕ ಸಲಹೆಗಾರರ ಅಭಿಪ್ರಾಯಕ್ಕೆ ಕಿವಿಗೊಟ್ಟಿರುವ ಸರ್ಕಾರ, ಬಾರ್‌ ಗಳಲ್ಲಿನ ದಟ್ಟಣೆಯನ್ನು ನಿಯಂತ್ರಿಸಲು ಮತ್ತು ನೈಟ್‌ಲೈಫ್ ಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಮಾರ್ಗಸೂಚಿ ಬಿಡುಗಡೆ ಮಾಡಿದೆ.

“ಬಾರ್‌, ಪಬ್‌ಗಳ ಬಾಗಿಲನ್ನು ರಾತ್ರಿ 10ಕ್ಕೆ ಕಡ್ಡಾಯ ಮುಚ್ಚಬೇಕು. ಪಬ್‌ಗಳಲ್ಲಿ ಗ್ರಾಹಕರು 2 ಮೀಟರ್‌ ಅಂತರ ಕಾಪಾಡಿಕೊಳ್ಳದಿದ್ದರೆ 1 ಸಾವಿರ ಡಾಲರ್‌ ದಂಡ ಅಥವಾ ಬಂಧನಕ್ಕೆ ಗುರಿಪಡಿಸಬಹುದು’ ಎಂದು ಸರ್ಕಾರ ಕಟ್ಟಾಜ್ಞೆ ಹೊರಡಿಸಿದೆ.

ಅಲ್ಲದೆ, ಮದುವೆ ಕಾರ್ಯಕ್ರಮ ಗಳಲ್ಲಿ ಪಾಲ್ಗೊಳ್ಳಲು 15 ಅತಿಥಿಗಳಿಗೆ ಮಾತ್ರ ಅವಕಾಶ, ಅಂತ್ಯಸಂಸ್ಕಾರದಲ್ಲಿ 30ಕ್ಕಿಂತ ಹೆಚ್ಚು ಮಂದಿ ಭಾಗಿಯಾಗುವಂತಿಲ್ಲ, ಮಾಸ್ಕ್ ಕಡ್ಡಾಯ ಮತ್ತಿತರ ನಿಯಮಗಳನ್ನೂ ಜಾರಿ ಮಾಡಲಾಗಿದೆ. ಒಳಾಂಗಣ ಕ್ರೀಡೆಗಳಿಗೆ ನಿರ್ಬಂಧ ಹೇರಲಾಗಿದೆ.

Advertisement

ಮುಂದಿನ 6 ತಿಂಗಳು ಈ ನಿರ್ಬಂಧ ಜಾರಿಯಲ್ಲಿರಬಹುದು ಎಂದು ಪ್ರಧಾನಿ ಬೋರಿಸ್‌ ತಿಳಿಸಿದ್ದಾರೆ. “ಬಾರ್‌ಗಳಿಗೆ ಗ್ರಾಹಕರು ಹೆಚ್ಚೆಚ್ಚು ಬರುವುದೇ 10 ಗಂಟೆ ಬಳಿಕ. ರಾತ್ರಿ ವಹಿವಾಟಿನಲ್ಲಿ ಶೇ.60ರಷ್ಟು ಆದಾಯ ಕಾಣುತ್ತೇವೆ’ ಎಂದು ಬಾರ್‌ ಮಾಲೀಕರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಸಾಂಜ್‌ಗೆ ಕೇಳುತ್ತಿದೆಯಂತೆ ಅನಾಮಿಕ ಧ್ವನಿ
ಲಂಡನ್‌: ಬೇಹುಗಾರಿಕೆ ಆರೋಪ ಎದುರಿಸುತ್ತಿರುವ ವಿಕಿಲೀಕ್ಸ್‌ ಸಂಸ್ಥಾಪಕ ಜ್ಯುಲಿಯನ್‌ ಅಸಾಂಜ್‌ಗೆ ಏಕಾಏಕಿ ಸಂಗೀತ ಮತ್ತು ಹಲವು ಧ್ವನಿಗಳು
ಕೇಳಿದಂತಾಗುತ್ತವೆ. ಬ್ರಿಟನ್‌ನ ಕಾರಾಗೃಹದಲ್ಲಿರುವ ಅವರನ್ನು ಸಂದರ್ಶಿಸಿದ ಮನಃಶಾಸ್ತ್ರಜ್ಞ ಮೈಕೆಲ್‌ ಕೋಪ್‌ಮ್ಯಾನ್‌ ಈ ವಿಷಯ ತಿಳಿಸಿದ್ದಾರೆ.

ಸುಮಾರು 20 ಬಾರಿ ಅಸಾಂಜ್‌ ರನ್ನು ಸಂದರ್ಶನ ಮಾಡಿರುವ ಕೋಪ್‌ ಮ್ಯಾನ್‌, “ಅಮೆರಿಕಕ್ಕೆ ಹಸ್ತಾಂತರ ಮಾಡಿದರೆ ಅಸಾಂಜ್‌ ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಇದೆ’ ಎಂದು ಎಚ್ಚರಿಕೆ ನೀಡಿದ್ದಾರೆ. ಅಮೆರಿಕ ವಿರುದ್ಧ ಬೇಹುಗಾರಿಕೆ ನಡೆಸಿದ ಅಸಾಂಜ್‌, ತೀವ್ರ ಖಿನ್ನತೆಯಿಂದ ಬಳಸುತ್ತಿದ್ದಾರೆ ಎಂದು ಓಲ್ಡ್‌ ಬೈಲೆ ಕೋರ್ಟ್ ಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next